ಮೇರು ಕಲಾವಿದನ ಪ್ರದರ್ಶನದಿಂದಲೇ ಕಲೆಗೆ ಬೆಲೆ: ವಿದುಷಿ ಉಷಾ ಬಸಪ್ಪ   

Mar 9, 2026 - 16:32
Mar 9, 2026 - 16:39
 0  33
ಮೇರು ಕಲಾವಿದನ ಪ್ರದರ್ಶನದಿಂದಲೇ ಕಲೆಗೆ ಬೆಲೆ: ವಿದುಷಿ ಉಷಾ ಬಸಪ್ಪ   

      ಬೆಂಗಳೂರು: ತಮ್ಮ ನೃತ್ಯ ಪ್ರಸ್ತುತಿಯಿಂದಲೇ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಗಳಿಸಿರುವ ವಿದ್ವಾನ್ ಡಾ|| ಸಂಜಯ್ ಶಾಂತರಾಮ್ ರವರು ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಇತ್ತೀಚೆಗೆ ನಗರದ ಸೇವಾ ಸದನದಲ್ಲಿ ಹಮ್ಮಿಕೊಂಡಿದ್ದ   "ಕವಿ ಕಾವ್ಯ ನಮನ" ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ವಿದುಷಿ ಉಷಾ ಬಸಪ್ಪನವರು, ವಿದ್ವಾನ್ ಡಾ|| ಸಂಜಯ್ ಶಾಂತರಾಮ್ ಅವರನ್ನು   ಹೃದಯಪೂರ್ವಕವಾಗಿ ಅಭಿನಂದಿಸಿ, ಶ್ರೀಯುತ ಸಂಜಯ್ ಶಾಂತರಾಮ್ ಅವರು ನಮ್ಮ ನಾಡಿನ 'ನೃತ್ಯ ರತ್ನ'. ಬಾಲ ಪ್ರತಿಭೆಯಿಂದಲೇ ನೃತ್ಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಇವರು  ನೃತ್ಯಗಾರರು, ಬರಹಗಾರರು, ಹಾಡುಗಾರರು, ನಟರು, ಬಹುಮುಖ ಪ್ರತಿಭೆಯ ಮೇರು ಕಲಾವಿದರು.

ಇಂಥವರಿಂದಲೇ ಕಲೆಗೆ ಬೆಲೆ ಬರುತ್ತದೆ ಎಂದು ಅಭಿಪ್ರಾಯಪಟ್ಟರು. ಈ ಕಾರ್ಯಕ್ರಮದಲ್ಲಿ ವಿದುಷಿ ಬಿ. ಸುನಂದಾದೇವಿ, ವಿದುಷಿ ರೇಖಾ ಜಗದೀಶ್,  ಗುರು ವಿಜಯ್ ಶಂಕರ್ ರವರು ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಶ್ರೀಯುತ ಸಂಜಯ್ ಶಾಂತರಾಮ್ ಅವರ ನೃತ್ಯ ಪ್ರಸ್ತುತಿಗೆ ಪ್ರೇಕ್ಷಕರು ಎದ್ದುನಿಂತು ಚಪ್ಪಾಳೆ ತಟ್ಟಿ ಅಭಿನಂದಿಸಿದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456