ಮಹನೀಯರ ಆರಾಧನಾ ಮಹೋತ್ಸವ

Mar 2, 2026 - 13:05
Mar 2, 2026 - 17:23
 0  5
ಮಹನೀಯರ ಆರಾಧನಾ ಮಹೋತ್ಸವ
ಸುದ್ದಿ ಕಿರಣ ನ್ಯೂಸ್ ಡೆಸ್ಕ್

     ಬೆಂಗಳೂರು: ಶ್ರೀ ಗುರು ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ಮಾರ್ಚ್ 5 ರಿಂದ 7ರ ವರೆಗೆ ಶ್ರೀ ಸುಧೀಂದ್ರತೀರ್ಥರ, ಶ್ರೀ ವಾದಿರಾಜರ ಮತ್ತು ಶ್ರೀ ವ್ಯಾಸರಾಜರ ಆರಾಧನಾ ಮಹೋತ್ಸವವನ್ನು ಪ್ರಕಾಶನಗರದ 10ನೇ ಮುಖ್ಯರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಹಮ್ಮಿಕೊಂಡಿದೆ.
ಕಾರ್ಯಕ್ರಮಗಳು : ಮಾರ್ಚ್ 5, ಗುರುವಾರ, ಶ್ರೀ ಸುಧೀಂದ್ರತೀರ್ಥರ ಮತ್ತು ಬಾಳಗಾರು ಶ್ರೀ ರಘುಮಾನ್ಯತೀರ್ಥರ ಆರಾಧನೆ : ಬೆಳಗ್ಗೆ 8 ರಿಂದ ಪಂಚಾಮೃತ ಅಭಿಷೇಕ, ಸುಮಧ್ವ ವಿಜಯ ಸಚ್ಛಾಸ್ತ್ರ ಪಾರಾಯಣ, ಶ್ರೀಕಾಂತ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಮ||ಶಾ||ಸಂ|| ಶ್ರೀ ಅಬ್ಬೂರು ಬದರಿ ಆಚಾರ್ಯರಿಂದ "ಶ್ರೀ ಸುಧೀಂದ್ರತೀರ್ಥರ ಸಂಕ್ಷಿಪ್ತ ಜೀವನ ಚರಿತ್ರೆ ಮತ್ತು ತತ್ವಜ್ಞಾನಕ್ಕೆ ವಾಜ್ಞಯ ಕೊಡುಗೆ" ವಿಷಯವಾಗಿ ಧಾರ್ಮಿಕ ಪ್ರವಚನ.

ಮಾರ್ಚ್ 6, ಶುಕ್ರವಾರ : ಶ್ರೀ ವಾದಿರಾಜರ ಆರಾಧನೆ : ಬೆಳಗ್ಗೆ 8 ರಿಂದ ಪಂಚಾಮೃತ ಅಭಿಷೇಕ, ಸುಮಧ್ವ ವಿಜಯ ಸಚ್ಛಾಸ್ತ್ರ ಪಾರಾಯಣ, ರುಕ್ಮಿಣಿ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಮ||ಶಾ||ಸಂ|| ಶ್ರೀ ಸಾಂಗ್ಲಿ ವಾಸುದೇವಾಚಾರ್ಯರಿಂದ "ಶ್ರೀ ವಾದಿರಾಜರ ಸಂಕ್ಷಿಪ್ತ ಜೀವನ ಚರಿತ್ರೆ ಮತ್ತು ಶ್ರೀಮದಾಚಾರ್ಯರ ತತ್ವಜ್ಞಾನಕ್ಕೆ ಶ್ರೀ ವಾದಿರಾಜರ ಕೊಡುಗೆ" ವಿಷಯವಾಗಿ ಧಾರ್ಮಿಕ ಪ್ರವಚನ.
ಮಾರ್ಚ್ 7, ಶನಿವಾರ : ಶ್ರೀ ವ್ಯಾಸರಾಜರ ಆರಾಧನೆ : ಬೆಳಗ್ಗೆ 8 ರಿಂದ ಪಂಚಾಮೃತ ಅಭಿಷೇಕ, ಸುಮಧ್ವ ವಿಜಯ ಸಚ್ಛಾಸ್ತ್ರ ಪಾರಾಯಣ, ಶ್ರೀ ಗುರುರಾಘವೇಂದ್ರ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಮ||ಶಾ||ಸಂ|| ಶ್ರೀ ಆತನೂರು ಭೀಮಸೇನಾಚಾರ್ಯರಿಂದ "ಶ್ರೀ ವ್ಯಾಸರಾಜರ ಸಂಕ್ಷಿಪ್ತ ಜೀವನ ಚರಿತ್ರೆ ಮತ್ತು ವ್ಯಾಸತ್ರಯಗಳ ಪರಿಚಯ" ವಿಷಯವಾಗಿ ಧಾರ್ಮಿಕ ಪ್ರವಚನ ಕಾರ್ಯಕ್ರಮಗಳನ್ನು ಏರ್ಪಡಿಸಿದೆ ಎಂದು ಶ್ರೀಮಠದ ಪದಾಧಿಕಾರಿಗಳು ತಿಳಿಸಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456