ಕೆಜಿಎಫ್ ಕಾರ್ಮಿಕ ದಿನಾಚರಣೆಯನ್ನು ಕಪ್ಪು ದಿನಾಚರಣೆಯಾಗಿ ಆಚರಣೆ: ಜ್ಯೋತಿ ಬಾಸು
ಕೆಜಿಎಫ್: ನಮ್ಮ ಕೆಜಿಎಫ್ ನಗರದಲ್ಲಿ ಕಾರ್ಮಿಕ ದಿನಾಚರಣೆಯನ್ನು ಕಾರ್ಮಿಕರು ಕಪ್ಪು ದಿನಾಚರಣೆಯಾಗಿ ಆಚರಣೆ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಿಪಿಐ ಪಕ್ಷದ ಮುಖಂಡ ಜ್ಯೋತಿ ಬಾಸು ಆತಂಕ ವ್ಯಕ್ತಪಡಿಸಿದರು.
ಅವರು ನಗರದ ಪೈಪ್ ಲೈಟ್ ವೃತ್ತದಲ್ಲಿರುವ ಕಾರ್ಮಿಕ ಮುಖಂಡನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ನಮ್ಮ ತಾಲೂಕಿನಲ್ಲಿ ಚಿನ್ನದ ಗಣಿ ಮುಚ್ಚಿ 25 ವರ್ಷಗಳು ಕಳೆದಿದೆ ಕಾರ್ಮಿಕರ ಸಮಸ್ಯೆ ಕೆಲವರಿಲ್ಲ. ಅದೇ ರೀತಿಯಾಗಿ ಬಿಜಿಎಂಎಲ್ ಗುತ್ತಿಗೆ ಕಾರ್ಮಿಕರ ಕಷ್ಟಗಳನ್ನು ಕೆಲವರಿಲ್ಲ ಬಿಜಿಎಂಎಲ್ ಮನೆಯಲ್ಲಿ ವಾಸ ಮಾಡುವ ಕಾರ್ಮಿಕ ಕುಟುಂಬಗಳ ನೋವುಗಳನ್ನು ಪ್ರತಿದಿನ ಬೆಂಗಳೂರಿಗೆ ಹೋಗುವ ಕಾರ್ಮಿಕರ ನೋವುಗಳನ್ನು ಯಾರು ಕೇಳುತ್ತಿದ್ದಾರೆ. ನಮ್ಮ ಜನ ಪ್ರತಿನಿಧಿಗಳು ಎಲ್ಲಿ ಹೋಗಿದ್ದಾರೆ.
ನಾವು ಮತ ಹಾಕಿ ಆಯ್ಕೆ ಮಾಡಿರುವ ಶಾಸಕಿ ರೂಪಕಲಾ ಶಶಿಧರ್ ಕಾರ್ಮಿಕರ ಕಷ್ಟಗಳಲ್ಲಿ ಪಾಲ್ಗೊಂಡಿದ್ದಾರೆ ಅವರ ಪರ ಧ್ವನಿ ಎತ್ತಿದ್ದಾರಾ? ಎಂದು ಪ್ರಶ್ನಿಸಿದರು.
ಶಾಸಕರು ಸರ್ವಾಧಿಕಾರಿಯಾಗಿ ವರ್ತನೆ ಮಾಡುತ್ತಿದ್ದಾರೆ. ತಮ್ಮ ಅಧಿಕಾರವನ್ನು ಬೇರೆಯವರು ಚಲಾವಣೆ ಮಾಡುತ್ತಿದ್ದಾರೆ. ನಗರಸಭೆಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಪ್ರತಿಯೊಂದು ಕಾಮಗಾರಿ ಬಿಲ್ಲುಗಳಲ್ಲಿ ಕಮಿಷನ್ ಎಲ್ಲಿಗೆ ಹೋಗ್ತಾ ಇದೆ ನಗರ ಸಭೆಯ ವ್ಯಾಪ್ತಿಯ 35 ವಾರ್ಡ್ಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಸ್ವಚ್ಛತೆ ಮರಿಚಿಕೆಯಾಗಿದೆ. ಇದನ್ನು ಕಾಂಗ್ರೆಸ್ನ ಮುಖಂಡರಾದ ಜೈಪಾಲ್ ಪ್ರಶ್ನೆ ಮಾಡಿದರೆ. ಅವರನ್ನು ಪಕ್ಷದಿಂದ ದೂರ ಇಟ್ಟಿದ್ದಾರೆ.
ಶಾಸಕರನ್ನು ಕರೆತಂದಿದ್ದು ಅದೇ ಜೈಪಾಲ್. ಹಲವಾರು ಮುಖಂಡರು ಶಾಸಕರನ್ನು ನಂಬಿಕೊಂಡಿದ್ದಾರೆ. ಇಷ್ಟು ದೊಡ್ಡ ಮುಖಂಡನಿಗೆ ಪಕ್ಷದಿಂದ ಹೊರ ಹಾಕಿದ್ದಾರೆ ಎಂದರೆ ನೀವು ಯಾವ ಲೆಕ್ಕದಲ್ಲಿ ಇದ್ದೀರಿ ಎಂದು ದೂರಿದರು.
ಕಾರ್ಮಿಕರ ಕಷ್ಟ ಸುಖಗಳಿಗೆ ಮುಂದೆ ಬರುವ ಪಕ್ಷ ಎಂದರೆ ಅದು ನಮ್ಮ ಸಿಪಿಐ ಪಕ್ಷ ನಾವು ದೆಹಲಿಗೆ ಹೋಗಿ ಹೋರಾಟವನ್ನು ಮಾಡಿದ್ದೇವೆ. ಇಂದಿಗೂ ನಮ್ಮ ಪಕ್ಷ ಇಲ್ಲದಿದ್ದರೆ ಕಾರ್ಮಿಕರನ್ನು ಬೀದಿಗೆ ತಲುತ್ತಿದ್ದರು. ಈಗ ನಾನು ಕಾರ್ಮಿಕರ ಧ್ವನಿಯಾಗಿ ನಿಲ್ಲುತ್ತೇನೆ ಯಾವುದೇ ಬೀದಿ ಹೋರಾಟಕ್ಕೂ ನಾನು ಸಿದ್ದನಿದ್ದೇನೆ ಎಂದು ಎಚ್ಚರಿಸಿದರು. ಇದೇ ಸಂದರ್ಭದಲ್ಲಿ ಸಿಪಿಐ ಪಕ್ಷದ ಮುಖಂಡರು ಭಾಗವಹಿಸಿದ್ದರು
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
