ಮುಸ್ಸಂಜೆ ವೇಳೆಯಲ್ಲಿ ಅದ್ದೂರಿಯಾಗಿ ಸಾಗಿದ ಶ್ರೀ ಮಡಿವಾಳೇಶ್ವರರ ಭವ್ಯ ರಥೋತ್ಸವ
ಢವಳಗಿ: ಗ್ರಾಮದ ಶ್ರೀ ಮಡಿವಾಳೇಶ್ವರರ 519ನೇ ಜಾತ್ರಾ ಮಹೋತ್ಸವ ನಿಮಿತ್ತ ಗುರುವಾರ ಸಂಜೆ 6:40ಕ್ಕೆ ಅಪಾರ ಭಕ್ತರ ಸಮ್ಮುಖದಲ್ಲಿ ಭವ್ಯ ರಥೋತ್ಸವ ಜರುಗಿತು.
ರಥೋತ್ಸವಕ್ಕೂ ಮುನ್ನ ಢವಳಗಿ ಗ್ರಾಮದ ಮುಕ್ಕಣ್ಣಪ್ಪ ಕೋರಿ ಅವರ ಮನೆಯಿಂದ ಗುರುಬಸಪ್ಪ ಕೋಣನವವರ ಎತ್ತಿನ ಬಂಡಿಯಲ್ಲಿ ತೇರಿನ ಮೀಣಿ(ಅಗ್ಗ) ಮತ್ತು ಬಸಪ್ಪ ವಡವಡಗಿ ಅವರ ಮನೆಯಿಂದ ತೇರಿನ ರುದ್ರಾಕ್ಷಿ ಹಾರವನ್ನು ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ತರಲಾಯಿತು. ನಂತರ ಮಾದಿನಾಳ,ಮತ್ತು ತಾರನಾಳ ಗ್ರಾಮದಿಂದ ತೇರಿನ ಕಲಶ ಆಗಮಿಸಿತು.ಹಳ್ಳೂರ ಗ್ರಾಮದಿಂದ ಆಗಮಿಸಿದ ಉತ್ಸವ ಮೂರ್ತಿಯನ್ನು ಬರಮಾಡಿಕೊಳ್ಳಲಾಯಿತು.
ಪಲ್ಲಕ್ಕಿಯೋಂದಿಗೆ ಗಂಗ ಸ್ಥಳಕ್ಕೆ ತೆರಳಿ ನಂತರ ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ತರಲಾಯಿತು.ಶ್ರೀ ಕೋಟ್ಟುರೇಶ್ವರ ಮಹಾಸ್ವಾಮಿಗಳು ಕಲ್ಮಠ ಗಂಗಾವತಿ ಹಾಗೂ ಮ.ನಿ.ಪ್ರ.ಶ್ರೀ 13ನೇ ಹುಚ್ಚೇಶ್ವರ ಸ್ವಾಮಿಗಳು ಹುಚ್ಚೇಶ್ವರ ಸಂಸ್ಥಾಮಠ ಕಮತಗಿ-ಕೋಟೇಕಲ್ಲ್ ಹಾಗೂ ಢವಳಗಿ ಶ್ರೀ ಘನಮಠೇಶ್ವರ ಸ್ವಾಮೀಜಿ ಅವರು ರಥೋತ್ಸವಕ್ಕೆ ಚಾಲನೇ ನೀಡಿದರು. ರಥೋತ್ಸವದ ವೇಳೆಯಲ್ಲಿ ಭಕ್ತರು ತೇರಿಗೆ ಬಾಳೆಹಣ್ಣು, ಉತ್ತತ್ತಿ ಎಸೆದು ಭಕ್ತಿ ಅರ್ಪಿಸಿದರು.
ಇಂದು ರಾಜ್ಯ ಮಟ್ಟದ ತರಬಂಡಿ ಸ್ಪರ್ಧೆ. ಪ್ರಥಮ, ದ್ವೀತಿಯ ಸ್ಥಾನಕ್ಕೆ ಸೈಕಲ್ ಮೋಟರ್ ಮತ್ತು ಬೈಕ್ ಸೇರಿದಂತೆ ಒಟ್ಟು 15 ಬಹುಮಾನಗಳನ್ನು ಆಯೋಜಿಸಲಾಗಿದೆ.
What's Your Reaction?
Like
2
Dislike
0
Love
0
Funny
0
Angry
0
Sad
0
Wow
0
