ಹಿರಿಯ ಚಿಂತಕ ಜೆ ಕೆ ಹುಸೇನ್ ಮಿಯಾ ಸಾಬ್ ರವರ ನಿಧನಕ್ಕೆ ಜಿಲ್ಲಾ ಕಸಾಪದಿಂದ ಕಂಬನಿ
ದಾವಣಗೆರೆ ಏಪ್ರಿಲ್ 20.
ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ವಿದ್ಯಾ ಸಂಸ್ಥೆಯ ಆಶಯದಲ್ಲಿ ನಡೆಯುತ್ತಿರುವ ವಿವಿಧ ಪ್ರೌಢಶಾಲೆಗಳಲ್ಲಿ ಮುಖ್ಯೋಪಾಧ್ಯಾಯರಾಗಿ ಅವಿರತ ಸೇವೆ ಸಲ್ಲಿಸಿ ನಿವೃತ್ತಿಯ ನಂತರ
ಜಗಳೂರುನ ಹಿರಿಯ ಚೇತನರಾಗಿದ್ದ ಶ್ರೀ ಜೆ.ಎಂ.ಇಮಾಂ ಸಾಬ ರವರ ಹೆಸರಿನಲ್ಲಿ
ಜಗಳೂರು ಶ್ರೀ ಜೆ.ಎಂ. ಇಮಾಂ ಟ್ರಸ್ಟ್ ಸ್ಥಾಪಿಸಿ ಅದರ ಅಧ್ಯಕ್ಷರಾಗಿ , ಜೆ.ಎಂ. ಇಮಾಂ ಸ್ಮಾರಕ ಶಾಲೆಯ ಸಂಸ್ಥಾಪಕರು ಹಿರಿಯರು,ಶಿಕ್ಷಣ ಪ್ರೇಮಿಗಳೂ ಸಾಹಿತ್ಯ ಪ್ರೇಮಿಗಳೂ.ಹಿರಿಯ ಚಿಂತಕರು ಆಗಿದ್ದ ಶ್ರೀ ಜೆ.ಕೆ.ಹುಸೇನ್ ಮಿಯ್ಯಾ ರವರು ಇಂದು ಬೆಳಗ್ಗೆ 7.30 ಗಂಟೆಗೆ ನಿಧನರಾಗಿರುವುದು ಅತ್ಯಂತ ಆಘಾತವನ್ನು ಉಂಟು ಮಾಡಿದೆ .
ಶ್ರೀಯುತರು ಬಸವ ಕೇಂದ್ರ, ಬಯಲು ಸಾಹಿತ್ಯ ವೇದಿಕೆ , ಕನ್ನಡ ಸಾಹಿತ್ಯ ಪರಿಷತ್ ಹಾಗೂ ಲಯನ್ಸ್ ಕ್ಲಬ್ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿರುತ್ತಾರೆ.
ಶ್ರೀಯುತರು ,ಕುಟುಂಬ ವರ್ಗ,ಸ್ನೇಹಿತರು, ಶಿಕ್ಷಕರು, ಮಕ್ಕಳು, ಶಿಷ್ಯ ವೃಂದ ಹಾಗೂ ಬಂಧು ಮಿತ್ರರನ್ನು ಅಗಲಿರುತ್ತಾರೆ.
ಅವರು ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಸದಾ ಒಡನಾಟ ಇಟ್ಟುಕೊಂಡು ಅತ್ಯುತ್ತಮ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿದ ಕೀರ್ತಿ ಅವರದಾಗಿತ್ತು. ಅವರ ನಿಧನದಿಂದ ಕನ್ನಡ ಸರಸ್ವತ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಬಿ ವಾಮದೇವಪ್ಪ ಅವರು ಸ್ಮರಿಸಿ ಕಂಬನಿ ಮಿಡಿದು, ಅವರ ಆತ್ಮಕ್ಕೆ ಚಿರಶಾಂತಿ ಕೋರಿ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪರವಾಗಿ ಹಾಗೂ ಸಮಸ್ತ ಕನ್ನಡದ ಮನಸ್ಸುಗಳ ಪರವಾಗಿ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಮರ್ಪಿಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
