ಪ್ರೇಕ್ಷಕರನ್ನು ಚಿಂತೆಗೆ ಹಚ್ಚಬಲ್ಲ ಚಿತ್ರವಾಗಲಿದೆ- "ಅವಧೂತ"
ಬೆಂಗಳೂರು, ಮಾರ್ಚ್ 23: ನಗರದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಜೆ ಡಿ ಎನ್ ಮೂವೀಸ್ ಅರ್ಪಿಸಿ, ಸ್ಫೂರ್ತಿ ಕ್ರಿಯೇಷನ್ಸ್ ನಿರ್ಮಿಸುತ್ತಿರುವ " ಅವಧೂತ " ಚಲನಚಿತ್ರದ ಶೀರ್ಷಿಕೆಯನ್ನು ಅನಾವರಣ ಗೊಳಿಸಲಾಯಿತು. ಶ್ರೀಮತಿ. S. ಅಶ್ವಿನಿ ಯವರು ಶೀರ್ಷಿಕೆಯನ್ನು ಅನಾವರಣಗೊಳಿಸಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು. ಅನುಭವಿ ನಿರ್ದೇಶಕ ಗಂಧರ್ವ ರಾಯರಾವುತ ನಿರ್ದೇಶಸುತ್ತಿರುವ ಈ ಚಿತ್ರಕ್ಕೆ ಡಾ. ಜೋಗಿಲ ಸಿದ್ದರಾಜು ಅವರ ಸಂಗೀತ ಸಂಯೋಜನೆಯಿದ್ದು, ಅವಿರತ ಹರೀಶ್ ಅವರು ಸಾಹಿತ್ಯ - ಸಂಭಾಷಣೆಯ ಹೊಣೆ ಹೊತ್ತಿದ್ದಾರೆ. ಶ್ರೀರಾಮ್ ಗಂಧರ್ವ ಹಾಗೂ ಶಶಿಕಲಾ ಅವರ ಹಿನ್ನಲೆ ಗಾಯನವಿದೆ. ತಾರಾಗಣದಲ್ಲಿ ಬಹುತೇಕ ನುರಿತ ರಂಗಭೂಮಿಯ ಕಲಾವಿದರಿದ್ದು, ಅನೇಕ ನವಪ್ರತಿಭೆಗಳು ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಜೆ ಡಿ ಎನ್ ಮೂವೀಸ್ ನ ಮಾಲೀಕರಾದ ಶ್ರೀ ಜೆ. ಧನರಾಜ್ ನಾಯ್ಡು ರವರ ಸಾರಥ್ಯದಲ್ಲಿ ಇಡೀ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
What's Your Reaction?
Like
2
Dislike
0
Love
0
Funny
0
Angry
0
Sad
0
Wow
0
