ಸಂವಿಧಾನಬದ್ಧವಾದ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ
ಬೆಂಗಳೂರು: ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಮತ್ತು ಶ್ರೀ ಎಸ್. ಸಂಗಮೇಶ್ ಅಣ್ಣಾ ಅಭಿಮಾನಿ ಬಳಗದ ವತಿಯಿಂದ, ಸಂವಿಧಾನಬದ್ಧವಾದ ಒಳಮಿಸಲಾತಿ ಜಾರಿಗೆ ಆಗ್ರಹಿಸಿ ಬೆಂಗಳೂರು ನಗರದ ದಿನಾಂಕ:12/03/2026 ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಮಾದಿಗ ಸಮಾಜಕ್ಕೆ ನ್ಯಾಯ ದೊರಕಬೇಕೆಂಬ ಉದ್ದೇಶದಿಂದ ನಡೆಯುತ್ತಿರುವ ಈ ಹೋರಾಟಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಸಮಾಜದ ಬಂಧುಗಳು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಲಾಗಿದೆ. ದಶಕಗಳಿಂದ ನಿರೀಕ್ಷೆಯಲ್ಲಿರುವ ಒಳಮಿಸಲಾತಿಯನ್ನು ತಕ್ಷಣ ಜಾರಿಗೊಳಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂಬುದನ್ನು ಈ ಪ್ರತಿಭಟನೆ ಮೂಲಕ ಸರ್ಕಾರಕ್ಕೆ ಸ್ಪಷ್ಟವಾಗಿ ತಿಳಿಸಲಾಗುತ್ತದೆ.
ಆದ್ದರಿಂದ ರಾಜ್ಯದ ಎಲ್ಲಾ ಮಾದಿಗ ಸಮಾಜದ ಬಂಧುಗಳು ಜನಸಾಗರದಂತೆ ಬೆಂಗಳೂರಿನ ಫ್ರೀಡಂ ಪಾರ್ಕ್ಗೆ ಹರಿದು ಬಂದು, ಈ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಹಾಗೂ ಶ್ರೀ ಎಸ್. ಸಂಗಮೇಶ್ ಅಣ್ಣಾ ಅಭಿಮಾನಿ ಬಳಗ ಮನವಿ ಮಾಡಿದೆ
ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ
ಗೌರವ ಅಧ್ಯಕ್ಷ- ಜಿ ಎಂ ಬಬಲಾದ
ಪ್ರಧಾನ ಕಾರ್ಯದರ್ಶಿ - ನಿಂಗರಾಜ ಗುಳೆ
ಸಂಘಟನಾ ಕಾರ್ಯದರ್ಶಿ- ಮಂಜುನಾಥ ಬಿ
ಖಜಾಂಜಿ- ಸುರೇಶ್ ಕಟ್ಟಿಮನಿ
ನಿರ್ದೇಶರು- ಭೀಮಾಶಂಕರ ಬಿಲ್ಲವ
ಶ್ರೀ ಎಸ್ ಸಂಗಮೇಶ್ ಅಣ್ಣಾ ಅಭಿಮಾನಿ ಬಳಗದ
ಅಧ್ಯಕ್ಷರು- ಸುನೀಲ ಕಲಾಬಂಡಿ
ಉಪಾಧ್ಯಕ್ಷ- ಯಲ್ಲು ಇಂಗಳಗಿ
ಪ್ರಧಾನ ಕಾರ್ಯದರ್ಶಿ-ಗುರುದೇವ
ಕಾರ್ಯದರ್ಶಿ- ಚಂದಪ್ಪ ತಾಜನಪುರ
What's Your Reaction?
Like
2
Dislike
0
Love
0
Funny
0
Angry
0
Sad
0
Wow
0
