ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ; ಸರ್ವ ಜನಾಂಗದ ಮುಖಂಡರು ಭಾಗಿ
ರಾಯಚೂರು (ಪಾಮನಕಲ್ಲೂರು ಅ.30): ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದಲ್ಲಿ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರ್ವಜನಾಂಗದ ಮುಖಂಡರ ನೇತೃತ್ವದಲ್ಲಿ ಗುರುವಾರ ಅರ್ಥಪೂರ್ಣವಾಗಿ ಮತ್ತು ಅದ್ದೂರಿಯಾಗಿ ಆಚರಿಸಲಾಯಿತು.
ಗ್ರಾಮದ ರಾಯಚೂರು - ಲಿಂಗಸುಗೂರು ಮುಖ್ಯರಸ್ತೆ ಬಳಿ ಇರುವ ಮಹರ್ಷಿ ವಾಲ್ಮೀಕಿ ವೃತ್ತಕ್ಕೆ ಮತ್ತು ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಕಾರ್ಯಕ್ರಮಕ್ಕೆ ಗ್ರಾಮದ ಹಿರಿಯರು ಮತ್ತು ವಾಲ್ಮೀಕಿ ನಾಯಕ ಸಮಾಜದ ಮುಖಂಡರು ಚಾಲನೆ ನೀಡಿದರು.
ಮಹಾತ್ಮರ ವೃತ್ತಗಳಿಗೆ ಪೂಜೆ:
ಪ್ರತಿಭಾರಿಯಂತೆ ಈ ಬಾರಿ ಕೂಡ ಮಹರ್ಷಿ ವಾಲ್ಮೀಕಿ ಜಯಂತೋತ್ಸವದ ಅಂಗವಾಗಿ ಮುಖ್ಯರಸ್ತೆಯ ಬಳಿಯಲ್ಲಿರುವ ಶ್ರೀ ಗುರು ಒಳಬಳ್ಳಾರಿ ಚನ್ನಬಸವೇಶ್ವರ ನಾಮಫಲಕ, ನಿಜಶರಣ ಅಂಬಿಗರ ಚೌಡಯ್ಯರ ನಾಮಫಲಕ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ನಾಮಫಲಕ, ಕನಕದಾಸರ ನಾಮಫಲಕ, ಟಿಪ್ಪು ಸುಲ್ತಾನ್ ನಾಮಫಲಕಗಳಿಗೆ ಪೂಜೆ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಗ್ರಾಮದ ಮುಖಂಡರಾದ ಮಲ್ಲಿಕಾರ್ಜುನ ನಾಲ್ವರ್ಕರ್, ಜಗತ್ತಿನಾದ್ಯಂತ ಜಾತಿ, ಧರ್ಮ, ಮತ, ಪಂಥಗಳನ್ನು ಮೀರಿ ಎಲ್ಲರೂ ಅನುಕರಣೆ ಮಾಡಬಹುದಾದ ಮಹಾನ್ ಗ್ರಂಥವನ್ನು ಮಹರ್ಷಿ ವಾಲ್ಮೀಕಿಯವರು ನಮಗೆ ನೀಡಿದ್ದಾರೆ. ಅವರ ಜಯಂತಿಯನ್ನು ರಾಷ್ಟ್ರಾದ್ಯಂತ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ. ಅದರಂತೆಯೇ ಪಾಮನಕಲ್ಲೂರು ಗ್ರಾಮದಲ್ಲಿ ಕೂಡ ಸಂಭ್ರಮದಿಂದ ಮಹರ್ಷಿ ವಾಲ್ಮೀಕಿಯವರ ಜಯಂತಿ ಆಚರಣೆ ಮಾಡಲಾಗುತ್ತದೆ ಎಂದರು.
ಮಹರ್ಷಿ ವಾಲ್ಮೀಕಿಯವರು ರಾಮಾಯಣ ಗ್ರಂಥದ ಮೂಲಕ ಏನೆಲ್ಲಾ ಮೌಲ್ಯಯುತವಾದ ಸಂದೇಶಗಳನ್ನು ನೀಡಿದ್ದಾರೋ ಅವುಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾಗಬೇಕು. ಮಹರ್ಷಿ ವಾಲ್ಮೀಕಿಯವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಮುನ್ನಡೆಯಬೇಕು. ಅವರ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮಲ್ಲಿಕಾರ್ಜುನ ನಾಲ್ವರ್ಕರ್ ರವರು ತಿಳಿಸಿದರು.
ಬಳಿಕ ಸನ್ಮಾನ ಸ್ವೀಕರಿಸಿ ಮಾತನಾಡಿದ ವಕೀಲರಾದ ಅಯ್ಯಣ್ಣ ನಾಯಕ ಪಾಮನಕಲ್ಲೂರುರವರು, ಪಾಮನಕಲ್ಲೂರು ಗ್ರಾಮದಲ್ಲಿ ಎಲ್ಲಾ ಮಹಾತ್ಮರ ಜಯಂತಿಯನ್ನು ಎಲ್ಲರೂ ಸೇರಿ ಒಗ್ಗಟ್ಟಿನಿಂದ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ ಎಂದರು.
ಮೊದಲ ಬಾರಿಗೆ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಮಾಡುವ ಸಂದರ್ಭದಲ್ಲಿ ಎಲ್ಲಾ ಮಹಾತ್ಮರ ನಾಮಫಲಕಗಳಿಗೆ ಪೂಜೆ ಸಲ್ಲಿಸುವ ಮೂಲಕ ಹೊಸ ಸಂಪ್ರಾದಯಕ್ಕೆ ವಾಲ್ಮೀಕಿ ಸಮಾಜದ ಯುವಕರು ಚಾಲನೆ ನೀಡಿದ್ದರು. ಅಂದಿನಿಂದ ಗ್ರಾಮದಲ್ಲಿ ಆಚರಣೆ ಮಾಡಲಾಗುವ ಮಹಾತ್ಮರ ಜಯಂತಿಗಳ ಸಂದರ್ಭದಲ್ಲಿ ಎಲ್ಲಾ ಮಹಾತ್ಮರ ನಾಮಫಲಕಗಳಿಗೆ ಪೂಜೆ ಸಲ್ಲಿಸಲಾಗುತ್ತಿದೆ. ಜಾತಿ, ಧರ್ಮಗಳ ಬೇಧ ಭಾವವಿಲ್ಲದೇ ಎಲ್ಲರೂ ಸೇರಿ ಮಹಾತ್ಮರ ಜಯಂತಿ ಆಚರಣೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಇತ್ತೀಚೆಗೆ ವಕೀಲ ವೃತ್ತಿ ಆರಂಭಿಸಿದ ಗ್ರಾಮದ ಯುವಕನಾದ ಅಯ್ಯಣ್ಣ ನಾಯಕ ಪಾಮನಕಲ್ಲೂರುರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀನಿವಾಸ್ ಸಾನಬಾಳ, ಪ್ರಮುಖರಾದ ಅಮರಯ್ಯ ತಾತ, ಮಲ್ಲಿಕಾರ್ಜುನ ನಾಲ್ವರ್ಕರ್, ಅಯ್ಯಪ್ಪ ತಳವಾರ ವಾಟರ್ಮ್ಯಾನ್, ಮಲ್ಲಪ್ಪ ತಳವಾರ, ಶರಣಪ್ಪ ಕೊಂಡಾಲ, ಲಕ್ಷ್ಮಣ ದೊರೆ ಯದ್ದಲದೊಡ್ಡಿ, ಶಿವಗೇನಿ ನಾಯಕ ಡ್ರೈವರ್, ಹುಚ್ಚರಡ್ಡಿ ನಾಯಕ ಜಂತಾಓಣಿ, ಪಕಿರಪ್ಪ ಯದಲದೊಡ್ಡಿ, ಹನುಮಂತ ಯದಲದೊಡ್ಡಿ, ವಿಜಯಕುಮಾರ್ ಗುತ್ತೇದಾರ್, ಮೌನೇಶ್ ಯದಲದೊಡ್ಡಿ ಕಾನ್ಯಾಳ, ಶರಣಬಸವ ಕಾನ್ಯಾಳ್, ಸಣ್ಣ ದುರುಗಪ್ಪ ಜೋಳದರಾಶಿ, ವೀರಪಾಕ್ಷಿ ಆನಂದಗಲ್, ಬಸಪ್ಪ ಅರಿಕೇರಿ, ದೇವಪ್ಪ ತಳವಾರ, ಬಸವರಾಜ ಪೋಸ್ಟ್ ಆಫೀಸರ್, ಗೋಯಪ್ಪ ಯದಲದೊಡ್ಡಿ, ಅಯ್ಯಪ್ಪ ತಳವಾರ್, ಈರಪ್ಪ ಅಮೀನಗಡ, ಹುಲುಗಪ್ಪ ಯದಲದೊಡ್ಡಿ, ದುರುಗಪ್ಪ ಯದಲದೊಡ್ಡಿ ಕಾನ್ಯಾಳ, ಲೋಕಪ್ಪ ಅರಿಕೇರಿ, ಶಶಿಧರ್ ಜಂಗಮರಹಳ್ಳಿ, ಅಮರೇಶ್ ಈಳಗೇರ್, ರಂಜಾನ್ ಸಾಬ್, ಅಮರೇಶ ಡಿ ಪೂಜಾರಿ, ಬಸವರಾಜ್ ಕಾನ್ಯಾಳ, ಅಯ್ಯಣ್ಣ ನಾಯಕ ಪಾಮನಕಲ್ಲೂರು, ಆಂಜನೇಯ ನಾಯಕ, ಮಾರ್ಕಂಡೇಯ್ಯ ನಾಯಕ, ಹನುಮಂತರಾಯಗೌಡ, ಆದಪ್ಪ ಪೂಜಾರಿ ಸೇರಿದಂತೆ ಪಾಮನಕಲ್ಲೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಉಪಸ್ಥಿತರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
