ಸಾರ್ವಜನಿಕ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಿ ಪರಿಸರ ಉಳಿಸಿ: ನಗರಸಭೆ ಸದಸ್ಯ ಛತ್ರಪ್ಪ
ಸಿಂಧನೂರು: ಸಾರ್ವಜನಿಕ ಪ್ರದೇಶಗಳು ನಮ್ಮದೇ ಅಸ್ತಿಗಳಾಗಿದ್ದು ಅವುಗಳನ್ನು ಸ್ವಚ್ಛತೆಯಿಂದ ಕಾಪಾಡಿಕೊಂಡು ಹೋಗುವುದು ಪ್ರತಿಯೊಬ್ಬರ ಕರ್ತವ್ಯ ಎಂದು 13 ನೇ ವಾರ್ಡ್ ನಗರಸಭೆ ಸದಸ್ಯ ಛತ್ರಪ್ಪ ಅವರು ಹೇಳಿದರು.
ನಗರದ ನಗರಸಭೆ ಸಮುದಾಯ ಸಂಚಾಲಕರು ಹಾಗೂ ವನಸಿರಿ ಫೌಂಡೇಶನ್ (ರಿ)ರಾಯಚೂರು
ವತಿಯಿಂದ ಸಿಂಧನೂರಿನ ಇಲಾಹಿ ಸರ್ಕಲ್ ಟಿಪ್ಪುಸುಲ್ತಾನ ರಸ್ತೆ ಇಂದಿರಾನಗರ (ಬಪ್ಪುರ ರೋಡ್) ವಾರ್ಡ್ no 12 ಮತ್ತು 13 ವಾರ್ಡ್ ನಲ್ಲಿ ಕಸ ಹಾಕಿದ ಜಾಗದಲ್ಲಿ ಸ್ವಚ್ಛಗೊಳಿಸಿ, ರಂಗೋಲಿ ಹಾಕಿ,ಅದೇ ಸ್ಥಳದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಸಸಿ ನೆಟ್ಟು ನಿರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಸಾರ್ವಜನಿಕರು ವಾರದಲ್ಲಿ ಒಂದು ದಿನವನ್ನು ಸ್ವಚ್ಛತೆಗೆ ಆದ್ಯತೆ ನೀಡಬೇಕು.ಪ್ರತಿ ವಾರವು ಒಂದೊಂದು ಪ್ರದೇಶವನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಸ್ವಚ್ಛತೆ ಮಾಡಿ ಸಸಿ ನೆಟ್ಟು ಪರಿಸರ ಜಾಗೃತಿ ಮೂಡಿಸುವ ವನಸಿರಿ ಪೌಂಡೇಷನ್ ಕಾರ್ಯದ ಜೊತೆಗೆ ನಗರದ ವಿವಿಧ ಸಂಘ ಸಂಸ್ಥೆಗಳು ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ: ವನಸಿರಿ ಅಮರೇಗೌಡ ಮಲ್ಲಾಪುರ ಕರ್ನಾಟಕ ಸರಕಾರ ರಾಜ್ಯ ಪ್ರಶಸ್ತಿ ಪುರಸ್ಕೃತರು, 12 ವಾರ್ಡ್ ನಗರಸಭೆ ಸದಸ್ಯರಾದ ಏಲಿಯಷ್,ಉಮೇಶ ಗೌಡ ಹರಳಹಳ್ಳಿ, ಆದೇಶ ಶಿಕ್ಷಕರು,ಹುಸೇನ್ ಬಾಷಾ, ಮಲ್ಲಿಕಾರ್ಜುನ್ ಕುನಟಗಿ,ಮುದುಕಪ್ಪ ಹೊಸಳ್ಳಿ ಕ್ಯಾಂಪ್,ರಘು ಸಿಂಧನೂರು, ನಗರಸಭೆ ಸಮುದಾಯ ಸಂಚಾಲಕರಾದ ಅಕ್ಷತಾ ಹಿರೇಮಠ, ಗೌರಮ್ಮ,ಬಸಮ್ಮ ಹಿರೇಮಠ, ಶಕುಂತಲಾ ಹಾಗೂ ನಗರಸಭೆ,ಮತ್ತು ವನಸಿರಿ ಪೌಂಡೇಷನ್ ಸದಸ್ಯರು, ಮುಂತಾದ ಪರಿಸರ ಪ್ರೇಮಿಗಳಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
