ಅಂಗನವಾಡಿ ಕಟ್ಟಡಕ್ಕೆ ಜಾಗ ಮಂಜೂರು ಮಾಡಿದ ಶಾಸಕಿ ರೂಪಕಲಾ ಶಶಿಧರ್: ವೆಂಗಸಂದ್ರ ಗ್ರಾಮಸ್ಥರಿಂದ ಕೃತಜ್ಞತೆ
ಬೇತಮಂಗಲ: ಇಲ್ಲಿಗೆ ಸಮೀಪದ ವೆಂಗಸಂದ್ರ ಗ್ರಾಮದಲ್ಲಿ ದೀರ್ಘ ಕಾಲದ ಬೇಡಿಕೆಯಾದ ಅಂಗನವಾಡಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ಶಾಸಕಿ ರೂಪಕಲಾ ಅವರು ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಜಾಗವನ್ನು ಮಂಜೂರು ಮಾಡಿದರು.
ಶಾಸಕಿ ರೂಪಕಲಾ ಶಶಿಧರ್ ರವರ ನೇತೃತ್ವದಲ್ಲಿ ಇಂದು ಕಟ್ಟಡ ಕಾಮಗಾರಿಗೆ ವೆಂಗಸಂದ್ರ ಗ್ರಾಮಸ್ಥರು ಭೂಮಿ ಪೂಜೆ ನೆರವೇರಿಸಿ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದರು, ನಮ್ಮ ಗ್ರಾಮದ ಮಕ್ಕಳ ಭವಿಷ್ಯಕ್ಕಾಗಿ ಅಂಗನವಾಡಿ ಕಟ್ಟಡಕ್ಕೆ ಜಾಗ ಬೇಕೆಂದು ನಾವು ಶಾಸಕರಲ್ಲಿ ಮನವಿ ಮಾಡಿದ್ದೆವು. ಅವರು ನಮ್ಮ ಮನವಿಗೆ ಗೌರವ ಕೊಟ್ಟು ತಕ್ಷಣವೇ ಜಾಗ ಮಂಜೂರು ಮಾಡಿಸಿಕೊಟ್ಟಿದ್ದಾರೆ. ಇಂತಹ ಜನಪರ ಕಾಳಜಿ ಹೊಂದಿರುವ ಶಾಸಕರು ಸಿಕ್ಕಿರುವುದು ನಮ್ಮ ಹೆಮ್ಮೆ ಅವರಿಗೆ ಗ್ರಾಮಸ್ಥರು ಧನ್ಯವಾದಗಳನ್ನು ತಿಳಿಸಿದರು.
ಗ್ರಾಮಸ್ಥರಿಂದ ಅಭಿನಂದನೆಗಳು: ವೆಂಗಸಂದ್ರ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಅಂಗನವಾಡಿ ಕಟ್ಟಡ ವಿಲ್ಲದೆ ಮಕ್ಕಳು ಹಾಗೂ ಗರ್ಭಿಣಿಯರು ತೊಂದರೆ ಅನುಭವಿಸುತಿದ್ದರು ಗ್ರಾಮಸ್ಥರು ಹಾಗೂ ಮುಖಂಡರು ಮನವಿಗೆ ಸ್ಪಂದಿಸಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ಜಾಗ ಮಂಜೂರು ಮಾಡಿರುತ್ತಾರೆ ಅವರಿಗೆ ಗ್ರಾಮಸ್ಥರು ಮತ್ತು ಮಹಿಳೆಯರು ಹಾಗೂ ಮುಖಂಡರ ಪರವಾಗಿ ಶಾಸಕಿ ರೂಪಕಲಾ ಅವರಿಗೆ ಅಭಿನಂದನೆಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಪಿಡಿಒ ಸತ್ಯವತಿ, ಮಾಜಿ ಗ್ರಾಪಂ ಸುನೀತಾ ಚಂದ್ರಶೇಖರ್, ಗ್ರಾಪಂ ಮಾಜಿ ಸದಸ್ಯರಾದ ಅಪ್ಪೋಜಿ ಗೌಡ, ಮುರಳಿ ಕೃಷ್ಣ, ರವಿ ಕುಮಾರ್, ಬುಜ್ಜಿ ನಾಗೇಂದ್ರ, ಎಪಿಎಂಸಿ ಸದಸ್ಯರಾದ ಯುವರಾಣಿ ವೆಂಕಟಾಚಲಪತಿ, ಮುಖಂಡರಾದ, ಚಂದ್ರಯ್ಯ, ರೆಡ್ದೆಪ್ಪ, ಮಂಜು, ಮಹೇಶ್, ರಾಮಸ್ವಾಮಿ, ಸೇರಿದಂತೆ ಗ್ರಾಮಸ್ಥರು ಹಾಗೂ ಗ್ರಾಪಂ ಸಿಬ್ಬಂದಿ ವರ್ಗದವರಿದ್ದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
