13ನೇ ವರ್ಷದ ವಿನಾಯಕ ಪಬ್ಲಿಕ್ ಸ್ಕೂಲ್ ವಾರ್ಷಿಕೋತ್ಸವದ ಸ್ನೇಹ ಸಮ್ಮೇಳನ ಸಮಾರಂಭ ಜರಗಿತು

Feb 17, 2026 - 16:22
 0  15
13ನೇ ವರ್ಷದ ವಿನಾಯಕ ಪಬ್ಲಿಕ್ ಸ್ಕೂಲ್ ವಾರ್ಷಿಕೋತ್ಸವದ ಸ್ನೇಹ ಸಮ್ಮೇಳನ ಸಮಾರಂಭ ಜರಗಿತು

    ಕೊಪ್ಪಳದ  ಕುಕನೂರು ತಾಲೂಕಿನ ಯೆರೇಹಂಚಿನಾಳ ಗ್ರಾಮದ ಹೊರ ವಲಯದಲ್ಲಿ ಇರುವ ಶ್ರೀ ಪತ್ರೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾದ ವಿನಾಯಕ ಪಬ್ಲಿಕ್ ಸ್ಕೂಲ್  13ನೇ ವರ್ಷದ ಶಾಲಾ ವಾರ್ಷಿಕೋತ್ಸವದ ಸ್ನೇಹ ಸಮ್ಮೇಳನ ಮಕ್ಕಳ ಬಿಳ್ಕೊಡುವ ಸಮಾರಂಭ
ಅದ್ದೂರಿಯಾಗಿ ಜರುಗಿತು 


2025-26.ನೇ ಸಾಲಿನಲ್ಲಿ 13ನೇ ವರ್ಷದ ಶಾಲಾ ವಾರ್ಷಿಕೋತ್ಸವದ ಬಿಳ್ಕೊಡುವ ಸಮಾರಂಭದಲ್ಲಿ
ಶ್ರೀ ಮ.ನಿ.ಪ್ರ. ಸ್ವ ಡಾ|| ಹಿರಿಶಾಂತವೀರ ಮಹಾಸ್ವಾಮಿಗಳು ಶ್ರೀ ಗವಿಸಿದೇಶ್ವರ ಶಾಖಾಮಠ ಹೂವಿನಹಡಗಲಿ. ಹಾಗೂ ವೇ. ಮೂ. ಶ್ರೀ ಸಿದ್ದಯ್ಯ ಹಿರೇಮಠ ಇನ್ನೊಬ್ಬ ವೇ. ಮೂ.ಶ್ರೀ ಶಿವಾನಂದಯ್ಯ ಕೊಪ್ಪಳಮಠ ಇವರು ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.
ಈ ಸಂಸ್ಥೆಯ ಅಧ್ಯಕ್ಷರಾದ ರಾಜಶೇಖರ್ ಕಟ್ಟಿ. ಇವರು  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡರೆ
ಸೋಂಪ್ರದ ಮುಖ್ಯ ನಿವೃತ್ತ  ಶಿಕ್ಷಕರಾದ. ಬಾಸ್ಕರ್ ಎಮ್. ಪತ್ತಾರ ಹಾಗೂ ಕನ್ನಡ ಸರ್ಕಾರಿ  ಉಪನ್ಯಾಸಕರಾದ ಡಾ|| ಮಹಾಂತೇಶ ಬಿ. ನೇಲಾಗಣಿ ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು 

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅಂದಪ್ಪ ರುದ್ರಪ್ಪ ಕೋಳೂರ ವೇದಿಕೆ ಮೇಲಿದ್ದ ಎಲ್ಲಾ ಗಣ್ಯರು ಜ್ಯೋತಿ ಬೆಳಗಿಸಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 
ಈ ಸಂಸ್ಥೆ ಅಧ್ಯಕ್ಷರಾದ ರಾಜಶೇಖರ್ ಕಟ್ಟಿ. ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪೂಜ್ಯರಿಗೆ,ಗಣ್ಯರಿಗೆ ಸ್ವಾಗತಿಸಿಕೊಂಡು ಗೌರವಾನ್ವಿತರಿಗೆ ಸನ್ಮಾನಿಸಿದರು.
ರಾಜ್ಯದಲ್ಲಿ ಬಾಲ್ಯ ವಿವಾಹ  ಮಾಡುವುದನ್ನು ನಿಲ್ಲಿಸಲು ನಾಟಕ ಪ್ರದೇಶಿಸಿದ ಮಕ್ಕಳು ಈ ಮನರಂಜನೆ ಮೂಲಕ ರಾಜ್ಯದಕ್ಕೆ ಸಂದೇಶ ನೀಡಿದರು 
ಶಿಕ್ಷಕಿಯರಾದ ಕಾವೇರಿ ಪತ್ತಾರ ಹಾಗೂ ಮೈತ್ರಿ. ಪ್ರತಿಮಾ. ರತ್ನ ಇವರು ಈ ಕಾರ್ಯಕ್ರಮ ನಿರುಪಿಸಿದರು. 
1.ರಿಂದ.5ನೇ ತರಗತಿಯಲ್ಲಿ  ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು  ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಹಾಗೂ ದ್ವೀತಿಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ  ಗಣ್ಯರಿಂದ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ.ಕೊಪ್ಪಳ ಜಿಲ್ಲೆ ನಮ್ಮ ಕರ್ನಾಟಕ ಸೇನೆ,  ಜಿಲ್ಲಾಧ್ಯಕ್ಷ ರಮೇಶ ಮೈನಹಳ್ಳಿ.ವಿನಾಯಕ ಶಿಕ್ಷಣ ಸಂಸ್ಥೆ ಕಾರ್ಯದರ್ಶಿಗಳಾದ ಮಂಜುಳಾ ಹನುಮಪ್ಪ ಹನಸಿ. ಎಚ್. ಎ. ನದಾಫ್. ಪ್ರೌಢ ಶಾಲೆ ನೌಕರರ ಸಂಘದ ತಾಲೂಕ ಅಧ್ಯಕ್ಷ ಹನಮಂತಪ್ಪ ಸಿ. ಸಿದ್ದರಡ್ಡಿ. ಶಿವಪ್ಪ ದಳವಾಯಿ.ಶಿವಕುಮಾರ ಹೊಂಬಳ. ಸತ್ಯನಾರಾಯಣ ಪತ್ತಾರ.ಅಣ್ಣಪ್ಪ ನರೇಗಲ್ಲ.ಈರಣ್ಣ ಇಟಗಿ.ಮುದಿಯಪ್ಪ ನಾಗರಡ್ಡಿ.ಮಂಜುಳಾ ತೊಪಲಕಟ್ಟಿ.ರೇಖಾ ಪಾರಿಗೊಂಡ. ಸೇರಿದಂತೆ. ಶಾಲೆ ಸಿಬ್ಬಂದಿ  ವಿದ್ಯಾರ್ಥಿನಿ ವಿದ್ಯಾರ್ಥಿ ಪಾಲಕರು ಪೋಷಕರು ಯುವಕರು ಈ ಕಾರ್ಯಕ್ರಮದಲ್ಲಿ. ಉಪಸ್ಥಿತರಿದ್ದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456