ಮುಖ್ಯಮಂತ್ರಿ ಪದಕ ಪಡೆದ ಪೋಲಿಸರಿಗೆ ತೇಜಸ್ವಿ ಅಭಿನಂದನೆ
ಬೆಂಗಳೂರು: 2025ನೇ ಸಾಲಿನ ಮುಖ್ಯಮಂತ್ರಿ ಪದಕ ಪಡೆದ ಎಸ್ ಶಿವಕುಮಾರ್ ಅವರಿಗೆ ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ ಅಭಿನಂದನೆ ಸಲ್ಲಿಸಿದ್ದಾರೆ.
ಮೈಸೂರು ಜಿಲ್ಲೆಯ ನಾಲ್ವರು ಪೊಲೀಸ್ ಸಿಬ್ಬಂದಿಗೂ ಈ ಪ್ರತಿಷ್ಠಿತ ಗೌರವ ಲಭಿಸಿರುವುದು ಹೆಮ್ಮೆಯ ವಿಷಯ ಎಂದು ತೇಜಸ್ವಿ ನಾಗಲಿಂಗಸ್ವಾಮಿ ಸಂತಸ ವ್ಯಕ್ತಪಡಿಸಿದ್ದಾರೆ.
ಸುರೇಶ್ ಕುಮಾರ್- ಇನ್ಸ್ಪೆಕ್ಟರ್, ವಿಜಯನಗರ ಪೊಲೀಸ್ ಠಾಣೆ,
ಕೆ. ಶಣ್ಮುಗ ವರ್ಮ- ಇನ್ಸ್ಪೆಕ್ಟರ್, ಪೊಲೀಸ್ ತರಬೇತಿ ಶಾಲೆ,
ಜಯಕುಮಾರ್- ಹೆಡ್ ಕಾನ್ಸ್ಟೇಬಲ್, ಸಿಎಆರ್,
ಎಸ್. ಶಿವಕುಮಾರ್- ಎಎಸ್ಐ, ಅಶೋಕಪುರಂ ಪೊಲೀಸ್ ಠಾಣೆ (ನಗರ ವಿಶೇಷ ವಿಭಾಗ ಇವರುಗಳು ಪ್ರತಿಷ್ಠಿತ ಗೌರವಕ್ಕೆ ಪಾತ್ರರಾಗಿದ್ದಾರೆ.
ಸಾಮಾಜಿಕ ಭದ್ರತೆ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹಾಗೂ ಕರ್ತವ್ಯನಿಷ್ಠ ಸೇವೆ ಸಲ್ಲಿಸಿರುವ ಪೊಲೀಸ್ ಸಿಬ್ಬಂದಿಗೆ ಈ ಪದಕ ಪ್ರದಾನ ಮಾಡಲಾಗಿದ್ದು,
ಈ ಉನ್ನತ ಗೌರವದಿಂದ ಪೋಲಿಸ್ ಇಲಾಖೆ ಸಿಬ್ಬಂದಿಗೆ ಉತ್ತೇಜನ,ಪ್ರೋತ್ಸಾಹ ಸಿಗಲಿದೆ ಎಂದು ತೇಜಸ್ವಿ ನಾಗಲಿಂಗಸ್ವಾಮಿ ಹೇಳಿದ್ದಾರೆ .
ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಪದಕ ಪಡೆದ ನಾಲ್ವರು ಪೋಲಿಸರಿಗೂ ಕನ್ನಡ ಕ್ರಾಂತಿದಳ ವತಿಯಿಂದ ಗೌರವಿಸಿ ಸನ್ಮಾನಿಸುವುದಾಗಿ ತೇಜಸ್ವಿ ನಾಗಲಿಂಗ ಸ್ವಾಮಿ ತಿಳಿಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
