ನ. ನಾಗಲಿಂಗ ಸ್ವಾಮಿ ಯವರನ್ನು ಸ್ಮರಿಸಿದ ಮಾಜಿ ಮೂಡ ಅಧ್ಯಕ್ಷ ಹೆಚ್.ವಿ.ರಾಜೀವ್

Dec 2, 2025 - 13:02
 0  7
ನ. ನಾಗಲಿಂಗ ಸ್ವಾಮಿ ಯವರನ್ನು ಸ್ಮರಿಸಿದ ಮಾಜಿ ಮೂಡ ಅಧ್ಯಕ್ಷ ಹೆಚ್.ವಿ.ರಾಜೀವ್

   ಮೈಸೂರು: ನ. ನಾಗಲಿಂಗ ಸ್ವಾಮಿ ಅವರು ಹುಟ್ಟು ಹೋರಾಟಗಾರರು ಹಾಗೂ ಸಾಹಿತಿಗಳು ಅಂಥವರು ಈಗ ಇದ್ದಿದ್ದರೆ ಕನ್ನಡ ಪರ ಹೋರಾಟಗಾರರಿಗೆ ಬೆಂಬಲವಾಗಿ ನಿಲ್ಲುತ್ತಿದ್ದರು ಎಂದು ಮೂಡ ಮಾಜಿ ಅಧ್ಯಕ್ಷ ಹೆಚ್.ವಿ.ರಾಜೀವ್ ತಿಳಿಸಿದರು.

ರಾಜ್ಯ ಪ್ರಶಸ್ತಿ ಪುರಸ್ಕೃತ ಸಾಹಿತಿ ಕನ್ನಡ ಕ್ರಾಂತಿದಳ ಸಂಘಟನೆಯ ಸಂಸ್ಥಾಪಕ ಕನ್ನಡ ಯೋಧ ನ. ನಾಗಲಿಂಗ ಸ್ವಾಮಿ ಅವರ ಜನ್ಮದಿನಾಚರಣೆಯನ್ನು ಮೈಸೂರಿನ ಪದ್ಮ ಚಿತ್ರ ಮಂದಿರ ಬಳಿ ( ಉದ್ದೇಶಿತ ನ ನಾಗಲಿಂಗ ಸ್ವಾಮಿ ವೃತ್ತ ) ಅರ್ಥಪೂರ್ಣವಾಗಿ ಆಚರಿಸಿದ ವೇಳೆ ರಾಜೀವ್ ಮಾತನಾಡಿದರು.

ಇಂತಹ ಮಹಾನಿಯರ ಜನ್ಮದಿನವನ್ನು ಆಚರಿಸಲು ನಮಗೆ ತುಂಬಾ ಸಂತೋಷವಾಗುತ್ತದೆ ಎಂದು ನುಡಿದರು.
ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷ ಚಂದ್ರಶೇಖರ್ ಅವರು ಮಾತನಾಡಿ ನ ನಾಗಲಿಂಗ ಸ್ವಾಮಿ ಅವರು ಒಂದು ದಂತಕಥೆ ಲಕ್ಷಾಂತರ ಜನರಿಗೆ ಸನ್ಮಾನ ಪ್ರಶಸ್ತಿ ಯನ್ನು ನೀಡಿದ್ದರು  ಕನ್ನಡಕ್ಕಾಗಿಯೇ ಜೀವನವನ್ನೇ ಮುಡಿಪಾಗಿಟ್ಟ ಮೇರು ವ್ಯಕ್ತಿ ಎಂದು ತಿಳಿಸಿದರು

ಸುಣ್ಣದ ಕೆರೆ ರಮೇಶ್ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ತಂದೆ ತಾಯಂದಿರನ್ನು ಮನೆಯಲ್ಲಿ ನೋಡಿಕೊಳ್ಳುವುದೇ ಒಂದು ದೊಡ್ಡ ಕೆಲಸವಾಗಿದೆ  ಆಶ್ರಮಗಳಿಗೆ ಸೇರಿಸುತ್ತಿದ್ದಾರೆ ಇಂತಹ ದಿನಗಳಲ್ಲಿ ನಾಗಲಿಂಗ ಸ್ವಾಮಿಯಂತಹ ಹೋರಾಟಗಾರರ ಮಗ ತೇಜಸ್ವಿ ನಾಗಲಿಂಗಸ್ವಾಮಿ ಅವರು ಅವರ ತಂದೆಯ ನೆನಪಿಗಾಗಿ ಹುಟ್ಟು ಹಬ್ಬ ಆಚರಿಸುತ್ತಿರುವುದು ತುಂಬಾ ಹೆಮ್ಮೆಯ ವಿಷಯ ಎಂದು ತಿಳಿಸಿದರು.

ಈ ವೇಳೆ ನ ನಾಗಲಿಂಗ ಸ್ವಾಮಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ಈ ಮೂಡ ಮಾಜಿ ಅಧ್ಯಕ್ಷರಾದ ಎಚ್ ವಿ ರಾಜೀವ್, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಚಂದ್ರ ಶೇಖರ್, ಸಮಾಜ ‌ಸೇವಕರಾದ ಅಟೋ ಮಹೇಶ್, ತೇಜಸ್ವಿ ನಾಗಲಿಂಗಸ್ವಾಮಿ, ಕೆ, ಆರ್, ಬ್ಯಾಂಕ್ ಅಧ್ಯಕ್ಷ ಬಸಪ್ಪ, ಸಮಾಜ ‌ಸೇವಕರಾದ ಸುಣ್ಣದ ಕೇರಿ ರಮೇಶ್, ನಗರ ಪಾಲಿಕೆ ಮಾಜಿ ಸದಸ್ಯರಾದ ಪಾರ್ಥಸಾರಥಿ, ಮೂಗೂರು ನಂಜುಂಡ ಸ್ವಾಮಿ, ತೇಜಸ್ವಿನಿ ನಾಗಲಿಂಗ ಸ್ವಾಮಿ, ಮುಖಂಡರಾದ ಭಾಸ್ಕರ್, ವೀರಶೈವ ಮೂರ್ತಿ, ಪಡುವಾರಳ್ಳಿ ಪಾಪಣ್ಣ, ಕನ್ನಡ ಕ್ರಾಂತಿದಳ ಮೈಸೂರು ಜಿಲ್ಲಾಧ್ಯಕ್ಷ ಲೋಹಿತ್ ಅರಸ್, ಹೋರಾಟಗಾರ್ತಿ ಕಲಾಧನು, ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456