ಶೇ 100% ಫಲಿತಾಂಶ ಸಾಧನೆಗೆ ಶಿಕ್ಷಕರ ಪಾತ್ರ ಪ್ರಮುಖ-ಎಸ್.ಎಸ್.ರಮೇಶ್‌ಬಾಬು

May 30, 2025 - 17:23
 0  8
ಶೇ 100% ಫಲಿತಾಂಶ ಸಾಧನೆಗೆ ಶಿಕ್ಷಕರ ಪಾತ್ರ ಪ್ರಮುಖ-ಎಸ್.ಎಸ್.ರಮೇಶ್‌ಬಾಬು

ಬಾಗೇಪಲ್ಲಿ: ಮುಂಬರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ/100 ರಷ್ಟು ಫಲಿತಾಂಶ ಸಾಧನೆ ಮಾಡುವ ನಿಟ್ಟಿನಲ್ಲಿ ಶಿಕ್ಷಕರು ಕೆಲಸ ಮಾಡಬೇಕು ಇದಕ್ಕೆ ನಮ್ಮ ಗ್ರಾಪಂ ಸಂಪೂರ್ಣ ಸಹಕಾರ ಇರುತ್ತದೆ ಎಂದು ತಾಪಂ ಮಾಜಿ ಅಧ್ಯಕ್ಷ ಎಸ್.ಎಸ್.ರಮೇಶ್‌ಬಾಬು ತಿಳಿಸಿದ್ದಾರೆ.

ತಾಲ್ಲೂಕಿನ ಗೂಳೂರು ಸರಕಾರಿ ಪ್ರೌಢಶಾಲಾ ಆವರಣದಲ್ಲಿ ಗ್ರಾಪಂ, ಶಾಲಾ ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ 2025-26ನೇ ಸಾಲಿನ ಶಾಲಾ ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತç ವಿತರಣಾ ಕಾರ್ಯಕ್ರಮ ಮತ್ತು 2025-26ನೇ ಸಾಲಿನ 9ನೇ ತರಗತಿಗೆ ಆಂಗ್ಲ ಮಾದ್ಯಮ ಪ್ರಾರಂಭ ಹಾಗೂ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಈ ಬಾರಿ ಗೂಳೂರು ಪ್ರೌಢಶಾಲೆಯ 10 ನೇ ತರಗತಿಯಲ್ಲಿ ಶೇ/ 60 ರಷ್ಟು ಫಲಿತಾಂಶದಲ್ಲಿ ಬಂದಿರುವುದು ಉತ್ತಮ ಸಾಧನೆ, ಇದಕ್ಕೆ ಕಾರಣ ಇಲ್ಲಿನ ಮುಖ್ಯ ಶಿಕ್ಷಕ ವೆಂಕಟೇಶ್ ಮತ್ತು ಇತರೆ ಶಿಕ್ಷಕರು ಅದರಲ್ಲೂ ಮುಖ್ಯ ಶಿಕ್ಷಕರು ಸತತವಾಗಿ ರಾತ್ರಿ ಹಗಲು ಮಕ್ಕಳಿಗೆ ಬೋದನೆ ಮಾಡಿದ್ದರಿಂದ ಉತ್ತಮ ಫಲಿತಾಂಶ ಬಂದಿರುವುದು ಸಂತಸದ ವಿಷಯ ಮುಂಬರುವ 10 ನೇ ತರಗತಿ ಪರೀಕ್ಷೆಯಲ್ಲಿ ಶೇ/ 100 ರಷ್ಟು ಸಾಧನೆ ಮಾಡಬೇಕು ಇದಕ್ಕೆ ಬೇಕಾದ ಸಂಪೂರ್ಣ ಸಹಕಾರ ನಮ್ಮ ಗ್ರಾಪಂನಿAದ ಸಿಗಲಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ ಮಾತನಾಡಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರು ಓದಿರುವ ಈ ಶಾಲೆಯಲ್ಲಿ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದೆವೊ ಆದರೆ ಕಾರಣಾಂತರಗಳಿoದ ಶಾಸಕರು ಬರುವುದಕ್ಕೆ ಸಾದ್ಯವಾಗಲಿಲ್ಲ, ಕಳೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಲವು ವಿದ್ಯಾರ್ಥಿಗಳು ರಾಜ್ಯದಲ್ಲೆ 2ನೇ ರ‍್ಯಾಂಕ್ ಪಡೆಯಲು ಶಾಸಕ ಸುಬ್ಬಾರೆಡ್ಡಿ ಅವರು ಪ್ರೇರಣಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದರಿಂದಲೇ ಸಾದ್ಯವಾಯಿತು ಆದ್ದರಿಂದ ಅವರು ಓದಿದ ಶಾಲೆಯನ್ನು ಅಭಿವೃದ್ದಿ ಪಡಿಸಬೇಕು ಎಂಬ ನಿಟ್ಟಿನಲ್ಲಿ ಗೂಳೂರು ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಯಿತು ಎಂದರು.

ಅವರು ಮಾತನಾಡಿ ಶಿಕ್ಷಣ ಇಲಾಖೆಯಲ್ಲಿ ಸರಕಾರಿ ಶಾಲೆಗಳಿಗೆ ನೇಮಕವಾಗುವ ಶಿಕ್ಷಕರು 2-3 ಬಾರಿ ಪರೀಕ್ಷೆಗಳನ್ನು ಬರೆದು ನೇಮಕವಾಗುತ್ತಾರೆ ಆದರೆ ಯಾವ ಸರಕಾರಿ ಶಾಲೆಯಲ್ಲೂ ಶೇ/ 100 ರಷ್ಟು ಫಲಿತಾಂಶ ಬಂದಿಲ್ಲ ಇದಕ್ಕೆ ಕಾರಣಗಳೇನು ಎಂದು ನಾವು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಆರ್.ವೆಂಕಟರಾಮಪ್ಪ,ಗ್ರಾಪಂ ಉಪಾಧ್ಯಕ್ಷ ಎಸ್.ಜಿ.ಶಂಕರನಾಯ್ಕ್, ಪಿಡಿಒ ಕೃಷ್ಣಮೂರ್ತಿ, ಮುಖ್ಯ ಶಿಕ್ಷಕ ವಿ.ವೆಂಕಟೇಶ್, ಟಿಪಿಇಒ ರಂಗನಾಥ್, ಬಿರ‍್ಪಿ ಶಿವಪ್ಪ, ಸಿರ‍್ಪಿ ವೆಂಕಟೇಶ್, ಹಿರಿಯ ಮಾದ್ಯಮ ಶಾಲೆಯ ಮುಖ್ಯ ಶಿಕ್ಷಕ ಹಿನಾಯಿತುಲ್ಲಾ ಖಾನ್, ಶಿಕ್ಷಕರಾದ ಸತ್ಯನಾರಾಯಣರಾವ್, ತ್ಯಾಗರಾಜ್, ನಯಾಜ್‌ಪಾಷ, ಪಿ.ಟಿ.ಸುಮಲತ, ಎಸ್.ರಷೀದಾ, ಎನ್.ನವಿತಾ, ಆರ್.ಪೂರ್ಣಿಮ, ಅರುಣಮ್ಮ, ನಾಗಜ್ಯೋತಿ, ಎಲ್.ಪೂರ್ಣಿಮ, ಕೆ.ಎ.ಶ್ವೇತ, ವೀಣಾ ಸೇರಿದಂತೆ ಶಿಕ್ಷಕರು, ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456