ಕೆಜಿಎಫ್ ನಲ್ಲಿ ಕೇಂದ್ರ ಸರ್ಕಾರದ ಕಾರ್ಮಿಕ ನೀತಿಯನ್ನು ವಿರೋಧಿಸಿ ಜೆ ಸಿ ಟಿ ಯು ವತಿಯಿಂದ ಪ್ರತಿಭಟನೆ
ಕೆಜಿಎಫ್: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾರ್ಮಿಕ ಕಾಯ್ದೆಗಳನ್ನು ಖಂಡಿಸಿ ಕೆಜಿಎಫ್ ನಗರದ ರಾಬರ್ಸನ್ ಪೇಟೆ ಪೋಸ್ಟ್ ಆಫೀಸ್ ಮುಂಭಾಗ ಜೆ.ಸಿ.ಟಿ.ಯು. ವತಿಯಿಂದ ಬೃಹತ್ ಪ್ರತಿಭಟನೆ.
ಕಾರ್ಮಿಕ ಮುಖಂಡರು ಆಗಿರುವ ಎ.ಕೆ. ಬಾಬು ಮಾತನಾಡಿ ಕೇಂದ್ರ ಸರ್ಕಾರ ಬಡ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದೆ. ಕೇಂದ್ರ ಸರ್ಕಾರದ ಸಾರ್ವಜನಿಕ ವಲಯದ ಕಾರ್ಖಾನೆಗಳಲ್ಲಿ ಉದ್ಯೋಗ ಕಡಿತ ಮಾಡುತ್ತಿದೆ. ಕಾರ್ಮಿಕ ನೀತಿಗಳನ್ನು ತಿದ್ದುಪಡಿ ಮಾಡುತ್ತದೆ.
ಎಲ್ಲಾ ಕ್ಷೇತ್ರದಲ್ಲಿ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ ಸಾರ್ವಜನಿಕ ಕ್ಷೇತ್ರವನ್ನು ಖಾಸಗಿಕರಣ ಮಾಡುತ್ತಾ ಅಂಬಾನಿ ಅದಾನಿ ಎಂಬುವರಿಗೆ ನೀಡುತ್ತಿದ್ದಾರೆ.
ಬಡ ಕಾರ್ಮಿಕರು ಬಡವರಾಗಿದ್ದಾರೆ ಅವರಿಗೆ ಯಾವುದೇ ಸೌಲತ್ತುಗಳು ನೀಡಿಲ್ಲ. ದೇಶದ ಬೆನ್ನೆಲುಬು ರೈತರಿಗೂ ಅಂಗನವಾಡಿ ಕಾರ್ಯಕರ್ತರಿಗೂ ಆಶಾ ಕಾರ್ಯಕರ್ತರು. ಬಿಸಿಊಟ ಕಾರ್ಯಕರ್ತರು. ಎಲ್ಲರಿಗೂ ಅನ್ಯಾಯವಾಗುತ್ತಿದೆ.
ನಗರದಲ್ಲಿ ಬಿಜಿ ಎಮ್ ಎಲ್ ಮುಚ್ಚಿ 25 ವರ್ಷಗಳು ಕಳೆದಿದೆ ಇದುವರೆಗೂ ಕೇಂದ್ರ ಸರ್ಕಾರ ಇದರ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಉದ್ಯೋಗ ಸೃಷ್ಟಿ ಮಾಡಿಲ್ಲ ಬೆಮಲ್ ಕಾರ್ಖಾನೆಯಲ್ಲಿ 6,000 ಹೆಚ್ಚು ನೌಕರರಿದ್ದರು. ಇಂದು 900ಕ್ಕೆ ಇಳಿದಿದೆ ಕಾಯಂ ಉದ್ಯೋಗ ನೀಡದೆ ಎಲ್ಲಾ ಗುತ್ತಿಗೆ ಆಧಾರದ ಮೇಲೆ ಕೆಲಸವನ್ನು ತೆಗೆದುಕೊಂಡು ಕಷ್ಟಪಡುವ ಕೈಗಳಿಗೆ ಚಿಪ್ಪು ನೀಡುತ್ತಿದೆ.
ಗುತ್ತಿಗೆ ಆಧಾರದಲ್ಲಿ ಮಾಡುವ ನೌಕರರನ್ನು ಖಾಯಂ ಗೊಳಿಸಲು ಹಲವಾರು ಹೋರಾಟಗಳು ಮಾಡಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಹೋಗಲಿ ಕನಿಷ್ಠ ವೇತನವಾದರೂ ನೀಡಬೇಕು ಅದು ನೀಡಿಲ್ಲ ಇದು ಎಷ್ಟರ. ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕೆಂದು ರಾಷ್ಟ್ರ ವ್ಯಾಪ್ತಿ ಇಂದು ಜೆಸಿಟಿಯು. ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದೆ ಎಂದರು. ಇನ್ನಾದರೂ ಕಾರ್ಮಿಕರ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಬೆಮಲ್ ನೌಕರರ ಸಂಘದ ಅಧ್ಯಕ್ಷರು. ಓ. ರಾಮಚಂದ್ರ ರೆಡ್ಡಿ ಮಾತನಾಡಿ. ಕೇಂದ್ರ ಸರ್ಕಾರ ನಾಲ್ಕು ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿದ್ದು, ಇದರಿಂದ ಕಾರ್ಮಿಕರಿಗೂ ಅನ್ಯಾಯವಾಗುತ್ತದೆ ಇಂತಹ ಜನ ವಿರೋಧಿ ಕಾಯ್ದೆಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆಯಬೇಕು.
ಯಾವುದೇ ವಲಯದ ಕಾರ್ಖಾನೆಯ ಕಾರ್ಮಿಕರಿಗೆ ಅನ್ಯಾಯವಾದರೆ ನಮ್ಮ ಸಂಘ ಮುಂಚೂಣಿಯಲ್ಲಿ ಬಂದು ಬೆಂಬಲ ನೀಡುತ್ತೇವೆ ಎಂದು ಹೇಳಿದರು.
ಸಿ ಪಿ ಐ ಎಂ ನ ಮುಖಂಡರು ತಂಗರಾಜ್ ಮಾತನಾಡುತ್ತಾ ಕೇಂದ್ರ ಸರ್ಕಾರ ದುಡಿಯುವ ಕೈಗಳಿಗೆ ಉದ್ಯೋಗ ನೀಡಬೇಕು. ಆದರೆ ಮೋದಿ ಸರ್ಕಾರ ಬಂದ ನಂತರ ಉದ್ಯೋಗ ಮಾಯವಾಗಿದೆ. ವಿಕಸಿತ ಭಾರತ್ ಎಂದು ಘೋಷಣೆ ಕೂಗುತ್ತಾರೆ ಆದರೆ ಇಂದು ಬಡವರು ಬಡವರಾಗಿದ್ದಾರೆ. ದುಡಿಯುವ ಕೈಗಳಿಗೆ ಉದ್ಯೋಗ ನೀಡುತ್ತಿಲ್ಲ ಕಾರ್ಮಿಕರಿಗೆ ರಕ್ಷಣೆ ಇಲ್ಲ. ಕೆಜಿಎಫ್ನಲ್ಲಿ ಸಾವಿರಾರು ಮಂದಿ ದಿನಗೂಲಿ ಕಾರ್ಮಿಕರು ಬೆಂಗಳೂರಿಗೆ ಕೆಲಸಕ್ಕೆ ಹೋಗುತ್ತಾರೆ. ಇಲ್ಲಿ ಕಾರ್ಖಾನೆಗಳು ನಿರ್ಮಿಸಲು ಏಕೆ ಸಾಧ್ಯವಾಗಿಲ್ಲ. ಕೇಂದ್ರ ಸರ್ಕಾರದ ಸಾವಿರಾರು ಎಕೆರೆ ಜಮೀನು ಇದೆ ಇನ್ನಾದರೂ ಕಾರ್ಖಾನೆಗಳನ್ನು ಸ್ಥಾಪನೆ ಮಾಡಿ ಸ್ಥಳೀಯವಾಗಿ ಉದ್ಯೋಗ ನೀಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡ ಎಪಿಎಲ್ ರಂಗನಾಥ್. ಪುಷ್ಪಪ್ರಿಯ. ಅಂಜಲಮ್ಮ. ರಾಜ. ಅರ್ಜುನ್. ರಾಜಕುಮಾರ್ ಹಾಗೂ ಅಂಗನವಾಡಿ ಕಾರ್ಯಕರ್ತರು. ಆಟೋ ಸಂಘ. ಬೆಮಲ್ ಸಂಘ. ಬಿಜಿಎಂಎಲ್ ಸಂಘ. ದಲಿತ ಸಂಘ ಇತರ ಎಲ್ಲಾ ಸಂಘ ಸಂಸ್ಥೆಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
