ಕನ್ನಡ ಭಾಷೆಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಕಮಲ್ ಹಾಸನ್ ವಿರುದ್ಧ ಪ್ರತಿಭಟನೆ ಧರಣಿ

May 30, 2025 - 17:28
 0  6
ಕನ್ನಡ ಭಾಷೆಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಕಮಲ್ ಹಾಸನ್ ವಿರುದ್ಧ ಪ್ರತಿಭಟನೆ ಧರಣಿ

ಕೋಲಾರ: ಇತ್ತೀಚೆಗೆ ಚಲನಚಿತ್ರ ನಟ ತಮಿಳು ಭಾಷೆಗೆ ಕಮಲ ಹಾಸನ್ ಕನ್ನಡದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಇದನ್ನು ಖಂಡಿಸಿ ರಾಜ್ಯಾದ್ಯಂತ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಏಕ ಕಾಲದಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿತ್ತು.

ಕೋಲಾರದ ರಾಜಕುಮಾರ್ ಸರ್ಕಲ್ ನಲ್ಲಿ ಕರವೇ ಜಿಲ್ಲಾ ಅಧ್ಯಕ್ಷ ಮೇಡಿಹಾಳ ರಾಘವೇಂದ್ರ ನೇತೃತ್ವದಲ್ಲಿ ಕಮಲ್ ಹಾಸನ್ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ನಂತರ ಮಾತನಾಡಿದ ರಾಘವೇಂದ್ರರವರು. ತಮಿಳುನಾಡು ಕಮಲಹಾಸನ್ ಕನ್ನಡಿಗರನ್ನು ಕ್ಷಮೆಯಾಚಿಸಬೇಕು. ಕನ್ನಡ ಭಾಷೆ ಯಾವ ಭಾಷೆಯಿಂದ ಹುಟ್ಟಿದ್ದು ಅಲ್ಲ ಇದು ದ್ರಾವಿಡ ಭಾಷೆ. ತೆಲುಗು. ತಮಿಳು. ಕನ್ನಡ. ಇದನ್ನು ಅರಿತುಕೊಂಡು ಮಾತನಾಡಬೇಕು. ನಿಮ್ಮ ತಮಿಳು ಭಾಷೆಗಳನ್ನು ಮೆಚ್ಚಿಸುವುದಕ್ಕೆ. ಸುಮ್ಮನೆ ಕನ್ನಡಿಗನ್ನು ಕೆಣಕಿದರೆ. ಉಷರ್ ಎಂದು ಎಚ್ಚರಿಸಿದರು. 5ನೇ ತಾರೀಕು ತೆರೆಕಾನಲ್ಲಿರುವ ನಿಮ್ಮ ಚಲನಚಿತ್ರವನ್ನು ತೆರೆ ಕಾಣದ ಬಿಡುವುದಿಲ್ಲ ‌. ನೀವು ನಮ್ಮ ಕನ್ನಡಿಗರನ್ನು ಕ್ಷಮೆಯಾಚಿಸಬೇಕು. ಕ್ಷಮೆ ಯಾಚಿಸಿದ ಪಕ್ಷದಲ್ಲಿ ಐದನೇ ತಾರೀಕು ನಿಮ್ಮ ಚಲನಚಿತ್ರವನ್ನು ಚಿತ್ರಮಂದಿರದಲ್ಲಿ ನುಗ್ಗಿ ನಿಲ್ಲಿಸುತ್ತೇವೆ ಎಂದು ಎಚ್ಚರಿಸಿದರು. ಕನ್ನಡದ ಬಗ್ಗೆ ಮಾತನಾಡುವಾಗ ಪ್ರತಿಯೊಬ್ಬರು. ಸಿನಿ ಚಿತ್ರರಂಗದಲ್ಲಿರುವವರು. ಎಚ್ಚರಿಕೆಯಿಂದ ಮಾತನಾಡಬೇಕು. ನಾನು ಹೀರೋ ಎಂದು ಅಹಂಕಾರದಿಂದ ಮಾತನಾಡಬಾರದು ಎಂದು ಎಲ್ಲಾ ಚಿತ್ರರಂಗದ ಕಲಾವಿದರು ಎಚ್ಚರಿಕೆ ಇಂದ ಇರಬೇಕು ಎಂದರು. ಈ ಹೋರಾಟ ಈಗ ಪ್ರಾರಂಭ ಮಾತ್ರ ಮುಂದಿನ ದಿನಗಳಲ್ಲಿ ಇನ್ನೂ ಉಗ್ರವಾಗಿ ಹೋರಾಟ ಮಾಡುತ್ತೇವೆ. ಜೈಲಿಗೆ ಹೋಗಲು ನಾವು ಸಿದ್ಧ ಕರ್ನಾಟಕ ರಕ್ಷಣಾ ವೇದಿಕೆ ಎಂದರೆ ಏನು ಎಂದು ಎಲ್ಲರೂ ತಿಳಿದಿದೆ. ಎಂದು ಈ ಸಂದರ್ಭದಲ್ಲಿ ಕರವೇ ತಾಲೂಕು ಮಟ್ಟದ ಅಧ್ಯಕ್ಷರು. ಪದಾಧಿಕಾರಿಗಳು. ಸದಸ್ಯರುಗಳು. ಕಾರ್ಯಕರ್ತರು ಭಾಗವಹಿಸಿದ್ದರು

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456