ಎ.ಚೋಳೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ  ನೂತನ ಅಧ್ಯಕ್ಷರಾಗಿ ಅಡಗೂರು ಮಧು ಅವಿರೋಧ ಆಯ್ಕೆ

Dec 3, 2025 - 17:32
 0  23
ಎ.ಚೋಳೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ  ನೂತನ ಅಧ್ಯಕ್ಷರಾಗಿ ಅಡಗೂರು ಮಧು ಅವಿರೋಧ ಆಯ್ಕೆ

    ಚನ್ನರಾಯಪಟ್ಟಣ ತಾಲೂಕಿನ ಕಸಬಾ ಹೋಬಳಿಯ ಎ.ಚೋಳೇನಹಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಡಗೂರು ಗ್ರಾಮದ ನಿರ್ದೇಶಕ ಎ.ಎಂ. ಮಧು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಎ.ಚೋಳೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನಸಹಕಾರ ಸಂಘಕ್ಕೆ ಈ ಹಿಂದೆ ಅಧ್ಯಕ್ಷರಾಗಿದ್ದ ಅಡಗೂರು ಗ್ರಾಮದ ಶ್ರೀಮತಿ ಲಲಿತಾನಾರಾಯಣ್‌ರವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನಲೆಯಲ್ಲಿ ಸಹಕಾರ ಇಲಾಖೆಯೂ ಚುನಾವಣೆ ನಿಗದಿಗೊಳಿಸಿತ್ತು. ಅಧ್ಯಕ್ಷ ಸ್ಥಾನಕ್ಕೆ ಅಡಗೂರು ಗ್ರಾಮದ ಎ.ಎಂ.ಮಧುರವರು ನಾಮಪತ್ರ ಸಲ್ಲಿಸಿದರು. ಇವರನ್ನು ಹೊರತುಪಡಿಸಿ ಮತ್ಯಾರು ನಾಮಪತ್ರ ಸಲ್ಲಿಸದ ಕಾರಣ ಇವರ ಆಯ್ಕೆಯನ್ನು ಚುನಾವಣಾಧಿಕಾರಿಯಾಗಿದ್ದ ಸಹಕಾರ ಇಲಾಖೆ ಅಧಿಕಾರಿ ವಾಸಿಂ ಷರೀಫ್ ಘೋಷಿಸಿದರು.

ನೂತನ ಅಧ್ಯಕ್ಷ ಎ.ಎಂ.ಮಧು ಮಾತನಾಡಿ, ಚೋಳೇನಹಳ್ಳಿ ಕೃಷಿಪತ್ತಿನ ಸಹಕಾರ ಸಂಘಕ್ಕೆ ಹಿಂದೆ ಅಧ್ಯಕ್ಷರಾಗಿದ್ದವರೆಲ್ಲ ಸಂಘವನ್ನು ಅಭಿವೃದ್ಧಿಯತ್ತ ಮುನ್ನಡೆಸಿದ್ದಾರೆ. ಅವರೆಲ್ಲರ ಮಾರ್ಗದರ್ಶನ, ಸಲಹೆಯನ್ನು ಪಡೆದು ಸಂಘವನ್ನು ನಡೆಸಿಕೊಂಡು ಹೋಗುವುದರ ಜೊತೆಗೆ ನಮ್ಮ ನೆಚ್ಚಿನ ಶಾಸಕರು ,ತಾಲೂಕಿನ ನೀರಾವರಿ ಹರಿಕಾರ, ಭಗೀರಥ ಬಾಲಕೃಷ್ಣರವರಿಂದ ಹೆಚ್ಚಿನ ಅನುದಾನ ತಂದು ರೈತರಿಗೆ ಮತ್ತಷ್ಟು ಸಾಲ ನೀಡುವ ಮೂಲಕ ರೈತರ ಆರ್ಥಿಕತೆಯನ್ನು ಬಲಗೊಳಿಸಲಾಗುವುದೆಂದರು.
ನೂತನ ಅಧ್ಯಕ್ಷರನ್ನು ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕ ಸಿ.ಎನ್. ಪುಟ್ಟಸ್ವಾಮಿಗೌಡ ಅಭಿನಂದಿಸಿದರು, ಈ ವೇಳೆ ಮಾತನಾಡಿದ ಅವರು ಕಳೆದ ಸಾಲಿನಲ್ಲಿ ಸೇವೆ ಸಲ್ಲಿಸಿದ ಅಧ್ಯಕ್ಷರು ಸೊಸೈಟಿಯ ಅಭಿವೃದ್ಧಿಗೆ ಗಣನೀಯ ಸಾಧನೆ ಮಾಡಿದ್ದು, ಸಹಕಾರಿ ಸಂಸ್ಥೆಗಳು ಸಹಕಾರ ತತ್ವದಡಿ
ಕಾರ್ಯ ನಿರ್ವಹಿಸಿದಾಗ ಸಹಕಾರ ಸಂಸ್ಥೆಗಳು ಉನ್ನತಿಕರಣಗೊಳ್ಳಲು ಸಾಧ್ಯ. ಸೊಸೈಟಿ ಆರ್ಥಿಕವಾಗಿ ಸದೃಢವಾಗಿ ಬೆಳೆದಿದ್ದು, ಸಂಘದಡಿ 7.85 ಕೋಟಿ ರು. ಕೆಸಿಸಿ ಸಾಲ ನೀಡಲಾಗಿದೆ, ಸ್ವಿಶಕ್ತಿ ಸಂಘಗಳಿಗೆ 67 ಲಕ್ಷರು, ಸಾಲ, 1.75 ಕೋಟಿ ರು. ಎಂಟಿಎಲ್ ಸಾಲ ನೀಡಲಾಗಿದೆ.

ಚೋಳೇನಹಳ್ಳಿ ಸೊಸೈಟಿಯಿಂದ ಇಷ್ಟು ದೊಡ್ಡ ಮಟ್ಟದ ಸಾಲ ನೀಡಲು ಶಾಸಕ ಸಿ.ಎನ್. ಬಾಲಕೃಷ್ಣ ಅವರು 25 ವರ್ಷಗಳಿಂದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಅಧ್ಯಕ್ಷರಾಗಿ, ಕಾರ್ಯನಿರ್ವಹಿಸುವುದು ನಮಗೆ ವರದಾನವಾಗಿದೆ. ಸಹಕಾರ ತತ್ವದಲ್ಲಿ ಹುಟ್ಟಿಕೊಂಡ ಸಂಸ್ಥೆಗಳು ಅಧಿಕ ಲಾಭದ ನಿರೀಕ್ಷೆ ಹೊಂದಿರಬಾರದು. ನೂತನ ಆಡಳಿತ ಮಂಡಳಿ ಸಹಕಾರ ರಂಗದಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಕೃಷಿ ಉತ್ತೇಜನಕ್ಕೆ ಯೋಜನೆಗಳನ್ನು ರೂಪಿಸಬೇಕು. ಗ್ರಾಹಕರಿಗೆ, ರೈತರಿಗೆ ಹತ್ತಿರವಾಗಿ ಸೇವೆ ಸಲ್ಲಿಸುವಲ್ಲಿ ಮುಂದಾಗುವಂತೆ ತಿಳಿಸಿದರು. ನಿರ್ದೇಶಕರಾಗಿ
ಈ ವೇಳೆ ಸಂಘದ ಮಾಜಿ ಅಧ್ಯಕ್ಷರಾದ ಲಲಿತಾ ನಾರಾಯಣ್, ಉಪಾಧ್ಯಕ್ಷರಾದ ರವಿ, ನಿರ್ದೇಶಕರಗಳಾದ ಧರ್ಮೇಗೌಡ, ದಿನೇಶ್, అంబరితో, ಪ್ರತಿಭಾಮಧು, ಆಶಾರಾಣಿ ವೈ.ಎನ್.ಪ್ರದೀಪ್ ಕುಮಾರ್, ಧರ್ಮ, ಟಿಎಪಿಸಿಎಂಎಸ್‌ನ ನಿರ್ದೇಶಕ ಕುಂಬಾರಹಳ್ಳಿ ರಮೇಶ್,ಪುರಸಭಾ ಮಾಜಿ ಅಧ್ಯಕ್ಷ ಸಿ.ಎನ್.ಮೋಹನ್, ಮುಖಂಡರಾದ ವಳಗೇರಹಳ್ಳಿ ರವಿ, ಎ.ಆರ್.ನಾರಾಯಣ್, ಎ.ಜಿ.ರಂಗಸ್ವಾಮಿ, ಕಾಳೇನಹಳ್ಳಿ ಶಂಭುಲಿಂಗೇಗೌಡ, ಗನ್ನಿ ವಾಸು, ಗನ್ನಿ ಕುಮಾರ್, ಗನ್ನಿ ಮಂಜು, ಗನ್ನಿ ಸತೀಶ್,ಬೆಕ್ಕ ಮಹೇಂದ್ರ, ನಂಜುಂಡೇಗೌಡ, ಡಿ.ಕಾಳೇನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಚಂದ್ರಶೇಖರ್, ಮಾಜಿ ಉಪಾಧ್ಯಕ್ಷ ಪ್ರತಾಪ್, ಅಡಗೂರು ಡೈರಿ ಅಧ್ಯಕ್ಷನರಸಿಂಹ, ಕಾರ್ಯದರ್ಶಿ ಧರ್ಮ, ಅಡಗೂರು ಗ್ರಾಮದ ಆನಂದ್, ರೋಹಿತ್, ಕಿಟ್ಟಿ, ಸೇರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಸಿ ಎಂ ರವಿ, ಸೊಸೈಟಿಯ ಸಿಬ್ಬಂದಿಯಾದ ಪ್ರಜ್ವಲ್, ಸುನಿತಾ, ಪವಿತ್ರ, ಉಮೇಶ್,ಸೇರಿದಂತೆ ಇತರರು ಹಾಜರಿದ್ದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456