ಗ್ರಾಮದ ಬಸವಬಾಲ ಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜನವರಿ14 ರಂದು ಶಿವಯೋಗಿ
ಢವಳಗಿ: ಶ್ರೀ ಸಿದ್ದರಾಮೇಶ್ವರ ಜಯಂತಿಯನ್ನು ಆಚರಿಸಲಾಯಿತು. ಸಿದ್ದರಾಮೇಶ್ವರರ ಬಗ್ಗೆ ಶಾಲೆಯ ಮುಖ್ಯ ಗುರುಗಳಾದ ರಮೇಶ ಮೂಲಿಮನಿ ಅವರು ಮಾತನಾಡಿ ಶಿವಯೋಗಿ ಸಿದ್ಧರಾಮೇಶ್ವರರ ವಚನಗಳು ೧೨ನೇ ಶತಮಾನದ ಶರಣ ಸಾಹಿತ್ಯದ ಪ್ರಮುಖ ಭಾಗವಾಗಿದ್ದು, 'ಕಪಿಲಸಿದ್ಧ ಮಲ್ಲಿಕಾರ್ಜುನ' ಅಂಕಿತದಲ್ಲಿ ರಚಿಸಿದ್ದಾರೆ; ಅವು ಧರ್ಮತತ್ವ, ಸಾಮಾಜಿಕ ಕಾಳಜಿ, ವೈಯಕ್ತಿಕ ಜೀವನದ ಅನುಭವಗಳ ಬೋಧನೆಯನ್ನು ಒಳಗೊಂಡಿದೆ.
ಸಮಾಜದಲ್ಲಿ ಸಮಾನತೆ, ಸ್ತ್ರೀಶಕ್ತಿ, ತತ್ವದಂತಹ ಆಳವಾದ ವಿಚಾರಗಳನ್ನು 'ಅಂಗಕ್ಕೆ ಭೋಗವ ಕೊಟ್ಟವರ ನೋಡಿದೆನಲ್ಲದೆ, ಲಿಂಗಕ್ಕೆ ಕೊಟ್ಟವರ ನೋಡಲಿಲ್ಲ' ಇಂತಹ ವಚನಗಳ ಮೂಲಕ ಸಮಾಜದಲ್ಲಿರುವ ಲೋಪದೋಷಗಳನ್ನು ಸರಿಪಡಿಸುವಂತಹ ಕೆಲಸಗಳನ್ನು ಮಾಡಿದ ಶಿವಶರಣದಲ್ಲಿ ಇವರು ಕೂಡ ಒಬ್ಬರು.
ಇಂತಹ ಶಿವಶರಣರ ಆದರ್ಶಗಳನ್ನ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಮಕ್ಕಳಿಗೆ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಗುರುಗಳಾದ ರಮೇಶ ಮೂಲಿಮನಿ. ಸಹ ಶಿಕ್ಷಕರುಗಳಾದ ಜೆ ಎಸ್ ಪಾಟೀಲ್, ಬಿ ಎಸ್ ಪಾಟೀಲ್, ಹರಿನಾಥ್ ಎನ್, ಎಸ್ ಎಸ್ ಅವಟಿ ಹಾಗೂ ಅತಿಥಿ ಶಿಕ್ಷಕರುಗಳಾದ ಪರಶುರಾಮ ಮೂಲಿಮನಿ, ವಿಜಯಲಕ್ಷ್ಮಿ ಕಟ್ಟಿಮನಿ ಹಾಗೂ ಶಾಲೆಯ ಮುದ್ದು ವಿದ್ಯಾರ್ಥಿಗಳು ಹಾಜರಿದ್ದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
