ಮತದಾರರ ಪಟ್ಟಿ ಪರಿಷ್ಕರಣೆಗೆ ವಿಶೇಷ ಸಭೆ ಮಾಜಿ ಶಾಸಕ ವೈ ಸಂಪಂಗಿ ನೇತೃತ್ವದಲ್ಲಿ ಮಹತ್ವದ ಚರ್ಚೆ
ಕೆ.ಜಿ.ಎಫ್ ವಿಧಾನಸಭಾ ಕ್ಷೇತ್ರದ ಜನಪ್ರಿಯ ಮಾಜಿ ಶಾಸಕರಾದ ಶ್ರೀ ವೈ. ಸಂಪಂಗಿರವರು ಬೇತಮಂಗಳ, ಕಮ್ಮಸಂದ್ರ, ಟಿ. ಗೊಲ್ಲಹಳ್ಳಿ, ಪಾರಂಡಹಳ್ಳಿ, ಗುಟ್ಟಹಳ್ಳಿ-ಹುಲ್ಕೂರ್ ಗ್ರಾಮ ಪಂಚಾಯಿತಿಗಳಿಗೆ ಮತದಾರರ ಪಟ್ಟಿ ಪರಿಷ್ಕರಣೆ SIR ವಿಶೇಷ ಸಭೆಯನ್ನು ಕಮ್ಮಸಂದ್ರ ಗ್ರಾಮದ ಸಾನ್ವಿ ಹೋಟೆಲ್ ನಲ್ಲಿ ಏರ್ಪಡಿಸಿದರು.
ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಸ-ಪ್ರಭಾವಿಗಳಾದ ವಾಸುದೇವ, ಗ್ರಾಮಾಂತರ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಶರ್ಮಾ,
ಬಿಎಲ್ಎ-1 ಸದಸ್ಯರಾದ ಬಾಬಿ ಸುರೇಶ್ ಹಾಗೂ ಪಂಚಾಯಿತಿಗಳ ಘಟ್ ನಾಯಕರು, ಬಿಎಲ್ ಎ-2 ಸದಸ್ಯರು ಭಾಗವಹಿಸಿದರು .