ಗೃಹ ಸಚಿವ ಪರಮೇಶ್ವರರಿಗೆ ಜನಮೆಚ್ಚಿದ ಜನಪ್ರಿಯ ಜನನಾಯಕ ಗೌರವ ಪ್ರಶಸ್ತಿ ಪ್ರಧಾನ

Jan 22, 2026 - 13:01
 0  18
ಗೃಹ ಸಚಿವ ಪರಮೇಶ್ವರರಿಗೆ ಜನಮೆಚ್ಚಿದ ಜನಪ್ರಿಯ ಜನನಾಯಕ ಗೌರವ ಪ್ರಶಸ್ತಿ ಪ್ರಧಾನ
•ಚಿತ್ರಶೀರ್ಷಿಕೆ: 22ಕೆಜಿಎಫ್01: ರಾಜ್ಯ ಗೃಹ ಸಚಿವ ಡಾ|| ಜಿ.ಪರಮೇಶ್ವರ ಅವರಿಗೆ ಜನಮೆಚ್ಚಿದ ಜನಪ್ರಿಯ ಜನನಾಯಕ ಪ್ರಶಸ್ತಿ ಪ್ರಧಾನ ಮಾಡಿದ ಡಾ|| ಆರ್.ಪ್ರಭುರಾಂ, ಶಾಸಕಿ ರೂಪಕಲಾ ಇತರರು. 

    ಕೆ.ಜಿ.ಎಫ್,ಜ.22: ಕರ್ನಾಟಕ ಆದಿ ದ್ರಾವಿಡ ಸಂಘದ ವತಿಯಿಂದ ಕರ್ನಾಟಕ ರಾಜ್ಯದ ಗೃಹ ಸಚಿವ ಡಾ|| ಜಿ.ಪರಮೇಶ್ವರ್ ಅವರಿಗೆ “ಜನಮೆಚ್ಚಿದ ಜನಪ್ರಿಯ ಜನನಾಯಕ” ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕೆಜಿಎಫ್ನ ಅಶೋಕ ದಮ್ಮ ಧೂತ ಬುದ್ದ ಸಂಘದ ಆಧ್ಯಾತ್ಮಿಕ ಧ್ಯಾನ ಮಂದಿರಕ್ಕೆ ಜ.20 ರಂದು ಗೃಹ ಸಚಿವ ಡಾ|| ಜಿ.ಪರಮೇಶ್ವರ್ ಅವರು ಭೇಟಿ ನೀಡಿದ್ದ ಸಂದರ್ಭದಲ್ಲಿ ಕರ್ನಾಟಕ ಆದಿ ದ್ರಾವಿಡ ಸಂಘದ ರಾಜ್ಯಾಧ್ಯಕ್ಷ ಡಾ|| ಆರ್.ಪ್ರಭುರಾಂ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕರಾದ ಡಾ|| ಎಂ.ರೂಪಕಲಾ ಶಶಿಧರ್, ಬುದ್ದ ಸಂಘದ ಗೌರವಾಧ್ಯಕ್ಷ ಡಾ|| ಪೂರ್ಣೇಶನ್ರಾಜು ಅವರುಗಳು ಉಪಸ್ಥಿತರಿದ್ದರು.

ಗೃಹ ಸಚಿವ ಡಾ|| ಜಿ.ಪರಮೇಶ್ವರ್ ಅವರು ಈ ಹಿಂದೆಯೂ ಸಹ ಹಲವು ಬಾರಿ ಸಚಿವರಾಗಿದ್ದು, ಮೂರ್ನಾಕ್ಕು ದಶಕಗಳಿಂದಲೂ ಜನಾನುರಾಗಿಯಾಗಿ ಉತ್ತಮ ಹೆಸರು ಗಳಿಸಿದ್ದರು. ಜನಮೆಚ್ಚಿದ ಜನಪ್ರಿಯ ಜನನಾಯಕರಾಗಿ ಹೊರಹೊಮ್ಮಿರುವ ಪರಮೇಶ್ವರ್ ಅವರನ್ನು ಕರ್ನಾಟಕ ಆದಿ ದ್ರಾವಿಡ ಸಂಘದ ವತಿಯಿಂದ “ಜನಮೆಚ್ಚಿದ ಜನಪ್ರಿಯ ಜನನಾಯಕ” ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿ, ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ಆದಿ ದ್ರಾವಿಡ ಸಂಘದ ಪದಾಧಿಕಾರಿಗಳು, ಹಲವು ಮುಖಂಡರುಗಳು ಭಾಗವಹಿಸಿದ್ದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456