ಪ್ರೇಕ್ಷಕರಿಗೆ ರಸದೌತಣ ನೀಡಿದ ದಾಸನಮನ
ಬೆಂಗಳೂರು: ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ನಗರದ ಪವಮಾನಪುರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀಮಠದ ವಿಚಾರಣಾಕರ್ತರಾದ ಶ್ರೀ ಗಿರಿರಾಜಾಚಾರ್ ಅವರ ನೇತೃತ್ವದಲ್ಲಿ ಹನುಮ ಜಯಂತಿ ಉತ್ಸವದ ಅಂಗವಾಗಿ ಏಪ್ರಿಲ್ 2, ಗುರುವಾರದಂದು ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯುವ ಗಾಯಕಿ ವಿದುಷಿ ಅನುಕೃಪ ಆರ್. ಪುರೋಹಿತ್ ಅವರು ದಾಸನಮನ ಕಾರ್ಯಕ್ರಮ ನಡೆಸಿಕೊಟ್ಟರು.
"ಗಜವದನ ಪಾವನ" ಎಂಬ ವಿಘ್ನೇಶ್ವರನ ಕೃತಿಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಿದ ಗಾಯಕಿ ತುಂಗಾ ತೀರದಿ, ಯಾಕೆ ಮೂಕನಾದ್ಯೋ, ಶಿವನೇ ನಾ ನಿನ್ನ ಸೇವಕನಯ್ಯ, ಒಂದು ಬಾರಿ ಸ್ಮರಣೆ ಸಾಲದೆ, ಪವಮಾನ ಜಗದ ಪ್ರಾಣ, ಹನುಮಾನ್ ಕೀ ಜೈ, ಬಾರೆ ಭಾಗ್ಯದ ನಿಧಿಯೇ, ಕಾಯೇ ಕಮಲಾಲಯೇ, ಕೃಷ್ಣ ನೀ ಬೇಗನೆ ಬಾರೋ, ಸರಿದೇನೋ ನಿನ್ನ, ಕಂಡೆ ನಾ ಗೋವಿಂದನ, ರಾಮ ಮಂತ್ರ ಜಪಿಸೋ ಹೀಗೆ ಇನ್ನೂ ಅನೇಕ ಹರಿದಾಸರ ಪದಗಳನ್ನು ತಾರತಮ್ಯೋಕ್ತವಾಗಿ ಮತ್ತು ಸುಶ್ರಾವ್ಯವಾಗಿ ಹಾಡಿ ನೆರೆದಿದ್ದ ಪ್ರೇಕ್ಷಕರ ಮನಸೆಳೆದರು.
ಇವರ ಗಾಯನಕ್ಕೆ ಕೀಬೋರ್ಡ್ ವಾದನದಲ್ಲಿ ವಿದ್ವಾನ್ ಶ್ರೀ ಬಿ.ಆರ್. ಪ್ರಕಾಶ್, ತಬಲಾ ವಾದನದಲ್ಲಿ ವಿದ್ವಾನ್ ಶ್ರೀ ಶ್ರೀನಿವಾಸ ಕಾಖಂಡಕಿ ಮತ್ತು ತಾಳದಲ್ಲಿ ಚಿ|| ಶ್ರೀಪಾದ ಕಾಖಂಡಕಿ ಸಾಥ್ ನೀಡಿದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
