ಕದಿರಿ ಹುಣ್ಣಿಮೆ ಹಬ್ಬದ ಪ್ರಯುಕ್ತ ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ದೇವಾಲಯಕ್ಕೆ ಭಕ್ತರ ದಂಡು
ಭಾಗ್ಯನಗರ: ಫಾಲ್ಗುಣ ಮಾಸದ ಕದಿರಿ ಪೂರ್ಣಿಮೆಯಂದು ಆಚರಿಸಲಾಗುವ ಹೋಳಿ ಹಬ್ಬವು ಶಿವನು ಕಾಮದೇವನನ್ನು ದಹಿಸಿದ ಸ್ಮರಣಾರ್ಥವಾಗಿ ಕಾಮನನ್ನು ಸುಟ್ಟು ನಂತರ ಬಣ್ಣಗಳ ಬಣ್ಣಬಣ್ಣಗಳಿಂದ ಸಂಭ್ರಮಿಸಿ ಆಚರಿಸಲಾಗುತ್ತದೆ.ಈ ಹೋಳಿ ಹಬ್ಬದ ಅಂದ್ರೆ ಕಾಮನದ ಹುಣ್ಣಿಮೆ ಎಂದು ಕರೆಯಲ್ಪಾಡುವ ವಸಂತ ಋತುವಿನ ಆಗಮನ ಮತ್ತು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಸಂಕೇತಿಸುವುದೆ ಕದಿರಿ ಹುಣ್ಣಿಮೆ ಹಬ್ಬದ ವಿಶೇಷತೆ ಎಂದು ಅರ್ಚಕ ಸಂದೀಪ್ ಪಂಡಿತ್ ತಿಳಿಸಿದ್ದಾರೆ.
ಪಟ್ಟಣದ ಕೊಡಿಕೊಂಡೆ ರಸ್ತೆ ಬಳಿ ಇರುವ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯದಲ್ಲಿ ಕದಿರಿ ಹುಣ್ಣಿಮೆ ಹಬ್ಬದ ಪ್ರಯುಕ್ತ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು ಕಾಮದ ಹುಣ್ಣಿಮೆ ಎಂದೇ ಕರಿಯಲ್ಪಡುವ ಕದಿರಿ ಹುಣ್ಣಿಮೆ ಪ್ರಯುಕ್ತ ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯದಲ್ಲಿ ಪಾತಕಾಲದ ಸಮಯ ನಾಲ್ಕು ಗಂಟೆಯಿಂದ ದೇವರಿಗೆ ವಿಶೇಷ ಪೂಜೆ, ಫಲ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು ಹಾಗೂ ಹಬ್ಬದ ಅಂಗವಾಗಿ ದೇವಾಲಯದ ಹೋರಂಗಣ ಮತ್ತು ಒಲಂಗಣದಲ್ಲಿ ಹಾಗೂ ಮುಖ್ಯವಾಗಿ ವಿವಿಧ ಹೂಗಳಿಂದ ಆಕರ್ಷಕ ಅಲಂಕಾರ ಮಾಡಲಾಗಿದೆ,ಬೆಳಗ್ಗೆ ಸುಮಾರು 5ಘಂಟೆಯಿಂದ ತಮ್ಮ ಮನೆ ದೇವರಿಗೆ ಹರಿಕೆ ಹೊತ್ತ ಸಾವಿರಾರು ಭಕ್ತರು ದೇವರ ದರ್ಶನ ಪಡೆದು,ಪುನೀತರಾದರು, ದೇವಾಲಯಕ್ಕೆ ಆಗಮಿಸಿದ ಭಕ್ತರಿಗೆ ಅನ್ನಪ್ರಸಾದ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಈ ಸಂಧರ್ಭದಲ್ಲಿ ಪ್ರಧಾನ ಅರ್ಚಕರಾದ ಲಕ್ಶ್ಮಣ ಮೂರ್ತಿ, ಅರ್ಚಕರಾದ ಸಂದೀಪ್ ಸ್ವಾಮಿ, ರಾಮ ಮೂರ್ತಿ ಸ್ವಾಮಿ, ಶ್ರೀನಾಥ್ ಸ್ವಾಮಿ, ಶ್ರೀನಿವಾಸ್ ಸ್ವಾಮಿ,ಟ್ರಸ್ಟ್ ಸಮಿತಿ ಸದಸ್ಯ ನವೀನ್ ಸೇರಿದಂತೆ ಸಾವಿರಾರು ಭಕ್ತರು ಇದ್ದರು...
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
