ಚನ್ನರಾಯಪಟ್ಟಣದ ರಾಯರ ರಂಗಮಂದಿರಕ್ಕೆ ಮಂತ್ರಾಲಯ ಮಠದ ದಿವಾನರ ಶ್ರೀ ಸುಧೀಂದ್ರ ಆಚಾರ್ಯರ ಭೇಟಿ

Mar 16, 2026 - 17:45
 0  6
ಚನ್ನರಾಯಪಟ್ಟಣದ ರಾಯರ ರಂಗಮಂದಿರಕ್ಕೆ ಮಂತ್ರಾಲಯ ಮಠದ ದಿವಾನರ ಶ್ರೀ ಸುಧೀಂದ್ರ ಆಚಾರ್ಯರ ಭೇಟಿ

     ಚನ್ನರಾಯಪಟ್ಟಣ: ಪಟ್ಟಣದ ಗಾಂಧಿ ಸರ್ಕಲ್‌ನಲ್ಲಿರುವ ಪವಿತ್ರ ರಾಯರ ರಂಗಮಂದಿರಕ್ಕೆ ಇಂದು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ದಿವಾನರು ಹಾಗೂ ಪ್ರಮುಖ ಗಣ್ಯರು ಭೇಟಿ ನೀಡಿ, ರಾಯರಿಗೆ ವಿಶೇಷ ಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು.
ಮಂತ್ರಾಲಯ ಮಠದ ದಿವಾನರಾದ ಶ್ರೀ ಸುಧೀಂದ್ರ ಆಚಾರ್ಯರು, ಪೀಠಾಧಿಪತಿಗಳ ಪೂರ್ವಾಶ್ರಮದ ಕುಟುಂಬದವರು ಹಾಗೂ ಮಠದ ರೀಜನಲ್ ಆಫೀಸ್‌ನ ಮುಖ್ಯಸ್ಥರಾದ ಶ್ರೀ ಗೌತಮ ಆಚಾರ್ಯರು ಇಂದು ಮಧ್ಯಾಹ್ನ ರಂಗಮಂದಿರಕ್ಕೆ ಆಗಮಿಸಿದಾಗ, ಅವರನ್ನು ಸಾಂಪ್ರದಾಯಿಕವಾಗಿ ಮಂಗಳವಾದ್ಯಗಳೊಂದಿಗೆ ಭಕ್ತಿಪೂರ್ವಕವಾಗಿ ಬರಮಾಡಿಕೊಳ್ಳಲಾಯಿತು.


ಸರಸ್ವತಿ ನೆಲೆಸಿದ ಕ್ಷೇತ್ರ:
ಈ ಸಂದರ್ಭದಲ್ಲಿ ಮಾತನಾಡಿದ ದಿವಾನರು, "ಮಂತ್ರಾಲಯದ ಪೀಠಾಧಿಪತಿಗಳಿಂದ ಉದ್ಘಾಟಿಸಲ್ಪಟ್ಟ ಹಾಗೂ ಮೂಲರಾಮನ ಪೂಜೆ ನಡೆದ ಈ ಪವಿತ್ರ ಜಾಗವು ಸಾಕ್ಷಾತ್ ಸರಸ್ವತಿ ನೆಲೆಸಿದ ಕ್ಷೇತ್ರ" ಎಂದು ಮಂದಿರದ ಪಾವಿತ್ರ್ಯತೆಯನ್ನು ಕೊಂಡಾಡಿದರು.
ವಿಶೇಷ ಪೂಜೆ ಮತ್ತು ಆಶೀರ್ವಾದ:
ದಿವಾನರು ಹಾಗೂ ಗಣ್ಯರು ಶ್ರೀ ರಾಘವೇಂದ್ರ ಸ್ವಾಮಿಗಳಿಗೆ ಭಕ್ತಿಯಿಂದ ಮಂಗಳಾರತಿ ನೆರವೇರಿಸಿದರು. ಬಳಿಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಭಕ್ತಾದಿಗಳಿಗೆ ಮಂತ್ರಾಲಯದ ಪವಿತ್ರ ಪರಿಮಳ ಪ್ರಸಾದ ಹಾಗೂ  ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ರಂಗಮಂದಿರದ ಮುಖ್ಯಸ್ಥರಾದ ಎಂ ಕೆ  ಪ್ರಕಾಶ್ ಭಾರದ್ವಾಜ್, ಶ್ರೀಮತಿ ಕೆ ಆರ್ ಅನಿತಾ ಪ್ರಕಾಶ್, ಕುಂಚ ಕಲಾವಿದ ರವೀಂದ್ರ, ಕೆಂಪೇಗೌಡ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರು ಹಾಗೂ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾದ ಕಾಳೇನಹಳ್ಳಿ ಆನಂದ್ ಕುಮಾರ್, ವಕೀಲರಾದ ಅಂಬರೀಶ್, ಹಿರಿಯ ಪತ್ರಕರ್ತರಾದ ಜಯರಾಮ್, ಅಧ್ಯಕ್ಷರಾದ ಶೆಟ್ಟಿಹಳ್ಳಿ ದಯಾನಂದ್, ನಿರ್ದೇಶಕರಾದ ಪಾಂಡುರಂಗ, ಯುವ ಪತ್ರಕರ್ತರಾದ ಐ ಕೆ ಮಂಜುನಾಥ್, ಸ್ವದೇಶಿ ಮಂಜುನಾಥ್, ಯೋಗೇಶ್, ರಾಣಿ, ಶ್ರುತಿ, ಗೌಡಗೆರೆ ರವಿ, ಎಮ್ ಜೆ ಜಯಂತ್, ರಜಿತ್, ಮತ್ತು ಪಟ್ಟಣದ ಗಣ್ಯರು ಸೇರಿದಂತೆ ಇತರರು ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456