ಹವಾಮಾನ ವೈಫಲ್ಯದಿಂದ ಅಂತರ್ಜಲ ಕುಸಿತ ರೈತ ಬೆಳೆದ ಬೆಳೆ ಸರ್ವನಾಶ: ಕಂಗಾಲಾದ ರೈತ
ಸಂತೆಮರಹಳ್ಳಿ: ಮುಂಗಾರು ಬಾರದೆ ಇರುವ ಹಿನ್ನಲೆಯಲ್ಲಿ ಸಂತೆಮರಹಳ್ಳಿ ಭಾಗದ ತೆಳ್ಳನೂರು ಬಾನಹಳ್ಳಿ ಬಾಗಳಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಕೊಳವೆ ಬಾವಿಗಳಲ್ಲೂ ಅಂತರ್ ಜಲ ಕುಸಿದ ಹಿನ್ನೆಲೆಯಲ್ಲಿ ರೈತರು ಬೆಳೆದಿರುವ ಕಬ್ಬಿನ ಪಸಲು ಸಂಪೂರ್ಣವಾಗಿ ನಾಶ ಹೊಂದುವ ಸ್ಥಿತಿ ನಿರ್ಮಾಣವಾಗಿದೆ.
ಇತ್ತೀಚಿನ ದಿನಗಳಲ್ಲಿ ರೈತ ಬೆಳದಿರುವ ಪಸಲು ಕೈ ಗೆ ಸಿಗದೇ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿದ್ದಾನೆ ಎಂದರೆ ತಪ್ಪಾಗಲಾರದು.
ಈ ಭಾಗದ ರೈತರು ಲಕ್ಷಾಂತರ ರೂ ವೆಚ್ಚ ಮಾಡಿ ಕಬ್ಬು ನಾಟಿ ಮಾಡಿದ ರೈತರಿಗೆ ಹವಾಮಾನ ವೈಫಲ್ಯದಿಂದ ಬಿಸಿಲನ ತಪಾಮಾನಕ್ಕೆ ನೀರಿಲ್ಲದೆ ಕಬ್ಬಿನ ಪಸಲು ಸಂಪೂರ್ಣವಾಗಿ ನಾಶವಾಗುವ ಸ್ಥಿತಿ ನಿರ್ಮಾಣವಾಗಿದೆ.
ಬಿಸಿಲಿನ ತಪಾಮಾನಕ್ಕೆ ಕೊಳವೆ ಬಾವಿಗಳು ಬತ್ತಿ ಹೋಗಿರುವ ಕಾರಣ ಸಮರ್ಪಕವಾಗಿ ನೀರು ಬಾರದೆ ಇರುವುದರಿಂದ ರೈತನ ಪಾಡು ಕೇಳೋರು ಯಾರು ಇಲ್ಲಾ, ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿದ್ದ ರೈತನ ಬಾಳು ಮುರಾ ಬಟ್ಟೆಯಾಗಿದೆ.
ಅತ್ತ ಆಳುವ ದೊರೆಗಳು ಮಾತ್ರ ದೇಶದ ಬೆನ್ನೆಲುಬು ಎನ್ನುವುದು ಬರಿ ಹೊಗಳಿಕೆಯಾಗಿ ಉಳಿದಿದೆ ಎಂದರೆ ತಪ್ಪಾಗಲಾರದು.
ಇಂದು ದೇಶದ ಬೆನ್ನೆಲುಬಾಗಿರುವ ರೈತ ಹವಾಮಾನ ವೈಫಲ್ಯದಿಂದ ಆರ್ಥಿಕವಾಗಿ ಈ ವರ್ಷ ಬಾರಿ ನಷ್ಟಕ್ಕೆ ಗುರಿಯಾಗಿದ್ದಾನೆ.
ಬೆಳೆ ನಷ್ಟ, ಸಾಲದ ಸುಳಿ ಸೇರಿದಂತೆ ಹಲವಾರು ಸಮಸ್ಯೆಗಳು ನಿರಂತರವಾಗಿ ಕಾಡುತ್ತಿವೆ.
ಈ ಸಂದರ್ಭದಲ್ಲಿ ತೆಳ್ಳನೂರು ಗ್ರಾಮದ ರೈತ ರವೀಶ್ ಮಾತನಾಡಿ 2 ಎಕ್ಕರೆಯಲ್ಲಿ ಬೆಳೆದ ಕಬ್ಬು ಹಾಗೂ ಮೂರು ಎಕ್ಕರೆಯಲ್ಲಿ ಬೆಳದ ಮುಸುಕಿನ ಜೋಳ ಸಂಪೂರ್ಣವಾಗಿ ನೆಲೆ ಕಚ್ಚಿದ ಹಿನ್ನೆಲೆಯಲ್ಲಿ ದಿಕ್ಕೇ ದೋಚದೆ ಕಂಗಲಾಗಿದ್ದೇನೆ ತಮ್ಮ ಅಳಲು ತೋರಿಸಿ ಕೊಂಡಿದ್ದಾರೆ.
ಇಂತಹ ಅದೆಷ್ಟೋ ರೈತರು ಸಂಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿದ್ದಾರೆ ಆದರೆ ಸರ್ಕಾರ ತಮ್ಮ ರಾಜಿಕೀಯ ತೆವಲು ತೀರಿಸಿಕೊಳ್ಳಲು ನಿಂತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
