ಕ್ರೀಡೆಯಿಂದ ಮಕ್ಕಳ ಆರೋಗ್ಯ ವೃದ್ಧಿ: ಎಸ್.ಪಿ.ಶಿವಾಂಶು ರಜಪೂತ್

Apr 19, 2026 - 13:54
Apr 19, 2026 - 13:55
 0  23
ಕ್ರೀಡೆಯಿಂದ ಮಕ್ಕಳ ಆರೋಗ್ಯ ವೃದ್ಧಿ: ಎಸ್.ಪಿ.ಶಿವಾಂಶು ರಜಪೂತ್
ಸುದ್ದಿ ಕಿರಣ ನ್ಯೂಸ್ ಡೆಸ್ಕ್

ಕೆಜಿಎಫ್: ಕ್ರೀಡೆಯಿಂದ ಮಕ್ಕಳ ಆರೋಗ್ಯ ವೃದ್ಧಿಯಾಗುತ್ತದೆ. ಮಕ್ಕಳಲ್ಲಿ ಕ್ರಿಯಾಶೀಲತೆ ಹೆಚ್ಚಾಗುತ್ತದೆ ಅದೇ ರೀತಿಯಾಗಿ ಓದಿನ ಕಡೆ ಗಮನ ಹರಿಸಲು ಸಹಕಾರಿಯಾಗುತ್ತದೆ ಎಂದು ನಗರದ ಚಾಂಪಿಯನ್ ರಿಫ್ ಫುಟ್ಬಾಲ್ ಮೈದಾನದಲ್ಲಿ ಬೇಸಿಗೆ ಫುಟ್ಬಾಲ್ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸಿ ಮಾತನಾಡಿದ ಕೆಜಿಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ 

ಈಗಿನ ಯುವಜನತೆ ಮೊಬೈಲ್ ವ್ಯಾಮೋಹಕ್ಕೆ ಬಲಿಯಾಗಿದ್ದು, ಗಾಂಜಾ. ತಂಬಾಕು. ಗುಟ್ಕಾ. ಇಂತಹ ಮಾದಕ ವಸ್ತುಗಳಿಗೆ ದಾಸರಾಗಿದ್ದಾರೆ. ಆದ್ದರಿಂದ ಪೋಷಕರು ಮಕ್ಕಳು ಶಾಲೆಗೆ ಹೋಗುತ್ತಾರ ಅವರ ಸ್ನೇಹಿತರು ಯಾರು ಮಕ್ಕಳ ನಡತೆ ಬಗ್ಗೆ ನಿಗಾ ಇಡಬೇಕು. ಶಾಲೆ ಕಾಲೇಜುಗಳು ಹಾಗೂ ತಮ್ಮ ವಾಸ ಸ್ಥಳಗಳ ಹತ್ತಿರ ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದರೆ ತಕ್ಷಣ ನನ್ನ ಗಮನಕ್ಕೆ ತನ್ನಿ ಎಂದು ಹೇಳಿದರು. 

ಪೊಲೀಸ್ ಇಲಾಖೆಯ ತುರ್ತು ಸಂಖ್ಯೆ ೧೧೨ ಗೆ ಕರೆ ಮಾಡಿದರೆ 10 ನಿಮಿಷದಲ್ಲಿ ಘಟನಾ ಸ್ಥಳಕ್ಕೆ ನಮ್ಮ ಸಿಬ್ಬಂದಿಗಳು ಆಗಮಿಸುತ್ತಾರೆ ಏನೇ ಸಮಸ್ಯೆ ಇದ್ದರೂನು ಭಯಪಡದೆ ನಮಗೆ ಮಾಹಿತಿ ನೀಡಬೇಕೆಂದು ತಿಳಿಸಿದರು. 

ಫುಟ್ಬಾಲ್ ಕ್ರೀಡೆಯಲ್ಲಿ ಪಾಲ್ಗೊಂಡು ಖುಷಿಯಾಗಿದ್ದ ಮಕ್ಕಳ ಜೊತೆ ಚರ್ಚಿಸಿ ಸಲಹೆ ನೀಡಿದರು. ಹಾಯ್ ಗ್ರೌಂಡ್ ಫುಟ್ಬಾಲ್ ಕ್ಲಬ್ ಅಸೋಸಿಯೇಷನ್ ಅಧ್ಯಕ್ಷರು ವಿಮಲ್ . ನವ ಕುಮಾರ್ . ಸಂದಿಲ್. ಸಮಾಜ ಸೇವಕರ ಲಿಯೋ ಜೋಸೆಫ್. ರಾಮಕೃಷ್ಣ. ಪ್ರಜಾವಾಣಿ ಕೃಷ್ಣಮೂರ್ತಿ. ಯುವ ಮುಖಂಡ ಕಿರಣ್ ರಾಜ್. ಮೊದಲಾದವರು ಭಾಗವಹಿಸಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456