ಎಂಜಿ ಮಾರುಕಟ್ಟೆಯ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ

Jan 30, 2026 - 15:46
 0  6
ಎಂಜಿ ಮಾರುಕಟ್ಟೆಯ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ

     ಕೆಜಿಎಫ್: ನಗರದ ಇತಿಹಾಸ ಪ್ರಸಿದ್ಧ ಎಂಜಿ ಮಾರ್ಕೆಟ್ ನಲ್ಲಿ ಎರಡನೇ ಗೇಟ್ ಬಳಿ ಇರುವ ಹಳೆಯ ಬೇಗ ಹಾಗೂ ಛತ್ರಿ ರಿಪೇರಿ ಅಂಗಡಿಯಲ್ಲಿ ಆಕಸ್ಮಿಕವಾಗಿ ಬೆಂಕಿ ತೆಗೆದು, ಸುಮಾರು 1, ಲಕ್ಷ ಮೌಲ್ಯದ ವಸ್ತುಗಳು ಬೆಂಕಿ ಕೆನ್ನಾಲೆಗೆ ಬಸ್ಮವಾಗಿದೆ. ಸಮಯಕ್ಕೆ ಸರಿಯಾಗಿ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. 

ಮಾರ್ಕೆಟ್ ನಲ್ಲಿ ಗೇಟ್ ಚಿಕ್ಕದಾಗಿರುವುದರಿಂದ ಅಗ್ನಿ ಶಮಕ ವಾಹನ ಮಾರುಕಟ್ಟೆ ಒಳಗಡೆ ಬರಲು ಆಗದೆ ಮುಖ್ಯರಸ್ತೆಯಲ್ಲಿ ನಿಂತು ಅಲ್ಲಿಂದ ಬೆಂಕಿಯನ್ನು ನಂದಿಸಲಾಯಿತು. 

ಈ ಘಟನೆಯಿಂದ ಇನ್ನು ಹಲವಾರು ಹಳೆಯ ಅಂಗಡಿಯ ಮಾಲೀಕರು ಭಯಭೀತರಾಗಿದ್ದು, ಅಗ್ನಿಶಾಮಕ ದಳ ವಾಹನ ಮಾರುಕಟ್ಟೆ ಒಳಗಡೆ ಪ್ರವೇಶಿಸಲು ಅನುಕೂಲ ಮಾಡಬೇಕು. 
ವರ್ತಕರು ತಮ್ಮ ಅಂಗಡಿಯ ಮೂಲವನ್ನು ಬಿಟ್ಟು ರಸ್ತೆಯನ್ನು ಆಕ್ರಮಿಸಿಕೊಂಡಿದ್ದು, ಇದರಿಂದ ತೊಂದರೆ ಉಂಟಾಗುತ್ತಿದೆ. ಇದಕ್ಕೆ ವರ್ತಕರು ಸಹಕಾರ ನೀಡಿ ಅಕ್ರಮಿಸಿಕೊಂಡಿರುವ ರಸ್ತೆಯನ್ನು ತೆರವುಗೊಳಿಸಬೇಕು .

ಹಾಗೂ ನಗರಸಭೆಯ ಅಧಿಕಾರಿಗಳು ಮಾರುಕಟ್ಟೆಯನ್ನು ಪರಿಶೀಲಿಸಿ ಮೂಲಸೌಕರ್ಯಗಳನ್ನು ಒದಗಿಸಿಕೊಡಬೇಕು. ಯಾವುದೇ ತುರ್ತು ಸಂದರ್ಭದಲ್ಲಿ ವರ್ತಕರಿಗೆ ಅನುಕೂಲವಾಗುವ ರೀತಿಯಲ್ಲಿ ಮಾಡಬೇಕೆಂದು ವರ್ತಕರ ಸಂಘದ ಮುಖಂಡರು. ಮೋಹನ್ ರಾಜ್. ಒತ್ತಾಯಿಸಿದರು. 

ವ್ಯಾಪಾರಸ್ಥರಿಗೆ ಕಿವಿಮಾತು. ಹಳೆಯ ಅಂಗಡಿ ಮಾಲೀಕರು ವಿದ್ಯುತ್ ವೈರುಗಳನ್ನು ಪರಿಶೀಲಿಸಿ. ನೂತನ ವೈರುಗಳನ್ನು ಬದಲಾವಣೆ ಮಾಡಿಕೊಳ್ಳಬೇಕು. ಎಂದು ಮನವಿ ಮಾಡಿದರು. ಈಗ ನಡೆದಿರುವ ಘಟನೆಯ ಬಗ್ಗೆ ಶಾಸಕಿ. ರೂಪಕಲಾ ಶಶಿಧರ್ ರೊಂದಿಗೆ ಮಾನವೀಯತೆ ದೃಷ್ಟಿಯಿಂದ ತನ್ನ ಕೈಯಲ್ಲಿ ಆಗುವ ಸಹಾಯ ಮಾಡುವುದಾಗಿ ತಿಳಿಸಿದರು. ಮುಖಂಡರಾದ. ದೇವೇಂದ್ರ. ಮೊದಲಾದವರು ಇದ್ದರು

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456