ಮಂಜುನಾಥಚಾರಿ
ಬಾಗೇಪಲ್ಲಿ: ಯುವ ಪೀಳಿಗೆ ದುಶ್ಚಟಗಳಿಗೆ ದಾಸರಾಗುವುದು ಬಹಳ ಸುಲಭ ಆದರೆ ಅದರಿಂದ ಹೊರಬರಬೇಕಾದರೆ ತುಂಬಾ ಕಷ್ಟ ಯಾವುದೇ ಕಾರಣಕ್ಕೂ ದುಶ್ಚಟಗಳಿಗೆ ಬಲಿಯಾಗದೆ ದೂರವಾಗಿರಿ ಎಂದು ಸಿವಿಲ್ ನ್ಯಾಯಾಧೀಶರಾದ ಮಂಜುನಾಥಚಾರಿ ನುಡಿದರು.
ಪಟ್ಟಣದ ನ್ಯಾಷನಲ್ ಕಾಲೇಜ್ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಆರೋಗ್ಯ ಇಲಾಖೆ, ನ್ಯಾಷನಲ್ ಕಾಲೇಜ್, ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಅವರು ಇಂದಿನ ಯುವಪೀಳಿಗೆ ಸಿಗರೇಟು ಗಾಂಜಾ ಅಫೀಮು ನಂತಹ ಮಾದಕ ವಸ್ತುಗಳಿಗೆ ದಾಸರಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಮುಖ್ಯವಾಗಿ ಆಕರ್ಷಿತರಾಗುವುದು ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ನಿಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳುವುದು ನಿಮ್ಮ ಕೈಯಲ್ಲಿದೆ ನೂರಕ್ಕೆ ನೂರು ಅಂಕ ಪಡೆದರೆ ಸಾಲದು ಸಂಸ್ಕೃತಿ, ಸಂಸ್ಕಾರ ಹಾಗೂ ಸಮಾಜದಲ್ಲಿ ಗೌರವವನ್ನು ಪಡೆಯಬೇಕಾದರೆ ಮುಖ್ಯವಾಗಿ ಪೋಷಕರ ಆಸೆ ಅಭಿಲಾಷೆಗಳನ್ನು ಈಡೇರಿಸಬೇಕಾದರೆ ನಿಮ್ಮ ಜೀವನದ ಮುಖ್ಯಘಟ್ಟ ವಿದ್ಯಾಭ್ಯಾಸ ಈ ಸಂದರ್ಭದಲ್ಲಿ ನೀವು ಯಾವುದೇ ಕಾರಣಕ್ಕೂ ಈ ದುಷ್ಟಗಳಿಂದ ದೂರವಿದ್ದರೆ ಸಮಾಜ ನಿಮ್ಮನ್ನು ಗೌರವದಿಂದ ಕಾಣುತ್ತದೆ ನೀವು ಉನ್ನತ ಸ್ಥಾನಕ್ಕೆ ಹೋಗಬಹುದು ಅಪ್ಪಿ ತಪ್ಪಿ ಏನಾದರೂ ಈ ಮಾದಕ ದ್ರವ್ಯಗಳಿಗೆ ದಾಸರಾದರೆ ನಿಮ್ಮ ಜೀವನ ನರಕ ಪ್ರಾಯವಾಗುತ್ತೆ ಆಗ ನಿಮ್ಮನ್ನು ಸಮಾಜ ಹಾಗೂ ಪೋಷಕರು ಸಹ ಗೌರವ ನೀಡುವುದಿಲ್ಲ ಎಂದು ತಿಳಿಸಿದರು.
ತಾಲೂಕು ಆರೋಗ್ಯ ಆಡಳಿತ ಅಧಿಕಾರಿ ಡಾ: ಸತ್ಯನಾರಾಯಣ ರೆಡ್ಡಿ ಮಾತನಾಡಿ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಈಗಿನ ವಿದ್ಯಾರ್ಥಿಗಳು ಕೆಟ್ಟ ಅಭ್ಯಾಸಗಳಿಗೆ ಬಹಳ ಬೇಗ ಆಕರ್ಷಿತರಾಗುತ್ತಾರೆ ಒಮ್ಮೆ ಅದಕ್ಕೆ ಅಂಟಿಕೊಂಡರೆ ಹೊರಬರುವುದು ಬಹಳ ಕಷ್ಟ ಮುಖ್ಯವಾಗಿ ನ್ಯಾಷನಲ್ ಕಾಲೇಜು ವಿದ್ಯಾರ್ಥಿಗಳು ಬಹಳ ಬುದ್ಧಿವಂತರು ಅದಕ್ಕೆ ಉದಾಹರಣೆ ನಾನೇ ನಾನು ಸಹ ಇಲ್ಲಿ ಓದಿ ಬೆಳೆದವನು ಇಂದು ಈ ಒಂದು ವೇದಿಕೆಯಲ್ಲಿ ನಿಲ್ಲಬೇಕಾದರೆ ನ್ಯಾಷನಲ್ ಕಾಲೇಜು ಬಹಳ ಮುಖ್ಯ ನೀವು ಸಹ ಸಂಸ್ಕಾರ ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಇನ್ನೊಂದು ಮುಖ್ಯವಾದ ವಿಷಯ ಪ್ರತಿನಿತ್ಯ ಪ್ರಾಣಾಯಾಮ ಯೋಗ ವ್ಯಾಯಾಮ ಮಾಡುವುದರ ಜೊತೆಗೆ ನಿಮ್ಮ ಆರೋಗ್ಯ ಹಾಗೂ ವಿದ್ಯಾಭ್ಯಾಸಕ್ಕೂ ಗಮನಕೊಟ್ಟು ಒಳ್ಳೆಯ ವಿದ್ಯಾವಂತರಾಗಿ ಪೋಷಕರಿಗೆ ಕಾಲೇಜಿಗೆ ಉಪಾಧ್ಯಾಯರಿಗೆ ಒಳ್ಳೆಯ ಹೆಸರನ್ನು ತರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನ್ಯಾಷನಲ್ ಪಿಯು ಕಾಲೇಜ್ ಪ್ರಾಂಶುಪಾಲ ವೆಂಕಟಶಿವಾರೆಡ್ಡಿ ಬಿ. ವಕೀಲರ ಸಂಘದ ಕಾರ್ಯದರ್ಶಿ ಜಯಪ್ಪ ಉಪಾಧ್ಯಕ್ಷ ರವಿ ನ್ಯಾಷನಲ್ ಕಾಲೇಜ್ ಉಪಾಧ್ಯಾಯರಾದ ವೆಂಕಟೇಶ್ ಬಾಬು ರಾಜೇಶ್ ಗ್ರಂಥಪಾಲಕ ಜಯರಾಮರೆಡ್ಡಿ ನೂರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಇದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
