ಕ್ಯಾಸಂಬಳ್ಳಿ ಹೋಬಳಿ ಮಟ್ಟದ ಕ್ರೀಡಾಕೂಟ: ವಾಲಿಬಾಲ್‌ನಲ್ಲಿ ಬಾಲಕಿಯರಿಗೆ ಪ್ರಥಮ ಸ್ಥಾನ

ಕ್ಯಾಸಂಬಳ್ಳಿ ಹೋಬಳಿ ಮಟ್ಟದ ಕ್ರೀಡಾಕೂಟ: ವಾಲಿಬಾಲ್‌ನಲ್ಲಿ ಬಾಲಕಿಯರಿಗೆ ಪ್ರಥಮ ಸ್ಥಾನ
ಸುದ್ದಿ ಕಿರಣ ನ್ಯೂಸ್ ಡಿಸ್ಕ್

ತಾಲೂಕು ಮಟ್ಟಕ್ಕೆ ಆಯ್ಕೆಯಾದ ಸುಂದರಪಾಳ್ಯದ ಕೆಪಿಎಸ್ ಶಾಲೆಯ ವಿದ್ಯಾರ್ಥಿನಿಯರು

ಬೇತಮಂಗಲ: ಕ್ಯಾಸಂಬಳ್ಳಿಯಲ್ಲಿ ನಡೆದ 17 ವರ್ಷದ ವಯೋಮಿತಿಯ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಸುಂದರಪಾಳ್ಯದ ಕರ್ನಾಟಕ ಪಬ್ಲಿಕ್ ಶಾಲೆಯ ಬಾಲಕಿಯರ ವಾಲಿಬಾಲ್ ತಂಡವು ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಈ ಮೂಲಕ ತಂಡವು ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದೆ.

ತಂಡದ ಆಟಗಾರರಾದ ಶ್ವೇತಾ, ಸಂಜನಾಪ್ರಿಯ, ರಕ್ಷಿತಾ, ಚಿನ್ನಿ, ಜಾಗೃತಿ, ಲಕ್ಷ್ಮಿ, ರೂಪ ಹಾಗೂ ಕೀರ್ತಿ ಅವರು ಉತ್ತಮ ಪ್ರದರ್ಶನ ನೀಡಿ ಶಾಲೆಗೆ ಕೀರ್ತಿ ತಂದಿದ್ದಾರೆ. ವಿಜೇತ ವಿದ್ಯಾರ್ಥಿನಿಯರನ್ನು ಶಾಲಾ ಆಡಳಿತ ಮಂಡಳಿ ವತಿಯಿಂದ ಅಭಿನಂದಿಸಿ, ತಾಲೂಕು ಮಟ್ಟದಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಮತ್ತಷ್ಟು ಸಾಧನೆ ಮಾಡುವಂತೆ ಶುಭ ಹಾರೈಸಲಾಯಿತು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಪರಮೇಶ್, ಸಹ ಶಿಕ್ಷಕ ಭೀಮಪ್ಪ, ತರಬೇತುದಾರ ಗೋಪೇನಹಳ್ಳಿಯ ಕಿರಣ್ ಸೇರಿದಂತೆ ಕ್ರೀಡಾಪಟುಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರ ಸಾಧನೆಗೆ ಶಿಕ್ಷಕರು ಹಾಗೂ ಶಾಲಾ ಆಡಳಿತ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿದರು.