ಹೆಬ್ಬಾಳದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಸಾವಿರಾರು ಜನರಿಗೆ ದಿನಸಿ ಕಿಟ್ ವಿತರಣೆ
ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಚಾಮುಂಡಿನಗರದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ದಿನಸಿ ಕಿಟ್ ಗಳನ್ನು ಸಚಿವರಾದ ಭೈರತಿ ಸುರೇಶ್ ರವರು ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಅಬ್ದುಲ್ ವಾಜಿದ್ ರವರು ವಿತರಿಸಿದರು, ಮಾಜಿ ಬಿಬಿಎಂಪಿ ಸದಸ್ಯೆ ಫೌಜಿಯ ಅಬ್ಬುಲ್ ವಾಜಿದ್ ಮತ್ತು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರುಗಳಾದ ಮುಜಾಮಿಲ್, ಬಾಲಾಜಿರವರು ಸ್ಥಳೀಯ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಭೈರತಿ ಸುರೇಶ್ ರವರು ಮಾತನಾಡಿ ಹಿಂದೂ, ಮುಸ್ಲಿಂ, ಕ್ರಿಚ್ಚಿಯನ್ ಎಲ್ಲರು ಒಂದೇ .ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಜನರ ಆಶೀರ್ವಾದ ಫಲದಿಂದ ಶಾಸಕನಾಗಿ ಆಯ್ಕೆಯಾದೇ ನಿಮ್ಮ ಆಶೀರ್ವಾದದಿಂದ ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿಯಾಗಿದ್ದೇನೆ.
ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರ ಮಾತು ನಂಬಬೇಡಿ, ಅವರ ಬಂದರೆ ವಾತವರಣ ಬದಲಾಗುತ್ತದೆ.
ಎಸ್.ಐ.ಆರ್. ಮಾಡುತ್ತೇವೆ ಎಂದು ವಿನಾಕಾರಣ ಅಲ್ಪಸಂಖ್ಯಾತ ಮತದಾರರನ್ನು ಮತಪಟ್ಟಿಯಿಂದ ತೆಗೆದುಹಾಕಿದರೆ ಸುಮ್ಮನೆ ಇರುವುದಿಲ್ಲ. ಮತಪಟ್ಟಿಯಲ್ಲಿ ಹೆಸರು ಇಲ್ಲ ಎಂದರೆ ಮನುಷ್ಯ ಬದುಕಿದ್ದು ಸತ್ತಂತೆ.
ಮುಂಬರುವ ಜಿಬಿಎ ಚುನಾವಣೆಯಲ್ಲಿ ಅಲ್ಪಸಂಖ್ಯಾತ ವರ್ಗದವರಿಗೆ ಎರಡು ವಾರ್ಡ್ ಗಳಲ್ಲಿ ನಿಲ್ಲುವ ಅವಕಾಶ ನೀಡುತ್ತೇನೆ ಎಂದು ಹೇಳಿದರು.
ಅಬ್ದುಲ್ ವಾಜಿದ್ ರವರು ಮಾತನಾಡಿ ಕಳೆದ 17ವರ್ಷಗಳಿಂದ ರಂಜಾನ್ ಹಬ್ಬದ ಪ್ರಯುಕ್ತ ಸಾವಿರಾರು ಜನರಿಗೆ ದಿನಸಿ ಕಿಟ್ ಗಳನ್ನು ವಿತರಿಸಲಾಗುತ್ತಿದೆ. ಹಿಂದೂ ಬಾಂಧವರಿಗೆ ಡೊಡ್ಡ ಹಬ್ಬವಾದ ಯುಗಾದಿ ಹಬ್ಬವು ಇರುವುದರಿಂದಅವರಿಗೂ ಸಹ ದಿನಸಿ ಕಿಟ್ ವಿತರಿಸಲಾಗುತ್ತಿದೆ.
ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಹಿಂದೂ, ಮುಸ್ಲಿಂ, ಕ್ರಿಚ್ಚಿಯನ್ ಎಲ್ಲರು ಸಹೋದರರಂತೆ ಬಾಳುತ್ತಿದ್ದೇವೆ.
ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿ ಯೋಜನೆಗಳು ಹೆಬ್ಬಾಳ ಕ್ಷೇತ್ರದ ಎಲ್ಲರ ಮನೆ, ಮನೆ ತಲುಪಿದೆ ಎಂದು ಹೇಳಿದರು.
What's Your Reaction?
Like
2
Dislike
0
Love
0
Funny
0
Angry
0
Sad
0
Wow
0
