61ನೇ ನಾದಜ್ಯೋತಿ ಸಂಗೀತ ಸಂಭ್ರಮ

Jan 26, 2026 - 17:41
 0  3
61ನೇ ನಾದಜ್ಯೋತಿ ಸಂಗೀತ ಸಂಭ್ರಮ

      ಬೆಂಗಳೂರು: ಮಲ್ಲೇಶ್ವರದ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ (ಅಂಚೆ ಕಚೇರಿ ಹತ್ತಿರ) ಶ್ರೀರಾಮ ಮಂದಿರದಲ್ಲಿ ನಾದಜ್ಯೋತಿ ಸಂಗೀತ ಸಭಾ ಟ್ರಸ್ಟ್ ವತಿಯಿಂದ 61ನೇ ಸಂಗೀತ ಸಂಭ್ರಮವನ್ನು ಜನವರಿ 28 ರಿಂದ ಫೆಬ್ರವರಿ 1ರ ವರೆಗೆ ಒಟ್ಟು 5 ದಿನಗಳ ಕಾಲ ಹಮ್ಮಿಕೊಂಡಿದ್ದು ಅವುಗಳ ವಿವರಗಳು ಈ ರೀತಿ ಇವೆ :
ಜನವರಿ 28-ಸಂಜೆ 5-30ಕ್ಕೆ ಕಾರ್ಯಕ್ರಮದ ಉದ್ಘಾಟನೆ. ನಂತರ ಉಡುಪಿಯ ವಿ|| ಅರ್ಚನಾ ಮತ್ತು ಸಮನ್ವಿ ಇವರಿಂದ "ಯುಗಳ ಗಾಯನ" ವಿ|| ಸಿ.ವಿ. ಶೃತಿ (ಪಿಟೀಲು), ವಿ|| ಬಿ.ಎಸ್. ಪ್ರಶಾಂತ್ (ಮೃದಂಗ), ವಿ|| ಭಾಗ್ಯಲಕ್ಷ್ಮಿ ಎಂ. ಕೃಷ್ಣ (ಮೋರ್ಚಿಂಗ್).
ಜನವರಿ 29-ಸಂಜೆ 6-00ಕ್ಕೆ ವಿ|| ಡಿ. ಬಾಲಕೃಷ್ಣ ಮತ್ತು ವಿ|| ವಿ. ವಂಶೀಧರ್ ಇವರಿಂದ "ವೀಣಾ-ವೇಣು ವಾದನ" ವಿ|| ಎ. ರೇಣುಕಾ ಪ್ರಸಾದ್ (ಮೃದಂಗ), ವಿ|| ಎಸ್. ಉತ್ತಮ್ (ಘಟ).
ಜನವರಿ 30-ಸಂಜೆ 6-00ಕ್ಕೆ ವಿ|| ಜಿ.ಕೆ. ಮೋಹನ್ (ಗಾಯನ), ವಿ|| ಕೇಶವ ಮೋಹನ್ ಕುಮಾರ್ (ಪಿಟೀಲು), ವಿ|| ಅನಿರುದ್ಧ್ ಎಸ್. ಭಟ್ (ಮೃದಂಗ), ವಿ|| ಭಾರ್ಗವ ಹಾಲಂಬಿ (ಖಂಜಿರ).

ಜನವರಿ 31-ಸಂಜೆ 6-00ಕ್ಕೆ "ಯುಗಳ ಗಾಯನ" : ವಿ|| ಎಸ್. ಐಶ್ವರ್ಯ ಮತ್ತು ವಿ|| ಎಸ್. ಸೌಂದರ್ಯ (ಭಾರತರತ್ನ ಡಾ|| ಎಂ.ಎಸ್. ಸುಬ್ಬುಲಕ್ಷ್ಮಿ ಇವರ ಮರಿಮಕ್ಕಳು) ವಿ|| ವಿ. ನಳಿನಾ ಮೋಹನ್ (ಪಿಟೀಲು), ವಿ|| ಫಣೀಂದ್ರ ಭಾಸ್ಕರ್ (ಮೃದಂಗ), ವಿ|| ಸಚಿನ್ ದೇವಿಪ್ರಸಾದ್ (ಘಟ).
ಫೆಬ್ರವರಿ 1-ಬೆಳಗ್ಗೆ 11ಕ್ಕೆ ಶ್ರೀ ತ್ಯಾಗರಾಜರ ಪಂಚರತ್ನ ಕೀರ್ತನೆಗಳ ಗೋಷ್ಠಿಗಾಯನ, ಸಂಜೆ 4-15ಕ್ಕೆ ವಿ||  ಹೆಚ್.ಎಸ್. ವೇಣುಗೋಪಾಲ್, ವಿ|| ಎಂ.ಎಸ್. ಪ್ರಮುಖ್, ವಿ|| ಅಪ್ರಮೇಯ ಶೇಷಾದ್ರಿ, ವಿ|| ಸುಹಾಸ್ ಮುರಳಿ, ಮತ್ತು ವಿ|| ಅಚ್ಯುತ್ ಎಂ. ಆತ್ರೇಯ ಇವರಿಂದ "ಪಂಚವೇಣುವಾದನ" ಡಾ|| ಆರ್. ರಘುರಾಮ್ (ಪಿಟೀಲು), ತ್ರಿಚಿ ಜಿ. ಅರವಿಂದ್ (ಮೃದಂಗ), ಜಿ.ಆರ್. ಹರೀಶ್ ಚಂದ್ರ (ಖಂಜಿರ)

ಪ್ರಶಸ್ತಿ ಪ್ರದಾನ ಸಮಾರಂಭ : ಸಂಜೆ 6-15ಕ್ಕೆ ಕಲಾಜ್ಯೋತಿ ವಿ|| ಸಿ. ರಾಮದಾಸ್ (ಹಾರ್ಮೋನಿಯಂ) "ಜೀವಮಾನ ಸಾಧನ ಪುರಸ್ಕಾರ", ವಿ|| ಹೆಚ್.ಎಸ್. ವೇಣುಗೋಪಾಲ್ (ಕೊಳಲು) "ಕಲಾಜ್ಯೋತಿ ಪ್ರಶಸ್ತಿ" ಮತ್ತು ವಿ|| ಬಿ.ಎಸ್. ಪ್ರಶಾಂತ್ (ಮೃದಂಗ) "ಕಲಾಜ್ಯೋತಿ ಪುರಸ್ಕಾರ" ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು ಎಂದು ಟ್ರಸ್ಟಿನ ಪದಾಧಿಕಾರಿಗಳು ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456