ಸರ್ಕಾರಿ ಕೆರೆ ಗೋಮಾಳ ಜಮೀನು ಒತ್ತುವರಿ – ವಾಣಿಜ್ಯ ಚಟುವಟಿಕೆಗೆ ನೀರು ದುರ್ಬಳಕೆ?
ಬೇತಮಂಗಲ: ಸ್ಥಳೀಯ ಕಮ್ಮಸಂದ್ರ ಗ್ರಾಪಂ ವ್ಯಾಪ್ತಿಯ ಬೊಮ್ಮಂಡಹಳ್ಳಿ ಗ್ರಾಮದ ಸರ್ವೇ ನಂ 21 ರಲ್ಲಿ ಸರ್ಕಾರಿ ಕೆರೆ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಅಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಎಂದು ಪಕ್ಕದ ಪೋತರಾಜನಹಳ್ಳಿ ಗ್ರಾಮಸ್ಥರು ಆರೋಪಿಸಿದರು.
ಸರ್ಕಾರಿ ಕೆರೆ ಮತ್ತು ಗೋಮಾಳವನ್ನು ಕೆಲವರು ಸ್ವಾರ್ಥಕ್ಕಾಗಿ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ . ಅಲ್ಲದೆ, ಸಾರ್ವಜನಿಕ ಸ್ವತ್ತಾದ ಕೆರೆಯ ನೀರನ್ನು ಮೋಟಾರ್ಗಳ ಮೂಲಕ ಅಕ್ರಮವಾಗಿ ಎತ್ತಿ ವಾಣಿಜ್ಯ ಉದ್ದೇಶಗಳಿಗೆ ಬಳಸಲಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೂಡಲೇ ಸ್ಥಳೀಯ ಗ್ರಾಪಂ ಅಧಿಕಾರಿಗಳು ಮತ್ತು ಕಂದಾಯ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಜರುಗಿಸಿ ಒತ್ತುವರಿ ತೆರವುಗೊಳಿಸಬೇಕು ಸರ್ಕಾರಿ ಆಸ್ತಿಯನ್ನು ಉಳಿಸಬೇಕು ಅಧಿಕಾರಿಗಳಿಗೆ ಮನವಿ ಮಾಡಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
