ಕೆಜಿಎಫ್ ನಲ್ಲಿ ಶ್ರೀ ಬಸವೇಶ್ವರ ಜಯಂತಿ ಅದ್ದೂರಿ ಆಚರಣೆ
ಕೆಜಿಎಫ್ :ನಗರದ ತಾಲೂಕು ಕಚೇರಿ ಆವರಣದಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ಸಲ್ಲಿಸುವ ಮೂಲಕ ಮಾತನಾಡಿದ ತಹಶೀಲ್ದಾರ್. ಎಚ್.ಜೆ. ಭರತ್ ಸಾಮಾಜಿಕ ಕ್ರಾಂತಿಕಾರಿ — ಸಮಾನತೆ, ನ್ಯಾಯ, ಮತ್ತು ನೇರ ಭಕ್ತಿಯ ಮೂಲಕ ಸಮಾಜವನ್ನು ಪುನರ್‌ರಚಿಸಿದ ಮಹಾನ್ ಚಿಂತಕ. ನಮ್ಮ ವಿಶ್ವ ಗುರು ಬಸವಣ್ಣನವರು.
ಅವರು 12ನೇ ಶತಮಾನದಲ್ಲಿ ಸಮಾನತೆ ಬಗ್ಗೆ ಜನರಲ್ಲಿ ಅರಿವು ಮೂಡಿಸಿದ ಮಹಾನ್ ಜ್ಞಾನಿ ಅವರು ನೀಡಿರುವ ವಚನಗಳು ಇಂದಿಗೂ ಪ್ರಸ್ತುತ ಅವರ ವಚನಗಳನ್ನು ನಾವು ಮೈಗೂಡಿಸಿಕೊಂಡರೆ ಅದರ ಆಳವನ್ನು ಅರ್ಥ ಮಾಡಿಕೊಂಡರೆ ಜೀವನದ ನಿಜವಾದ ಅನುಭವ ನಮಗೆ ದೊರೆಯುತ್ತದೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣ ಅಧಿಕಾರಿ ನಾರಾಯಣಸ್ವಾಮಿ ಮಾತನಾಡಿ ಬಸವಣ್ಣನವರು ಒಂದು ಜಾತಿಗೆ ಸೀಮತವಾದವರಲ್ಲ ಅವರು ಚಿಂತಕರು ಮೌಡ್ಯಗಳ ಹಾಗೂ ಅಸ್ಪೃಶ್ಯತೆ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು ಅಂದಿನ ಕಾಲದಲ್ಲಿ ಮಹಿಳೆಗೆ ಮೀಸಲಾತಿ ನೀಡಬೇಕು ಎಂದು ಹೋರಾಡಿದರು. ಅವರು ನೀಡಿರುವದಂತಹ ಮಾರ್ಗಸೂಚಿ ಇಂದು ಜಾರಿಗೆ ಬರುತ್ತಿದೆ ಇದು ನಾವು ತಿಳಿದುಕೊಳ್ಳಬೇಕೆಂದು ತಿಳಿಸಿದರು.
ಕನ್ನಡ ಶಕ್ತಿ ಕೇಂದ್ರದ ಅಧ್ಯಕ್ಷರು ಆಗಿರುವ ಬಾ.ಹ. ಶೇಖರಪ್ಪ ಮಾತನಾಡಿ ಜಗದ್ಗುರು ಬಸವಣ್ಣನವರು ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರ ಅವರ ಮಾರ್ಗದರ್ಶನ ದಂತೆ ನಡೆಯೋಣ ಎಂದು ಕರೆ ನೀಡಿದರು.
ವೀರಶೈವ ಲಿಂಗಾಯತ ಸಮಾಜದ ಮುಖಂಡರು ಅಶೋಕ್ ಲೋಣಿ. ಪ್ರತಿಯೊಬ್ಬ ಮನುಷ್ಯ ಜಾತಿ ಧರ್ಮವನ್ನು ಬಿಟ್ಟು ತಾನು ಮಾನವನಾಗಿ ಬದುಕಬೇಕು ಎಂದು ಕಳಿಸಿಕೊಟ್ಟ ಮಹಾನ್ ಜ್ಞಾನಿ ನಮ್ಮ ಬಸವಣ್ಣ ಅಂತಹವರಿಗೆ ಪ್ರತಿಯೊಬ್ಬರೂ ನಾವು ಗೌರವ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಎಸ್ ಪಿ ಆಫೀಸ್ ಮಂಜಣ್ಣ. ಉಪತಾಸಿಲ್ದಾರ್. ಮಂಜುನಾಥ್. ವೀರ ವೆಂಕಟಪ್ಪ ಸಮಾಜದ ಮುಖಂಡರು. ಅಧಿಕಾರಿ ವರ್ಗ ಹಾಜರಿದ್ದರು.
What's Your Reaction?
Like
0
Dislike
0
Love
0
Funny
0
Angry
1
Sad
0
Wow
0
