ಟೈಮ್ಸ್ ಒಲಿoಪಿಯಾಡ್ ಪರೀಕ್ಷೆಯು 11.01.2026 ನೇ ಭಾನುವಾರ ಟೈಮ್ಸ್ ಕಾಲೇಜ್ ಆವರಣದಲ್ಲಿ ನಡೆಯಲಿದೆ
ಚನ್ನರಾಯಪಟ್ಟಣ: ಟೈಮ್ ಪದವಿ ಪೂರ್ವ ಕಾಲೇಜು, ಚನ್ನರಾಯಪಟ್ಟಣ ಇವರ ವತಿಯಿಂದ ಟೈಮ್ಸ್ ಒಲಿoಪಿಯಾಡ್ ಪರೀಕ್ಷೆಯು 11.01.2026 ನೇ ಭಾನುವಾರ ಟೈಮ್ಸ್ ಕಾಲೇಜ್ ಆವರಣದಲ್ಲಿ ನಡೆಯಲಿದೆ ಎಂದು ಟೈಮ್ಸ್ ಗಂಗಾಧರ್ ತಿಳಿಸಿದರು. ಪಟ್ಟಣದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು 2024 25ನೇ ಶೈಕ್ಷಣಿಕ ವರ್ಷದಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ(ಕನ್ನಡ ಮಾಧ್ಯಮ, ಸಿಬಿಎಸ್‌ಸಿ, ಐಸಿಎಸ್‌ಸಿ ಪಠ್ಯಕ್ರಮದ) ಎಲ್ಲಾ ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಪಾಲ್ಗೊಳ್ಳಬಹುದು ಎಂದರು.
ಸದರಿ ದಿನದಂದು ಆಯ್ದ ಬಸ್ ನಿಲ್ದಾಣಗಳಿಂದ ಉಚಿತವಾಗಿ ಬಸ್ ವ್ಯವಸ್ಥೆ ಇರುತ್ತದೆ, ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಪರೀಕ್ಷೆಯು ಎರಡು ಅವಧಿಯಲ್ಲಿ ನಡೆಯಲಿದೆ, ಮೊದಲ ಅವಧಿ ಪರೀಕ್ಷೆಯು 10 ಗಂಟೆಗೆ ಆರಂಭವಾಗಿ 11:30ಕ್ಕೆ ಮುಗಿಯಲಿದೆ, ಎರಡನೇ ಅವಧಿಯ ಪರೀಕ್ಷೆಯು 11:30 ರಿಂದ 1 ಗಂಟೆವರೆಗೆ ನಡೆಯಲಿದೆ. ಪರೀಕ್ಷೆಯಲ್ಲಿ ಪಾಲ್ಗೊಂಡು ಪಾತ್ಯಧಿಕ ಅಂಕಗಳನ್ನು ಪಡೆದ ಆಯುಧ ವಿದ್ಯಾರ್ಥಿಗಳಿಗೆ ಪ್ರಥಮ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶೇಕಡ 50 ವಿದ್ಯಾರ್ಥಿ ವೇತನ ಪಡೆಯಲಿದ್ದಾರೆ. ಪರೀಕ್ಷೆಯ ನೊಂದಣಿ ಉಚಿತವಾಗಿರುತ್ತದೆ.
ದಿನಾಂಕ 8.1.2026ರ ಒಳಗೆ (9731338083, 9901317067, 6363872009) ವಾಟ್ಸಾಪ್ ಮೂಲಕ ನೊಂದಣಿ ಮಾಡಿಕೊಳ್ಳಬಹುದು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಟೈಮ್ಸ್ ಗಂಗಾಧರ್, ಶ್ರೀಕಂಠ ಮೂರ್ತಿ, ಸುನಿಲ್, ಸಂಜಯ್, ಹಾಜರಿದ್ದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
