ಕೆಜಿಎಫ್ ಅಶೋಕ್ ಟವರ್ ಅಂಗಡಿಯಲ್ಲಿ ಅಗ್ನಿ ಆಕಸ್ಮಿಕ ಘಟನೆ
ಕೆಜಿಎಫ್: ಕೆಜಿಎಫ್ ನಗರದ ಅಶೋಕ್ ಟವರ್ ಮೂರನೇ ಮಹಡಿಯಲ್ಲಿ ಎಸಿ. ಮಿಷನಲ್ಲಿ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಆವರಿಸಿದ್ದು, ಬೆಂಕಿಗೆ ಅಲ್ಲಿ ಇದ್ದಂತ ಮರದ ಪ್ಲೇವುಡ್‌ಗಳು ಸುಟ್ಟು ಕರಕಲಾಗಿದೆ. ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಎಸಿ ಯಂತ್ರವನ್ನು ಬಿಚ್ಚಿ ನೀರು ಹಾಕಿ ಬೆಂಕಿಯನ್ನು ನಂದಿಸಿದರು.
ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲ. ಎಂದು ಅಗ್ನಿಶಾಮಕ ದಳ ಸಿಬ್ಬಂದಿ ತಿಳಿಸಿದ್ದಾರೆ. ಅದೇ ರೀತಿಯಾಗಿ ಬಿಸಿಲು ಹೆಚ್ಚಾಗಿದ್ದು ತಮ್ಮ ಮನೆಗಳ ಪಕ್ಕದಲ್ಲಿ ಒಣಗಿದ ಮರ ಗಿಡ ಹುಲ್ಲನ್ನು ತೆಗೆಯಬೇಕು.
ನಮ್ಮ ಮನೆಗಳ ಪಕ್ಕದಲ್ಲಿ ನಿಮಗೆ ಬೆಂಕಿ ಕಾಣಿಸಿಕೊಂಡಾಗ ತಕ್ಷಣ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ತಿಳಿಸಿ ಮುಂದೆ ಆಗುವ ಅನಾಹುತವನ್ನು ತಪ್ಪಿಸಬೇಕೆಂದು ತಿಳಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
