ಬೀರನಕುಪ್ಪ ಟ್ರ್ಯಾಕ್ಟರ್ ದುರಂತ: ಮೃತರ ಕುಟುಂಬಕ್ಕೆ ಸಮಾಜಸೇವಕ ವಿ. ಮೋಹನ್ ಕೃಷ್ಣ ಸಾಂತ್ವನ

Apr 21, 2026 - 15:20
Apr 21, 2026 - 15:21
 0  3
ಬೀರನಕುಪ್ಪ ಟ್ರ್ಯಾಕ್ಟರ್ ದುರಂತ: ಮೃತರ ಕುಟುಂಬಕ್ಕೆ ಸಮಾಜಸೇವಕ ವಿ. ಮೋಹನ್ ಕೃಷ್ಣ ಸಾಂತ್ವನ
ಸುದ್ದಿ ಕಿರಣ ನ್ಯೂಸ್ ಡೆಸ್ಕ್

ಬೇತಮಂಗಲ: ಇತ್ತೀಚೆಗೆ ಇಲ್ಲಿಗೆ ಸಮೀಪದ ಬೀರನಕುಪ್ಪ ಹಾಗೂ ಕಾವೇರಹಳ್ಳಿ ಗ್ರಾಮದ ಮಾರ್ಗ ಮದ್ಯೆ ನಡೆದ ಭೀಕರ ಟ್ರ್ಯಾಕ್ಟರ್ ಅಪಘಾತದಲ್ಲಿ ಅಕಾಲಿಕ ಮರಣ ಹೊಂದಿದ ಯುವಕರ ಕುಟುಂಬಸ್ಥರನ್ನು ಸಮಾಜಸೇವಕ ವಿ. ಮೋಹನ್ ಕೃಷ್ಣ ಭೇಟಿ ನೀಡಿ ಮೃತರ ಕುಟುಂಬಸ್ತರಿಗೆ ಧೈರ್ಯ ತುಂಬಿದರು. 

ಬೀರನಕುಪ್ಪ & ಕಾವೇರಹಳ್ಳಿ ಮಾರ್ಗ ಮದ್ಯೆ ಸಂಭವಿಸಿದ ಟ್ರ್ಯಾಕ್ಟರ್ ಮಗುಚಿಬಿದ್ದ ದುರ್ಘಟನೆಯಲ್ಲಿ ಸ್ಥಳೀಯ ಯುವಕರಾದ ಲಕ್ಷ್ಮೀ ನಾರಾಯಣ ಹಾಗೂ ದರ್ಶನ್ ಜೀವ ಕಳೆದುಕೊಂಡಿದ್ದರು. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಸಮಾಜ ಸೇವಕ ಮೋಹನ್ ಕೃಷ್ಣ ಗ್ರಾಮಕ್ಕೆ ಭೇಟಿ ನೀಡಿ ಮೃತರ ಪೋಷಕರು ಹಾಗೂ ಸಂಬಂಧಿಕರನ್ನು ಭೇಟಿ ಮಾಡಿ ತೀವ್ರ ಸಂತಾಪ ವ್ಯಕ್ತಪಡಿಸಿದರು. 

ಈ ವೇಳೆ ಮಾತನಾಡಿದ ಅವರು, ಯುವಕರ ಸಾವು ಇಡೀ ಗ್ರಾಮಕ್ಕೆ ಹಾಗೂ ಅವರ ಕುಟುಂಬಕ್ಕೆ ತುಂಬಲಾರದ ನಷ್ಟ ಮನೆಯ ಆಧಾರ ಸ್ತಂಭವಾಗಬೇಕಿದ್ದ ಯುವಕರು ಈ ರೀತಿ ಅಪಘಾತದಲ್ಲಿ ಬಲಿಯಾಗಿರುವುದು ಅತ್ಯಂತ ನೋವಿನ ಸಂಗತಿ. ಭಗವಂತ ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ನಾವು ಸದಾ ಅವರ ಜೊತೆಗಿರುತ್ತೇವೆ ಎಂದು ತಿಳಿಸಿದರು 

*ಮೃತರ ಕುಟುಂಬಸ್ಥರಿಗೆ ವೈಯಕ್ತಿಕ ನೆರವು:* ಬೀರನಕುಪ್ಪ ಗ್ರಾಮದ ವ್ಯಾಪ್ತಿಯಲ್ಲಿ ಸಂಭವಿಸಿದ ಟ್ರ್ಯಾಕ್ಟರ್ ಮಗುಚಿಬಿದ್ದ ದುರ್ಘಟನೆಯಲ್ಲಿ ಸ್ಥಳೀಯ ಯುವಕರಾದ ಲಕ್ಷ್ಮೀ ನಾರಾಯಣ ಹಾಗೂ ದರ್ಶನ್ ಮರಣ ಹೊಂದಿದ್ದು ಲಕ್ಷ್ಮೀ ನಾರಾಯಣ್ ನಿಗೆ ಒಬ್ಬ ಸಹೋದರಿ ಮತ್ತು ದರ್ಶನ್ ನಿಗೆ ಒಬ್ಬ ಸಹೋದರಿ ಇದ್ದು ಇವರ ಕುಟುಂಬಸ್ಥರು ತೀರಾ ಆರ್ಥಿಕವಾಗಿ ಹಿಂದುಳಿದಿರುತ್ತಾರೆ ಆ ಹೆಣ್ಣು ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕಾಗಿ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು. 

*ಪೋಷಕರಲ್ಲಿ ಮನವಿ:* ಮಕ್ಕಳಿಗೆ ವಾಹನ ಚಾಲನೆ ಮಾಡಕ್ಕೆ ಬರದೇ ಇದ್ದಲ್ಲಿ ಪೋಷಕರು ದಯವಿಟ್ಟು ಮಕ್ಕಳಿಗೆ ವಾಹನಗಳು ಚಲಾಯಿಸಲು ಕೊಡಬೇಡಿ ಹಾಗೂ ಪ್ರಸ್ತುತ ಬೇಸಿಗೆ ಕಾಲ ಇರುವುದರಿಂದ ಮಕ್ಕಳು ಕೆರೆ ಕುಂಟೆ ಭಾವಿ ಕೃಷಿ ಹೊಂಡ ಗಳಲ್ಲಿ ಈಜು ಹೊಡೆಯಲು ಹೋಗುತ್ತಾರೆ ಇದರಿಂದ ಪೋಷಕರು ಮಕ್ಕಳ ಬಗ್ಗೆ ಜಾಗ್ರತೆಯಿಂದ ಇರಬೇಕು ಎಂದು ಪೋಷಕರಲ್ಲಿ ಮನವಿ ಮಾಡಿದರು. 

ಈ ಸಂದರ್ಭದಲ್ಲಿ, ಮೃತರ ಕುಟುಂಬಸ್ಥರು, ಗ್ರಾಮಸ್ಥರು ಹಾಗೂ ಉಪಸ್ಥಿತರಿದ್ದರು. 

ಚಿತ್ರ 01 ಬೀರನಕುಪ್ಪ ಟ್ರ್ಯಾಕ್ಟರ್ ದುರಂತ: ಮೃತರ ಕುಟುಂಬಕ್ಕೆ ಸಮಾಜಸೇವಕ ವಿ. ಮೋಹನ್ ಕೃಷ್ಣ ಸಾಂತ್ವನ ಹೇಳಿದರು. 

ಚಿತ್ರ 02 ದುರಂತ ನಡೆದ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮೋಹನ್ ಕೃಷ್ಣ ವೀಕ್ಷಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456