ರೇಷ್ಮೆ ಬೆಳೆಯಲ್ಲಿ ಸಿಲಿಕಾನ್ ಉಪಯೋಗದ ಮಹತ್ವ

Feb 17, 2026 - 17:43
 0  5
ರೇಷ್ಮೆ ಬೆಳೆಯಲ್ಲಿ ಸಿಲಿಕಾನ್ ಉಪಯೋಗದ ಮಹತ್ವ

              ಮನುಷ್ಯ ಎಷ್ಟೇ ವಿದ್ಯಗಳನ್ನು ಕಲಿತಿದ್ದರೂ, ಯಾವುದೇ ದೊಡ್ಡ ಉದ್ಯೋಗ ಮಾಡುತ್ತಿದ್ದರೂ, ಜಗತ್ತಿಗೆ ಅನ್ನ ನೀಡುವ ಕೃಷಿ ವೃತ್ತಿಯೇ ಎಲ್ಲಕ್ಕಿಂತ ಅತ್ಯಂತ ಶ್ರೇಷ್ಟವಾದದ್ದು. ರೈತ ಮಣ್ಣಿಗಿಳಿದು ಕೃಷಿ ಕಾಯಕ ಮಾಡಿದರೆ ಮಾತ್ರ ಜಗತ್ತಿನ ಇತರ ವೃತ್ತಿಗಳು ಮತ್ತು ದೇಶದ ಅಭಿರುದ್ದಿ ಸುಗಮವಾಗಿ ನಡೆಯಲು ಸಾಧ್ಯ. ಕೃಷಿ ಇಲ್ಲದಿದ್ದರೆ ಇಡಿ ಜಗತ್ತಿನ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯೇ ಹಾಳಾಗುತ್ತದೆ.ಆದ್ದರಿಂದ ದೇಶದ ಅಭಿರುದ್ದಿಯಾಗುವಲ್ಲಿ ಕೃಷಿ ಕ್ಷೇತ್ರ ಮತ್ತು ರೈತನ ಪಾತ್ರ ತುಂಬಾ ಮಹತ್ವದ್ದಾಗಿದೆ.
       ಅಂತೆಯೇ ಇಂದು ಕೃಷಿ ಕಾಯಕ ಮಾಡುವುದು ಅಷ್ಟೆ ಕಷ್ಟಕರವಾಗಿದೆ ಏಕೆಂದರೆ ಒಂದೆಡೆ ಹವಾಮಾನದ ವೈಪರೀತ್ಯ ಮತ್ತೊಂದು ಕಡೆ ಅತಿಯಾದ ರಾಸಾಯನಿಕ ಬಳಕೆಯಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗಿ ಇಳುವರಿಯೂ ಕುಂಠಿತವಾಗುತ್ತಿದೆ.ಖರ್ಚು ಹೆಚ್ಚು ಆದಾಯ ಕಡಿಮೆಯಾಗಿ ರೈತ ಸಂಕಷ್ಟದ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದಾನೆ.


            ಇಂತಹ ಸಂದರ್ಭದಲ್ಲಿ ಜಿಲ್ಲೆಯ ರೈತರು ಮಣ್ಣನ್ನು ಸಂವರಕ್ಷಣೆ ಮಾಡುವ ಸಿಲಿಕಾನ್ ಉತ್ಪನ್ನ ಉಪಯೋಗಿಸಿ ರೇಷ್ಮೆ ಬೆಳೆಯಲು ಮುಂದಾಗಿರುವುದು ತುಂಬಾ ಸಂತಸದ ವಿಷಯ.ಇದು ಅತಿ ಶೀತ ಅಥವಾ ಅತಿ ಉಷ್ಣದಿಂದ ಬೆಳೆ ಮೇಲಾಗುವ ಒತ್ತಡವನ್ನ ನಿಯಂತ್ರಿಸಿ ಮಣ್ಣಿನಲ್ಲಿರುವ ಸವಳು ಮತ್ತು ಜವಳು ಹಾಗೂ ಅನುಪಯುಕ್ತ ವಿಷ ಪದಾರ್ಥವನ್ನು ಹೊರಹಾಕಿ ಮಣ್ಣನ್ನು ಶುದ್ಧಗೊಳಿಸುವ ವಿಶೇಷ ಕಾರ್ಯ ಮಾಡುತ್ತದೆ.

ಸಿಲಿಕಾನ್ ಉಪಯೋಗದಿಂದ ರೇಷ್ಮೆ ರೈತನಿಗಾಗುವ ಅನುಕೂಲಗಳು.  ಸಿಲಿಕಾನ್ ಉತ್ಪನ್ ವನ್ನು ನೇರವಾಗಿ ರೇಷ್ಮೆ ಹುಳುಗಳಿಗೆ ನೀಡುವ ಬದಲು, ಅವುಗಳ ಆಹಾರವಾದ ಹಿಪ್ಪು ನೇರಳೆ (Mulberry)ಗಿಡಗಳಿಗೆ ನೀಡಲಾಗುತ್ತದೆ. ಇದರಿಂದ ಎಲೆಗಳ ಗುಣಮಟ್ಟ ಹೆಚ್ಚಳವಾಗಿ ಎಲೆಗಳು ದಪ್ಪವಾಗಿ, ಹಸಿರಾಗಿ ಮತ್ತು ರಸಭರಿತವಾಗಿ ಬೆಳೆಯುತ್ತವೆ. ಇದರಿಂದ ಎಲೆಗಳಲ್ಲಿ ತೇವಾ0ಶ ದೀರ್ಘಕಾಲ ಉಳಿಯುವುದರಿಂದ ರೇಷ್ಮೆ ಹುಳುಗಳ ಉತ್ತಮ ಜೀರ್ಣ ಕ್ರಿಯೆಗೆ ಸಹಾಯವಾಗುತ್ತದೆ.

ರೋಗ ಮತ್ತು ಕೀಟ ನಿರೋದಕ ಶಕ್ತಿ. ಸಿಲಿಕಾನ್ ಗಿಡದ ಎಲೆಗಳ ಕೋಶಗಳ (Cells )ಮೇಲೆ ರಕ್ಷಣಾತ್ಮಕ ಪದರವನ್ನು ನಿರ್ಮಿಸುತ್ತದೆ. ಆದ್ದರಿಂದ ಥ್ರಿಪ್ಸ್, ಜೇಡರ ನುಶಿ (Mites)ಮತ್ತು ಬಿಳಿ ನೊಣದಂತಹ ರಸಹೀರುವ ಕೀಟಗಳು ಎಲೆಗಳ ರಸ ಹಿರಲು ಕಷ್ಟವಾಗುತ್ತದೆ. ಜೊತೆಗೆ ಎಲೆಚುಕ್ಕೆ ರೋಗ, ಬೂದಿ ರೋಗ(Powdery mildew)ಬೂಜು ರೋಗ(Downy mildew)ರೋಗಗಳನ್ನು ನಿಯಂತ್ರಿಸಿ ಆದಿಕ ತಾಪಮಾನದ ಬೇಸಿಗೆ ಸಮಯದಲ್ಲಿ ಹಿಪ್ಪು ನೇರಳೆ ಗಿಡಗಳು ಬಾಡದಂತೆ ತಡೆಯಲು ಸಿಲಿಕಾನ್ ಸಹಾಯಮಾಡುತ್ತದೆ.ಜೊತೆಗೆ ದ್ರವರೂಪದ ಅರತೋಸಿಲಿಸಿಕ್ ಅಸಿಡ್ (Ortho silisic acid )ಅನ್ನು ಸಿಂಪರಣೆಗೂ ಬಳಸಬಹುದು.

       ಭಾರತದಲ್ಲಿ ಕರ್ನಾಟಕ  ರೇಷ್ಮೆ ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದು ಇತ್ತೀಚಿನ ಅಂಕಿ -ಅಂಶಗಳ ಪ್ರಕಾರ 1.3 ಲಕ್ಷ ಹೆಕ್ಕಟೆರಕ್ಕೂ ಅದಿಕ ರೇಷ್ಮೆ ಬೆಳೆ ಇದ್ದು ಒಂದು ಲಕ್ಷಕ್ಕೂ ಅದಿಕ ಕುಟುಂಬಗಳು ರೇಷ್ಮೆ ಕೃಷಿಯನ್ನೇ ಅವಲಂಬಿಸಿವೆ ಅದರಂತೆ ಯಾಲಕ್ಕಿ ನಾಡು ಹಾವೇರಿ ಜಿಲ್ಲೆ ಕೂಡಾ ಉತ್ತರಕರ್ನಾಟಕ ಜಿಲ್ಲೆಗಳಲ್ಲಿಯೆ ರೇಷ್ಮೆ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದ್ದು ಪ್ರಮುಖ ಅಂಕಿ -ಅಂಶಗಳ ಪ್ರಕಾರ ಒಟ್ಟು 3.500 ಹೇಕ್ಟರ ಇದ್ದು 250 ಕ್ಕೂ ಅದಿಕ ಕುಟುಂಬಗಳು ಹಾಗೂ 8,000 ಕ್ಕೂ ಆದಿಕ ರೇಷ್ಮೆ ಬೆಳೆಯುವ ರೈತರಿದ್ದಾರೆ. ರಾಮನಗರ, ಕೋಲಾರ, ಶಿಡ್ಲಘಟ್ಟ ಬಿಟ್ಟರೆ ಹಾವೇರಿ ಜಿಲ್ಲೆ ಮುಂಚೂಣಿಯಲ್ಲಿದೆ. ಜಿಲ್ಲೆಯ ಮೇಲ್ಮುರಿ, ಇಚ್ಚ0ಗಿ, ತಿಮ್ಮೆನಹಳ್ಳಿ, ಹೊಸರಿತ್ತಿ, ಹಳೇರಿತ್ತಿ, ಕಲಿವ್ಯಾಳ, ಕಳ್ಳಿಹಾಳ ಮುಂತಾದ ಗ್ರಾಮಗಳಲ್ಲಿ ವೇದಾಂತ ಕಂಪನಿಯ ಸಿಲಿಕಾನ್ (ಆಗ್ರೋಸಿಲ್ )ಉಪಯೋಗಿಸಿ ಉತ್ತಮ ಫಲಿತಾಂಶ ಪಡೆದಿದ್ದಾರೆ.ಅದರಲ್ಲೂ ವಿಶೇಷವಾಗಿ ಇಚ್ಛ0ಗಿ ಗ್ರಾಮದ ಯುವ ಪ್ರಗತಿಪರ ಕೃಷಿಕ ಶ್ರೀಕಾಂತ ಕಳಸದ, ಮೇಲ್ಮುರಿ ಗ್ರಾಮದ ಶಿವಾನಂದ ವೀರಪ್ಪ ಅರಳಿ, ವೀರಭದ್ರಪ್ಪ ಅರಳಿ,ಹಳೇರಿತ್ತಿ ಗ್ರಾಮದ ರಮೇಶ ಕಿಳ್ಳಿಕ್ಯಾತರ, ತಿಮ್ಮೆನಹಳ್ಳಿ ಗ್ರಾಮದ ಜಗದೀಶ ದಾಸಣ್ಣನವರ, ಹೊಸರಿತ್ತಿ ಗ್ರಾಮದ ರಾಮಣ್ಣ ಅಂಗಡಿ, ಶ್ರೀಕಾಂತ ಜಂಗಳಿ, ಕಳ್ಳಿಹಾಳ ಗ್ರಾಮದ ಪಂಚಾಕ್ಷರಯ್ಯ ಹಿರೇಮಠ, ದೇಶಳ್ಳಿ ಗ್ರಾಮದ ಫಕ್ಕೀರೇಶ ಅಮರಪ್ಪ ನವರ, ಕಲಿವ್ಯಾಳ ಗ್ರಾಮದ ಜಂಜಪ್ಪ ಕರಜಗಿ, ದೊಂಬರಮತ್ತೂರ ಗ್ರಾಮದ ವೀರಭಸಯ್ಯ ಪಿ,, ಪುರಾಣಿಕಮಠ, ಬೈರಾಪುರದ ಹನಮಂತಪ್ಪ ಲಮಾಣಿ, ಕಡಕೋಳ ಗ್ರಾಮದ ಕರಬಸಪ್ಪ  ಮುಂತಾದ ಗ್ರಾಮಗಳ ರೈತರು ಉತ್ತಮ ಫಲಿತಾಂಶ ಪಡೆದಿದ್ದಾರೆ.

ಬೆಂಗಳೂರಿನ ಕೃಷಿ ವಿಶ್ವ ವಿದ್ಯಾಲಯ ಕೂಡಾ ರೇಷ್ಮೆ ಬೆಳೆಗೆ ಸಿಲಿಕಾನ್ ಉಪಯೋಗಿಸಲು ಸಿಪಾರಸ್ಸು ಮಾಡಿದೆ.

ಮಹಾಷ್ಟ್ರದ ಪುಣೆಯ ಖ್ಯಾತ ಕೃಷಿ ವಿಜ್ಞಾನಿಗಳು, ಅಂತರಾಷ್ಟ್ರಿಯ ಸಿಲಿಕಾನ್ ಕೃಷಿ ಸೊಸೈಟಿಯ (ಅಮೇರಿಕಾ)ಸದಸ್ಯರು, ಭಾರತದ ಪ್ರ -ಪ್ರಥಮ ಸಿಲಿಕಾನ್ ತಯಾರಕರು, ವೇದಾಂತ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಆದ ಗೌರವಾನ್ವಿತ ಡಾ. ಶಿವಾಜಿ ಥೋರಟ್ ಅವರು ಕಳೆದ  ನಾಲ್ಕು ದಶಕಗಳಿಂದ ತಮ್ಮ ಅಪಾರ ಅನುಭವ ಮತ್ತು ಜ್ಞಾನದಿಂದ ನೀರನ್ನು ಶುದ್ಧ ಮಾಡಿ ಮಣ್ಣನ್ನು ಸಂರಕ್ಷಣೆ ಮಾಡಿ ಗುಣಮಟ್ಟದ ಇಳುವರಿ ಕೊಡುವ ಅದರಲ್ಲೂ ವಿಶೇಷವಾಗಿ ಸಿಲಿಕಾನ್ ವಿವಿಧ ಅಂಶಗಳ ಉತ್ಪನ್ನಗಳಾದ ಅಗ್ರೋಸಿಲ್, ಕಾರ್ಬೋಸಿಲ್, ಪೈಟೋಸಿಲ್, ಮೈಕ್ರೋಸಿಲ್, ಗ್ರಿನ್ಸಿಲ್ ಹಾಗೂ ನುಟ್ರಾಸಿಲ್ ಇತ್ಯಾದಿ ಉತ್ಪನ್ನಗಳನ್ನು ರೈತರಿಗೆ ಪೂರೈಸುವ ಮೂಲಕ ರೈತರ ಹಾಗೂ ಕೃಷಿ ಕ್ಷೇತ್ರದ ಅಭಿರುದ್ದಿಗೆ ಕಾರಣಿಭೂತ ರಾಗಿದ್ದಾರೆ. 

          ಒಟ್ಟಿನಲ್ಲಿ ಅನ್ನದಾತರು ಕೃಷಿ ಉಳಿವು ಮತ್ತು ಬೆಳವಣಿಗೆಗೆ ಹೆಚ್ಚು ರೇಷ್ಮೆ ಬೆಳೆಗೆ ಪರಿವರ್ತನೆ  ಆಗುವುದರ ಜೊತೆಗೆ ಅದಕ್ಕೆ ಕೊಟ್ಟಿಗೆ, ಕುರಿ -ಕೋಳಿ ಗೊಬ್ಬರ,ಬೇವಿನಹಿಂಡಿ, ಲಘು ಪೋಷಕಾಂಶ,ಹಾಗೂ ಸಿಲಿಕಾನ್, ಕಾರ್ಬನ್ ಇಂಗಾಲದಂತ ಸಾವಯವ ಉತ್ಪನ್ನಗಳನ್ನು ಉಪಯೋಗಿಸಿ ಉತ್ತಮ ಪಸಲು ಬೆಳೆದು ಆರ್ಥಿಕವಾಗಿ ಭದ್ರರಾಗಬೇಕು.ಏಕೆಂದರೆ ಪ್ರತಿ ಎರಡು ತಿಂಗಳಲ್ಲಿ ನಿರಂತರ ಆದಾಯ ಬರುವ ಏಕೈಕ ಬೆಳೆ ಅಂದರೆ ರೇಷ್ಮೆ ಬೆಳೆಯಾಗಿದೆ.

   ಪ್ರಸ್ತುತ ಸಂದರ್ಭದಲ್ಲಿ ಪ್ರಸಿದ್ಧ ರೇಷ್ಮೆ ಗೂಡಿನ ರಾಮನಗರ ರೇಷ್ಮೆ ಅಧಿಕಾರಿಗಳ ಪ್ರಕಾರ ಕಳೆದ ನಾಲ್ಕು ವರ್ಷಗಳಲ್ಲಿ ಇದೀಗ ಒಂದು ಕೆಜಿ ಹುಳಕ್ಕೆ ದರ ಸರಾ ಸರಿ ಒಂದು ಸಾವಿರ ರೂಪಾಯಿ ಆಗಿರುವುದು ರೈತರಿಗೆ ಸಂತಸ ತಂದಿದೆ ಎಂದಿದ್ದಾರೆ.

ರೈತರ ಚಿತ್ತ ರೇಷ್ಮೆ ಬೆಳೆಯತ್ತ,
ರೈತರ ಚಿತ್ತ ಸಿಲಿಕಾನ್ ಉಪಯೋಗದತ್ತ,
ರೈತರ ಚಿತ್ತ ಕಾರ್ಬನ್ ಇಂಗಾಲಾದತ್ತ,
ರೈತರ ಚಿತ್ತ ಸಾವಯವ ಕೃಷಿಯತ್ತ,

-ರೇಷ್ಮೆ ಬೆಳೆ ಕುರಿತು ಚುಟುಕು ಲೇಖನ.
ಡಾ. ಗಂಗಯ್ಯ ಶಾಂತಯ್ಯ ಕುಲಕರ್ಣಿ.
ಕೃಷಿ ಸಲಹೆಗಾರರು ಹಾಗೂ 
ಪ್ರದಾನ ಕಾರ್ಯದರ್ಶಿ, ಕಚುಸಾಪ 
ಜಿಲ್ಲಾ ಘಟಕ, ಹಾವೇರಿ.
ದೂರವಾಣಿ -9739765222
ಇಮೆಲ್ -kulkarni.gangayya2@gmail.com.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456