ಡ್ರಗ್ಸ್- ಮೈಸೂರು ನಗರ ಪೋಲಿಸ್ ಇಲಾಖೆ ನಡೆ ಸ್ವಾಗತಾರ್ಹ: ತೇಜಸ್ವಿ ನಾಗಲಿಂಗ ಸ್ವಾಮಿ
ಮೈಸೂರು: ಮೈಸೂರು ನಗರದಲ್ಲಿ ಹೆಚ್ಚುತ್ತಿರುವ ಡ್ರಗ್ಸ್ ಮಾರಾಟ ರಾಜ್ಯವ್ಯಾಪಿ ಸುದ್ದಿಯಾಗಿ,ಎಚ್ಚೆತ್ತ ಪೋಲಿಸ್ ಇಲಾಖೆ 12 ಮಂದಿಯನ್ನು ಬಂಧಿಸಿ,ಮಾದಕ ವಸ್ತುಗಳ ಅಮಾನತು ಮಾಡಿರುವುದನ್ನು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ , ಡ್ರಗ್ಸ್ ವಿರೋಧಿ ಹೋರಾಟಗಾರ ತೇಜಸ್ವಿ ನಾಗಲಿಂಗಸ್ವಾಮಿ ಸ್ವಾಗತಿಸಿದ್ದಾರೆ.
ಡ್ರಗ್ಸ್ ಮಾರಾಟದ ಬಗ್ಗೆ ಕನ್ನಡಪರ ಸಂಘಟನೆಗಳ ಒಕ್ಕೂಟದ ವತಿಯಿಂದ ನಶೆ ಮುಕ್ತ ಮೈಸೂರು ಎಂಬ ಘೋಷವಾಕ್ಯ ದೊಂದಿಗೆ ಜನವರಿ 12 ರಂದು ಒಂದು ದಿನದ ಧರಣಿ ಸತ್ಯಾಗ್ರಹ ನಡೆಸಿ ಡ್ರಗ್ಸ್ ಮುಕ್ತ ಮೈಸೂರು ನಿರ್ಮಾಣಕ್ಕಾಗಿ ಒತ್ತಾಯಿಸಿ ಲಾಗಿತ್ತು.
ಇದರ ಬೆನ್ನಲ್ಲೇ ಪೋಲಿಸ್ ಇಲಾಖೆ 12 ಜನ ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಂಡ ಪೋಲಿಸ್ ಇಲಾಖೆ ಕಾರ್ಯವೈಖರಿಗೆ ತೇಜಸ್ವಿ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ಮೈಸೂರು ನಗರದಲ್ಲಿ ಮಾದಕ ವಸ್ತುಗಳ ನಿಯಂತ್ರಣ ಸಂಬಂಧ ವಿಶೇಷ ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗುತ್ತಿದ್ದು, ಜನವರಿ 15 ರಿಂದ ಈವರೆಗೆ ಒಟ್ಟು 4 ಮಾದಕ ವಸ್ತು ಅಮಾನತು ಪ್ರಕರಣಗಳನ್ನು ದಾಖಲಿಸಲಿಸಿರುವುದು ಒಳ್ಳೆಯ ಬೆಳವಣಿಗೆ.
ಇದೆ ರೀತಿ ಪೋಲಿಸ್ ಇಲಾಖೆ ನಿರಂತರ ದಾಳಿ ನಡೆಸಿ ಡ್ರಗ್ಸ್ ಮಾಫಿಯಾ ವನ್ನು ಬುಡಸಮೇತ ಕಿತ್ತೊಗೆಯಬೇಕೆಂದು ತೇಜಸ್ವಿ ನಾಗಲಿಂಗಸ್ವಾಮಿ ಮನವಿ ಮಾಡಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
