ಕೆ.ಜಿ.ಎಫ್: ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಖ್ಯಾತ ರೌಡಿಯ ಬಂಧನ
ಕೆ.ಜಿ.ಎಫ್., ಮೇ. 19: ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ಆಂಡ್ರಸನ್‌ಪೇಟೆ ಪೊಲೀಸರು ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರನ್ನು ಬೆದರಿಸಿ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ಟ್ಯಾನ್ಲಿ ಬಿನ್ ಲೇಟ್ ಅರುಲ್ ದಾಸ್ @ ದೊರೈಸ್ವಾಮಿ, 65 ವರ್ಷ, ವಾಸ ಲೂರ್ದನಗರ, ಆಂಡ್ರಸನ್‌ಪೇಟೆ, ಕೆ.ಜಿ.ಎಫ್ ಎಂಬಾತನ ವಿರುದ್ದ ಠಾಣೆಯಲ್ಲಿ 12 ಪ್ರಕರಣಗಳು ದಾಖಲಾಗಿದ್ದು, ಈತನ ವಿರುದ್ದ ಆಂಡ್ರಸನ್‌ಪೇಟೆ ಮತ್ತು ರಾಬರ್ಟ್ಸನ್‌ಪೇಟೆ ಪೊಲೀಸ್ ಠಾಣೆಗಳಲ್ಲಿ ರೌಡಿ ಹಾಳೆಯನ್ನು ತೆರೆದು ನಿರ್ವಹಿಸಿಕೊಂಡು ಬರುತ್ತಿರುತ್ತದೆ. ಈಗಿರುವಲ್ಲಿ ಸ್ಟಾö್ಯನ್ಲಿ@ಸ್ಟಾö್ಯಂಡ್ಲಿ ಎಂಬಾತನು ತಾನೇ ದೊಡ್ಡ ರೌಡಿ, ನಾವು ಹೇಳಿದ ಹಾಗೆ ಏರಿಯಾದಲ್ಲಿ ಕೇಳಬೇಕು ಇಲ್ಲಂದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲವೆಂದು ಸಾರ್ವಜನಿಕರಿಗೆ ಬೆದರಿಕೆ ಹಾಕುವುದು ಮತ್ತು ಆಂಡ್ರಸನ್‌ಪೇಟೆಯ ಮಾರ್ಕೆಟ್ ಏರಿಯಾದಲ್ಲಿ ಹಪ್ತಾ ವಸೂಲಿ (ಹಣ ವಸೂಲಿ) ಮಾಡುತ್ತಿದ್ದು ಈತನ ವಿರುದ್ದ ವಿಶೇಷ ಕಾರ್ಯ ನಿರ್ವಾಹಕ ರವರಾದ ಪೊಲೀಸ್ ಅಧೀಕ್ಷಕರು, ಕೆ.ಜಿ.ಎಫ್ ರವರು ಈತನ ರೌಡಿ ಚಟುವಟಿಕೆಗಳನ್ನು ನಿಯಂತ್ರಿಸಲು ಈತನ ವಿರುದ್ದ ದಿನಾಂಕ: 02.05.2026 ರಿಂದ 01.05.2027 ರವರೆಗೆ 01 ವರ್ಷಗಳ ಕಾಲ ಕಲುಬುರಗಿ ಜಿಲ್ಲೆಯ ಆಳಂದ ನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಿ ಆದೇಶವನ್ನು ಹೊರಡಿಸಿರುತ್ತಾರೆ,
ಲೂರ್ದನಗರ ವಾಸಿಗಳು ಮತ್ತು ವ್ಯಾಪಾರಿಗಳ ಬಳಿ ಗಡಿಪಾರು ಆಸಾಮಿ ಸ್ಟಾö್ಯನ್ಲಿ@ಸ್ಟಾö್ಯಂಡ್ಲಿ ಹಾಗೂ ಆತನ ಮಗ ಲೆನಿನ್ @ ದೊರೈ ಎಂಬುವನೊAದಿಗೆ ಸೇರಿ ಸಾರ್ವಜನಿಕರನ್ನು ಬೆದರಿಸಿ ಹಣವನ್ನು ಸುಲಿಗೆ ಮಾಡುತ್ತಿದ್ದುದ್ದರಿಂದ ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮೊ.ಸಂ:-51/2026 ರ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು, ಸದರಿ ಪ್ರಕರಣದಲ್ಲಿ ಆರೋಪಿ 1 ಲೆನಿನ್ @ ದೊರೈ, ಆರೋಪಿ 2 ಸ್ಟಾö್ಯನ್ಲಿ@ಸ್ಟಾö್ಯಂಡ್ಲಿ ಆಗಿದ್ದು ಆರೋಪಿ 1 ಎಂಬುವವನನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೊಳಪಡಿಸಿರುತ್ತೆ.
ಸ್ಟಾö್ಯನ್ಲಿ@ಸ್ಟಾö್ಯAಡ್ಲಿ ಎಂಬುವವನು ಗಡಿಪಾರು ಆದೇಶವನ್ನು ಉಲ್ಲಂಘನೆ ಮಾಡಿ ಕಲುಬುರಗಿ ಜಿಲ್ಲೆಯಿಂದ ದಿನಾಂಕ:11.05.2026 ರಂದು ಗೈರುಹಾಜರಾಗಿರುವ ಬಗ್ಗೆ ಆಳಂದ ನಗರ ಪೊಲೀಸ್ ಠಾಣೆ ರವರು ನೀಡಿದ ವರದಿಯನ್ನಾಧರಿಸಿ ಆತನ ವಿರುದ್ದ ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮೊ.ಸಂ 52/2026 ರಂತೆ ಕೆ.ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿದ್ದು, ಈ ಎರಡೂ ಪ್ರಕರಣಗಳಲ್ಲಿ ಆರೋಪಿಯಾಗಿರುವ ಸ್ಟಾö್ಯನ್ಲಿ@ಸ್ಟಾö್ಯಂಡ್ಲಿ ಎಂಬುವವನು ಸುಸೈಪಾಳ್ಯಂನಲ್ಲಿರುವ ಸೆಂಟ್ ಜೋಸೆಪ್ ಚರ್ಚ್ ನ ಕಾಂಪೌಂಡ್ ಒಳಗಡೆ ಇರುವುದಾಗಿ ಭಾತ್ಮಿದಾರರಿಂದ ಮಾಹಿತಿ ಬಂದಿದ್ದು, ಅದರಂತೆ ಆರೋಪಿಯನ್ನು ಠಾಣಾ ಮೊ.ಸಂ 51/2026 ರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ತಿಳಿಸಲು ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯ ಪಿ.ಎಸ್.ಐ ಮಂಜುನಾಥ.ಬಿ, ರವರು ಸಂಬಂಧಿಸಿದಂತೆ ಚರ್ಚ್ನ ಗೇಟ್ ಬಳಿ ಹೋಗಿ ಸ್ಟಾö್ಯನ್ಲಿ@ಸ್ಟಾö್ಯಂಡ್ಲಿ ಎಂಬಾತನನ್ನು ಕುರಿತು ನಿಮ್ಮ ವಿರುದ್ದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆಗೆ ಹಾಜರಾಗಲು ಬರಬೇಕೆಂದು ಕರೆದಾಗ ಆರೋಪಿ ಸ್ಟಾ÷್ಯನ್ಲಿ@ಸ್ಟಾ÷್ಯಂಡ್ಲಿ ಮತ್ತು ಆತನ ಮಕ್ಕಳು ಪೊಲೀಸರನ್ನು ಅಡ್ಡಗಟ್ಟಿ ತಡೆದು ತಳ್ಳಾಡಿ ಅವಾಚ್ಯ ಶಬ್ದಗಳಿಂದ ಬಾಯಿಗೆ ಬಂದಂತೆ ಬೈದು ಪೊಲೀಸ್ ಸಮವಸ್ತçದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲಿಸರ ವಿಧಿಬದ್ದ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ. ನಂತರ ಆರೋಪಿ ಸ್ಟಾ÷್ಯನ್ಲಿ@ಸ್ಟಾ÷್ಯಂಡ್ಲಿ ಎಂಬಾತನನ್ನು ಬೆದರಿಕೆ ಮತ್ತು ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೊಳಪಡಿಸಿರುತ್ತಾರೆ. ಅವಾಚ್ಯ ಶಬ್ದಗಳಿಂದ ಬಾಯಿಗೆ ಬಂದಂತೆ ಬೈದು ಪೊಲೀಸ್ ಸಮವಸ್ತçದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತಮ್ಮ ವಿಧಿಬದ್ದ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಸ್ಟಾ÷್ಯನ್ಲಿ@ಸ್ಟಾ÷್ಯಂಡ್ಲಿ ಮತ್ತು ಆತನ ಮಕ್ಕಳ ವಿರುದ್ದ ಆಂಡ್ರಸನ್‌ಪೇಟೆ ಪಿ.ಎಸ್.ಐ ರವರು ದೂರನ್ನು ನೀಡಿದ್ದು ಅವರ ವಿರುದ್ಧ ಠಾಣಾ ಮೊ.ಸಂ: 53/2026 ರ ರೀತ್ಯಾ ಪ್ರಕರಣ ದಾಖಲಾಗಿದ್ದು ತನಿಖೆಯಲ್ಲಿರುತ್ತದೆ
ಪೊಲೀಸ್ ಉಪಾಧೀಕ್ಷಕರಾದ ವಿ. ಲಕ್ಷ್ಮಯ್ಯ ಮತ್ತು ರಾಬರ್ಟ್ಸನ್‌ಪೇಟೆ ವೃತ್ತ ನಿರೀಕ್ಷಕರಾದ ಅನಿಲ್ ಕುಮಾರ್.ಎಮ್.ಎಸ್. ಮಾರ್ಗದರ್ಶನದಲ್ಲಿ ರೌಡಿ ಆಸಾಮಿಯನ್ನು ಬಂಧಿಸುವಲ್ಲಿ ಪಿ.ಎಸ್.ಐ ಮಂಜುನಾಥ.ಬಿ, ಮನ್ಮಥ (ಪ್ರೋ), ಸಿಬ್ಬಂದಿಗಳಾದ ರಾಜೇಂದ್ರ, ನಟರಾಜ್, ಸತೀಶ್, ಮದುಕುಮಾರ್, ಶಶಿಕುಮಾರ್, ಲೋಕೇಶ್, ಕು.ಲಾವಣ್ಯ ಮತ್ತು ಜೀಪ್ ಚಾಲಕರಾದ ಮನೋಹರ್ ರವರುಗಳನ್ನೊಳಗೊಂಡ ತಂಡವು ಯಶಸ್ವಿಯಾಗಿದ್ದು, ಇವರ ಉತ್ತಮ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ರವರು ಶ್ಲಾಘಿಸಿದ್ದಾರೆ.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
