ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಭಿಮಾನಿಗಳಿಂದ ಪೆಸಲಪರ್ತಿ ಗ್ರಾಮದಲ್ಲಿ ವಿಶೇಷ ಪೂಜೆ

Mar 3, 2026 - 19:31
 0  74
ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಭಿಮಾನಿಗಳಿಂದ ಪೆಸಲಪರ್ತಿ ಗ್ರಾಮದಲ್ಲಿ ವಿಶೇಷ ಪೂಜೆ
ಸುದ್ದಿ ಕಿರಣ ನ್ಯೂಸ್ ಡೆಸ್ಕ್

ಭಾಗ್ಯನಗರ: ನಮ್ಮ ನೆಚ್ಚಿನ ನಾಯಕರಾದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಣ್ಣನವರಿಗೆ ಶುಭವಾಗಲಿ ಅವರಿಗೆ ನಮ್ಮ ಕ್ಷೇತ್ರದ ಜನರ ಆಶೀರ್ವಾದ ಮತ್ತು ಭಗವಂತ ಕೃಪೆ ಸದಾ ಇರಲಿ ಎಂದು ಪೆಸಲಪರ್ತಿ ಗ್ರಾಮದ ಬೈಲಾoಜಿನೇಯ ದೇವಾಲಯದಲ್ಲಿ ವೆಶೇಷ ಪೂಜೆ ಸಲ್ಲಿಸಿ ಅನ್ನದಾಸೋಹ ಕಾರ್ಯಕ್ರಮಗಳು ಆಯೋಜನೆ ಮಾಡಲಾಗಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ರಾಮನಾಥ್ ತಿಳಿಸಿದ್ದಾರೆ 

ತಾಲೂಕಿನ ಪೆಸಲಪರ್ತಿ ಗ್ರಾಮದ ಬೈಲಆಂಜಿನೇಯ ದೇವಾಲಯದಲ್ಲಿ ಕಾಂಗ್ರೆಸ್ ಮುಖಂಡ ರಾಮನಾಥ್ ನೇತೃತ್ವದಲ್ಲಿ ಎಸ್. ಎನ್.ಸುಬ್ಬಾರೆಡ್ಡಿ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿ,ವಿಧಾನಸಭಾ ಚುನಾವಣಾ ಅಸಿಂಧು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರಿಗೆ ತಡೆಯಾಜ್ಞೆ ನೀಡಿರುವುದನ್ನು ಬೆಂಬಲಿಗರು, ಸಂಭ್ರಮಿಸಿದರು. ನಂತರ ಮಾತನಾಡಿದ ಅವರು ಶಾಸಕರ ಪರವಾಗಿ ಈಗಾಗಲೇ ತಡೆ ಸಿಕ್ಕಿದ್ದು ಮುಂದಿನ ದಿನಗಳಲ್ಲಿ ನಮ್ಮ ಪರವಾಗಿ ತೀರ್ಪು ಬರಲೆಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದೇವೆ,ಶಾಸಕ ಸ್ಥಾನ ಅಸಿಂಧುಗೊಳಿಸಿ ಹೈಕೋರ್ಟ್‌ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿರುವುದು ಸಂತಸ ತಂದಿದೆ.ಬಾಬಾ ಸಾಹೇಬ್ ಅಂಬೇಡ್ಕರ್ ರಚನೆ ಮಾಡಿರುವ ಸಂವಿಧಾನ ಮತ್ತು ನ್ಯಾಯಾಲಯದ ಬಗ್ಗೆ ಅಪಾರ ಗೌರವ ಹೊಂದಿದ್ದೇವೆ ಮುಂದಿನ ದಿನಗಳಲ್ಲಿ ಸುಪ್ರೀಮ್ ಕೋರ್ಟ್ ನಲ್ಲಿ ಗೆದ್ದು ಬರುವ ವಿಶ್ವಾಸವಿದೆ ,ರಾಜಿಕೀಯ ವಿರೋಧಿಗಳಿಂದ ಷಡ್ಯಂತ್ರಗಳು ಎಷ್ಟೇ ನಡೆದರೂ ಸತ್ಯಕ್ಕೆ ಜಯ ಸಿಗುತ್ತದೆ. ಶಾಸಕ ಸುಬ್ಬಾರೆಡ್ಡಿ ಅವರು ದೇವರಂತಹ ಮನುಷ್ಯರಾಗಿದ್ದು, ದೇವರೆ ಅವರನ್ನು ಕಾಪಾಡಿದ್ದಾರೆ ಎಂದರು.

ಹಿರಿಯ ಮುಖಂಡ ರಾಮನಾಥ್, ಕೆ. ಇ. ನಾಗರಾಜ್ ಗೌಡ,ವಿಶ್ವನಾಥ್,ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಅಂಜನ್ ರೆಡ್ಡಿ,ನಾಗಪ್ಪ, ಎಚ್. ಆರ್. ಶ್ರೀನಿವಾಸ್, ಜಿ. ವೆಂಕಟೇಶ್, ಕೆ.ಎಲ್.ರವಿಂದ್ರ, ಕಲೀಲ್, ವಿಷ್ಣು,ಗೋವಿಂದಪ್ಪ, ಎಚ್.ಇ.ವೆಂಕಟೇಶ್, ಎಚ್. ಆರ್. ಲಕ್ಷ್ಮೀಪತಿ, ವಿ. ಆರ್.ಬಾಬು ಸೇರಿದಂತೆ ಕೊತ್ತಕೋಟೆ ಗ್ರಾಮ ಪಂಚಾಯಿತಿ ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು... 

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456