ಕುವೆಂಪು ವ್ಯಕ್ತಿಗಾತ್ರದ ಪ್ರತಿಮೆ ಸ್ಥಾಪನೆ ಮಾಡಲು ಮನವಿ

Jan 17, 2026 - 16:11
 0  3
ಕುವೆಂಪು ವ್ಯಕ್ತಿಗಾತ್ರದ ಪ್ರತಿಮೆ ಸ್ಥಾಪನೆ ಮಾಡಲು ಮನವಿ

   ಕೆಜಿಎಫ್: ನಗರಸಭೆಗೆ ನೂತನವಾಗಿ ಆಗಮಿಸಿ ಅಧಿಕಾರ ಸ್ವೀಕರಿಸಿದ ಪೌರಾಯುಕ್ತರು ವಿ. ಶ್ರೀಧರ್. ರವರನ್ನು ಕರ್ನಾಟಕ ರಕ್ಷಣಾ ವೇದಿಕೆ ಕೆಜಿಎಫ್ ಘಟಕದ ವತಿಯಿಂದ ಭೇಟಿ ಮಾಡಿ ಶುಭಾಶಯಗಳನ್ನು ಕೋರಲಾಯಿತು. 

 ಇದೇ ಸಂದರ್ಭದಲ್ಲಿ ಕರವೇ ಗೌರವಾಧ್ಯಕ್ಷರು. ಮದಿರಪ್ಪ ಮಾತನಾಡಿ ಕೆಜಿಎಫ್ ಗಡಿನಾಡು ಪ್ರದೇಶವಾಗಿದ್ದು, ಕನ್ನಡ ಭಾಷೆ ಉಳುವಿಗೆ ಕರವೇ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದು, ಈಗ ಇಲ್ಲಿನ ವಾತಾವರಣ ಬದ್ಲಾವಣೆಗೊಂಡು ಕನ್ನಡಮಯವಾಗಿದೆ. 

ಆದರೆ ಇಲ್ಲಿನ ರಾಜಕೀಯ ವ್ಯಕ್ತಿಗಳು ಫ್ಲೆಕ್ಸ್ ಹಾಕುವ ಸಂದರ್ಭದಲ್ಲಿ ಇಂಗ್ಲಿಷ್ ಭಾಷೆ. ಅನ್ಯ ಭಾಷೆಗಳನ್ನು ಹೆಚ್ಚಾಗಿ ಬಳಸುತ್ತಾರೆ. ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು. ಅಂಗಡಿ ಮುಂಗಟ್ಟುಗಳ ಮೇಲೆ ಶೇಕಡ 60ರಷ್ಟು ಕನ್ನಡ ನಾಮಪಲಕಗಳನ್ನು ಅಳವಡಿಸಬೇಕು. ಇದರ ಬಗ್ಗೆ ನಗರದಲ್ಲಿ ಅರಿವು ಮೂಡಿಸಬೇಕು.
ಇನ್ನ ಒಂದು ಪ್ರಮುಖವಾಗಿ ಕುವೆಂಪು ಬಸ್ ನಿಲ್ದಾಣದಲ್ಲಿ ರಾಷ್ಟ್ರಕವಿ ಕುವೆಂಪು  ಪ್ರತಿಮೆಯನ್ನು ಇಟ್ಟಿದ್ದಾರೆ. ಹುಟ್ಟುಹಬ್ಬದಂದು ಅವರಿಗೆ ಮಾಲಾರ್ಪಣೆ ಮಾಡಲು ಕಷ್ಟ ಆದ್ದರಿಂದ ರಾಷ್ಟ್ರಕವಿ ರವರನ್ನು ವ್ಯಕ್ತಿ ಗಾತ್ರದ ಪ್ರತಿಮೆಯನ್ನು ಸ್ಥಾಪನೆ ಮಾಡಬೇಕೆಂದು ಪ್ರಸ್ತಾಪಿಸಿದರು. ನಂತರ ಮಾತನಾಡಿದ ಪೌರಾಯುಕ್ತರ ನಗರವನ್ನು ಕಸ ಮುಕ್ತವಾಗಿ ಮಾಡುತ್ತೇನೆ. ನೀರಿನ ಸಮಸ್ಯೆ ರಸ್ತೆಗಳ ಸಮಸ್ಯೆಗೆ ಯಾವುದೇ ಧಕ್ಕೆ ಬರದಂತೆ ಪ್ರತಿಯೊಂದು ವಾರ್ಡಿನಲ್ಲಿ ಯಾವುದೇ ಮೂಲ ಸೌಲಭ್ಯಗಳಿಂದ ವಂಚಿತವಾಗದಂತೆ ಕ್ರಮ ವಹಿಸುತ್ತೇನೆ. ಪ್ರಮುಖವಾಗಿ ಭಾಷಾ ವಿಚಾರ ಬಂದಾಗ ಅದು ಯಾರೇ ಆಗಿರಲಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇನೆ. ನೀವು ಏನು ಬೇಡಿಕೆ ಇಟ್ಟಿದ್ದೀರಿ. ಅತಿ ಶೀಘ್ರದಲ್ಲೇ ಇದರ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದರು. ನಗರಸಭೆಯಲ್ಲಿ ಸಾರ್ವಜನಿಕರು ತಾವೇ ಖುದ್ದು ಭೇಟಿ ನೀಡಿ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಬಹುದು. ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ. ತಮಗೆ ಏನೇ ಸಮಸ್ಯೆ ಇದ್ದರೂ ನನ್ನ ಕಚೇರಿಗೆ ಬೇಟಿ ನೀಡಿ ನಮ್ಮ ಗಮನಕ್ಕೆ ತರಬಹುದು ಎಂದರು. ಈ ಸಂದರ್ಭದಲ್ಲಿ ಕರವೇ ತಾಲೂಕ ಅಧ್ಯಕ್ಷರು. ನಂಜುಂಡಪ್ಪ. ಕಾರ್ಯದರ್ಶಿಗಳು. ರವಿಕುಮಾರ್. ಗೊಲ್ಲಹಳ್ಳಿ ಕನ್ನಡ ಸಂಘದ ಅಧ್ಯಕ್ಷರು. ನಾಗರಾಜ್. ಗೌರವಾಧ್ಯಕ್ಷರು. ಸುರೇಶ್. ಉಪಾಧ್ಯಕ್ಷರು. ಸಂಪತ್. ನಗರ ಅಧ್ಯಕ್ಷರು. ಪ್ರದೀಪ್. ಮಹೇಶ್ ಗೌಡ. ಕರವೇ ತಾಲೂಕು ಸಾಮಾಜಿಕ ಜಾಲತಾಣಗಳ ಸಹ ಸಂಚಾಲಕರು. ಫ್ರೂಟ್ಸ್ ಮಂಜು. ಕಾರ್ಮಿಕ ಘಟಕದ ಅಧ್ಯಕ್ಷರು ಸೀನಪ್ಪ ಮೊದಲಾದವರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456