ಶ್ರೀ ಆರ್ಯಭಟ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದ ಶಿಕ್ಷಕ ಎನ್ ಸುರೇಶ್
ಶ್ರೀ ಆರ್ಯಭಟ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದ ಎನ್ ಸುರೇಶ್ ಶಿಕ್ಷಕರು ನರಸೀಪುರ ಗ್ರಾಮ ದಾವಣಗೆರೆ ತಾಲೂಕು ಈ ಪ್ರಶಸ್ತಿಯನ್ನು ಇದೇ ಸೆಪ್ಟಂಬರ್ 26 ರಂದು ಧಾರವಾಡದಲ್ಲಿ ನೀಡಿ ಗೌರವಿಸಲಾಯಿತು ಶ್ರೀ ಸರ್ವೇ ಜನ ಆರ್ಟ್ಸ್ ಮತ್ತು ಕಲ್ಚರ್ ಟ್ರಸ್ಟ್ ( ರಿ) ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧಾರವಾಡ ಇವರ ಸಹಭಾಗಿತ್ವದಲ್ಲಿ ಎಸ್ ಎಸ್ ಎ ಸಿಟಿ ಗೋಲ್ಡನ್ ಅವಾರ್ಡ್ಸ್ ಟ್ರಸ್ಟಿನ 9 ನೇ ವಾರ್ಷಿಕೋತ್ಸವದ ಸಾಂಸ್ಕೃತಿಕ ವೈಭವದೊಂದಿಗೆ ಈ ಕಾರ್ಯಕ್ರಮವನ್ನು ಶ್ರೀ ಸಂತೋಷ್ ಹೆಗಡೆ ನಿವೃತ್ತ ನ್ಯಾಯಾಧೀಶರು ಹಾಗೂ ಲೋಕಾಯುಕ್ತ ಬೆಂಗಳೂರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು ಈ ಕಾರ್ಯಕ್ರಮದಲ್ಲಿ ರಾಜ್ಯದ 36 ಜಿಲ್ಲೆಗಳಿಂದ ಒಬ್ಬೊಬ್ಬರಂತೆ ಆಯ್ಕೆ ಮಾಡಿ ಆರ್ಯಭಟ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು ತಾಲೂಕ್ ಮಟ್ಟ ಮತ್ತು ಜಿಲ್ಲಾಮಟ್ಟದಲ್ಲಿ ರಾಜ್ಯಮಟ್ಟದಲ್ಲಿ ಹಲವಾರು ಸಮಾಜ ಸೇವೆಗಳನ್ನು ನೀಡಿದಂತ ಎನ್ ಸುರೇಶ್ ಶಿಕ್ಷಕರಿಗೆ ಸರ್ಕಾರಿ ಕೆಲಸ ನಿರ್ವಹಿಸುವುದರ ಜೊತೆಗೆ ಸಾಮಾಜಿಕವಾಗಿ ತೊಡಗಿಸಿಕೊಂಡು ಈ ಬಾರಿಯೂ ಪ್ರಶಸ್ತಿಗೆ ಬಾಜಿ ನರಾಗಿರುವುದಕ್ಕೆ ಇವರ ಆಪ್ತ ವಲಯದವರು ಹಾಗೂ ಇಲಾಖೆಯ ಉಪನಿರ್ದೇಶಕರು ,ಕ್ಷೇತ್ರ ಶಿಕ್ಷಣಾಧಿಕಾರಿಗಳು ಎಲ್ಲಾ ಶಿಕ್ಷಕ ವೃಂದದವರು ಆಪ್ತಮಿತ್ರರು ಬಂಧುಗಳು ಶುಭ ಹಾರೈಸಿರುತ್ತಾರೆ