ಸ್ಟ್ರಚರ್ ನಲ್ಲಿ ಮಲಗಿ ಪರೀಕ್ಷೆ ಬರೆದ ಬಾಲಕಿಗೆ ಧೈರ್ಯ ತುಂಬಿದ ಎಸ್ ಪಿ. ಶಿವಾಂಶು ರಜಪೂತ್

Mar 24, 2026 - 16:21
 0  5
ಸ್ಟ್ರಚರ್ ನಲ್ಲಿ ಮಲಗಿ ಪರೀಕ್ಷೆ ಬರೆದ ಬಾಲಕಿಗೆ ಧೈರ್ಯ ತುಂಬಿದ ಎಸ್ ಪಿ. ಶಿವಾಂಶು ರಜಪೂತ್

      ಕೆಜಿಎಫ್: ಅಪಘಾತದಲ್ಲಿ ಕಾಲು ಮುರಿದು ಏಳು ತಿಂಗಳನಿಂದ ಹಾಸಿಗೆಯಲ್ಲಿದ್ದು,ಈ ಬಾರಿ ಎಸ್ಎಸ್ ಎಲ್ ಸಿ ಪರೀಕ್ಷೆಯನ್ನು ಸ್ಟ್ರಕ್ಚರ್ನಲ್ಲೇ ಮಲಗಿ ಬರೆದ ಎಸ್. ಕುಸುಮ ಅವರ ಮನೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಶಿವಾಂಶು ರಜಪೂತ್ ಸೋಮವಾರ ಭೇಟಿ ನೀಡಿ ಯೋಗ ಕ್ಷೇಮ ವಿಚಾರಿಸಿ  ಪೊಲೀಸ್ ಇಲಾಖೆಯಿಂದ ಸಂಗ್ರಹಿಸಿದ ಸಹಾಯಧನ ನೀಡುವುದರ ಮೂಲಕ ಮಾನವೀಯತೆ ಮೆರೆದರು.

ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು ಎಸ್. ಕುಸುಮ ವಿದ್ಯಾರ್ಥಿನಿ ತಾನು ಗಾಯಗೊಂಡಿದ್ದರೂ ವಿದ್ಯಾಭ್ಯಾಸ ಮಾಡುವ ಹಂಬಲಇದೆ ಇದನ್ನು ನಾವು ಬೆಂಬಲಿಸಬೇಕು.ಈ ವಿದ್ಯಾರ್ಥಿನಿ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ.

ನಮ್ಮ ಪೊಲೀಸ್ ಇಲಾಖೆ ವತಿಯಿಂದ ಇವರ ಕುಟುಂಬಕ್ಕೆ ಯಾವುದೇ ವಿಚಾರದಲ್ಲಿಯೂ ಸಹಾಯ ನೀಡಲು ಸಿದ್ದರಿದ್ದೇವೆಎಂದು ತಿಳಿಸಿದರು.

 ಎಸ್ .ಕುಸುಮ ಅಪಘಾತಕ್ಕೆ ಸಂಬಂಧಿಸಿದಂತೆ ಕಾನೂನು ಪ್ರಕಾರ ನ್ಯಾಯ ಒದಗಿಸಲು  ನಮ್ಮ ಇಲಾಖೆ  ಮುಂದೆ ಇರುತ್ತದೆ ಎಂದರು.

ಈ ಸಂದರ್ಭದಲ್ಲಿ ಡಿ ವೈ ಎಸ್ ಪಿ .ಲಕ್ಷ್ಮಯ್ಯ, ಸರ್ಕಲ್ ಇನ್ಸ್ಪೆಕ್ಟರ್ಗಳಾದ . ಮಾರ್ಕಂಡಯ್ಯ. ಅನಿಲ್ ಕುಮಾರ್ . ಇನ್ಸ್ಪೆಕ್ಟರ್ಗಳಾದ. ಮಂಜುನಾಥ್. ಸೋಮಶೇಖರ್. ಪೊಲೀಸ್ ಇಲಾಖೆ ಸಿಬ್ಬಂದಿ ವರ್ಗ ಹಾಜರಿದ್ದರು .

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456