ಕಿಕ್ಕೇರಮ್ಮ ಎಳನೀರು ವರ್ತಕರ ಸಂಘದ ಗಣೇಶ ಮೂರ್ತಿ ವಿಸರ್ಜನೆ
ಕಿಕ್ಕೇರಿ: ಕಿಕ್ಕೇರಮ್ಮ ಎಳನೀರು ವರ್ತಕರ ಸಂಘದ ವತಿಯಿಂದ ಪಟ್ಟಣದ ಕೃಷಿ ಉಪಮಾರುಕಟ್ಟೆಯ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯನ್ನು ಭಕ್ತಿಭಾವದಿಂದ ಪೂಜಿಸಿ, ಮಂಗಳವಾದ್ಯ, ದೊಳ್ಳುಕುಣಿತ, ವೀರಗಾಸೆಯೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ನಡೆಸಿ ವಿಸರ್ಜನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಭಾರತಿಪುರ ಪುಟ್ಟಣ್ಣ, ಅಧ್ಯಕ್ಷ ದಬ್ಬೇಘಟ್ಟ ಸುಂದರ್ ಹಾಗೂ ಉಪಾಧ್ಯಕ್ಷ ರಂಗಸ್ವಾಮಿ ಮಾತನಾಡಿ, ಸಂಘದ ವತಿಯಿಂದ ಪ್ರತಿವರ್ಷ ಗಣೇಶೋತ್ಸವವನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಲಾಗುತ್ತಿದ್ದು, ರಾಜ್ಯದಲ್ಲಿ ಸಕಾಲಕ್ಕೆ ಮಳೆ ಯಾಗಲಿ ಇದರಂದ ರಾಜ್ಯ ರೈತರ ಬದುಕು ಬಂಗಾರವಾಗಿ ಎಂದು ಗಣೇಶನಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ ಈ ಬಾರಿಯೂ ಸಂಘದ ಎಲ್ಲಾ ಸದಸ್ಯರ ಸಹಕಾರದೊಂದಿಗೆ ವಿಜೃಂಭಣೆಯಿಂದ ಕಾರ್ಯಕ್ರಮ ನಡೆಸಲಾಗಿದೆ ಎಂದು ತಿಳಿಸಿದರು.
ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿಯಾದ ಸೊಳ್ಳೇಪುರ ರಘು, ಸದಸ್ಯರಾದ ಗಂಗೇನಹಳ್ಳಿ ಪ್ರಕಾಶ್, ನಿತಿನ್, ನರಸಿಂಹ, ಉಮೇಶ್, ಮಂಜು, ಸೊಳ್ಳೆರಪುರ ಉಮೇಶ್, ಶಿವಕುಮಾರ್, ರಂಗ, ಶಿವ, ರಮೇಶ್, ಮಂಜೇಗೌಡ, ಆಶೋಕ, ಶೇಖರ್, ತಮ್ಮಯ್ಯ, ರಮೇಶ್, ನಾಗಣ್ಣ, ಕುಮಾರ್, ಮಹೇಶ್, ಪ್ರಸಿ ಸೇರಿಂದಂತೆ ಕಿಕ್ಕೇರಿ ಸುತ್ತಮುತ್ತಲಿನ ಭಕ್ತಾದಿಗಳು ಇದ್ದರು..