ಕೊಡಿಗೇಹಳ್ಳಿಯಲ್ಲಿ ನೂತನ ಶ್ರೀ ವೇಣುಗೋಪಾಲಸ್ವಾಮಿ ದೇಗುಲ ಜೀರ್ಣೋದ್ದಾರ
ಬೇತಮಂಗಲ: ಇಲ್ಲಿಗೆ ಸಮೀಪದ ವೆಂಗಸಂದ್ರ ಗ್ರಾಪಂ ವ್ಯಾಪ್ತಿಯ ಕೊಡಿಗೇಹಳ್ಳಿ ಗ್ರಾಮದಲ್ಲಿ ನೂತನವಾಗಿ ಶ್ರೀ ವೇಣುಗೋಪಾಲ ಸ್ವಾಮಿಯ ದೇಗುಲವು ಗ್ರಾಮಸ್ಥರು ಮತ್ತು ಭಕ್ತಾದಿಗಳ ಸಹಕಾರದೊಂದಿಗೆ ದೇವಾಲಯದ ಜೀರ್ಣೋದ್ದಾರ ಅತ್ಯಂತ ವೈಭವದಿಂದ ನಡೆಯಿತು.
ಎರಡು ದಿನಗಳಿಂದಲೇ ದೇವಾಲಯದ ಆವರಣದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ವಿಧಿ ವಿಧಾನಗಳಲ್ಲಿ ಶಾಸ್ತ್ರೋಕ್ತವಾಗಿ ಜರುಗಿದವು, ಗ್ರಾಮಸ್ಥರು ಬಿಳಿ ವಸ್ತ್ರಗಳನ್ನು ಧರಿಸಿ ಹೋಮ ಹವನಗಳಲ್ಲಿ ಭಾಗವಹಿಸಿ ಕಳಶಗಳನ್ನು ಹೊತ್ತು ದೇವಸ್ಥಾನದ ಸುತ್ತ ಪ್ರದರ್ಶನ ಮಾಡಿ ದೇವರ ಕೃಪೆಗೆ ಪಾತ್ರರಾದರು.
ಶ್ರೀ ವೇಣುಗೋಪಾಲ ಸ್ವಾಮಿಯ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ನೆರವೇರಿಸಲಾಯಿತು, ತಾಲ್ಲೂಕಿನ ಶಾಸಕಿ ರೂಪಕಲಾ ಶಶಿಧರ್ ಹಾಗೂ ಸಮಾಜಸೇವಕ ವಿ ಮೋಹನ್ ಕೃಷ್ಣ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದರು.
ದೇವಾಲಯದ ಅಲಂಕಾರ: ದೇವಾಲಯವನ್ನು ತೋರಣ ತರಳಿ ಮತ್ತು ವಿವಿಧ ಬಗೆಯ ಹೂವುಗಳಿಂದ ಸಿಂಗರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದೀಪಗಳನ್ನು ಅಲಂಕರಿಸಲಾಗಿತ್ತು ಹಿಂದೂ ಧಾರ್ಮಿಕ ಸಂಕೇತವಾದ ಕೇಸರಿಮಯ ಬಾವುಟಗಳನ್ನು ದೇಗುಲದ ಸುತ್ತು ಕಟ್ಟಿ ಅಲಂಕರಿಸಲಾಗಿತ್ತು.
ಭಕ್ತಾದಿಗಳಿಗೆ ಅನ್ನಸಂತರ್ಪಣೆ: ಶ್ರೀ ವೇಣುಗೋಪಾಲ ಸ್ವಾಮಿ. ದೇವಾಲಯ ಜೀರ್ಣೋದ್ದಾರ ಅಂಗವಾಗಿ ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಮತ್ತು ಸಾರ್ವಜನಿಕರಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಶಾಸಕಿ ರೂಪಕಲಾ ಹಾಗೂ ಸಮಾಜಸೇವಕ ವಿ. ಮೋಹನ್ ಕೃಷ್ಣ ಹಾಗೂ ಗ್ರಾಮಸ್ಥರು ಹಾಗೂ ಗ್ರಾಮದ ಯುವಕರು ಉಪಸ್ಥಿತರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
