ರೌಡಿ ಚಟುವಟಿಕೆ ನಿಯಂತಯ್ರಿಸಲು ರೌಡಿ ಪೇರೆಡ್, ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾದರೆ ಕಠಿಣ ಕಾನೂನು ಕ್ರಮ ಜಾರಿ

Jan 4, 2026 - 17:10
Jan 4, 2026 - 17:13
 0  259
ರೌಡಿ ಚಟುವಟಿಕೆ ನಿಯಂತಯ್ರಿಸಲು ರೌಡಿ ಪೇರೆಡ್, ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾದರೆ ಕಠಿಣ ಕಾನೂನು ಕ್ರಮ ಜಾರಿ

ಕೆ.ಜಿ.ಎಫ್., ಜ. 04 :

       ಮುಂಜಾಗೃತ ಕ್ರಮವಾಗಿ ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿಂದು ರೌಡಿ ಆಸಾಮಿಗಳ ರೌಡಿ ಚಟುವಟಿಕೆಗಳನ್ನು ನಿಯಂತ್ರಸಲು ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ರೌಡಿ ಪೇರೆಡ್ ಅನ್ನು ಹಮ್ಮಿಕೊಳ್ಳಲಾಯಿತು.

       ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶಿವಾಂಶು ರಜಪೂತ್ ಮತ್ತು ಡಿವೈಎಸ್‌ಪಿ ವಿ.ಲಕ್ಷö್ಮಯ್ಯ ಅವರ ನೇತೃತ್ವದಲ್ಲಿ ಭಾನುವಾರದಂದು ಬೆಳಿಗ್ಗೆ ಡಿ.ಎ.ಆರ್ ಕವಾಯತು ಮೈದಾನದಲ್ಲಿ  ರೌಡಿ ಪೇರೆಡ್ ಹಮ್ಮಿಕೊಂಡಿದ್ದು ಕೆ.ಜಿ.ಎಫ್ ಪೊಲೀಸ್ ಘಟಕದ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 664 ರೌಡಿ ಶೀಟರ್‌ಗಳಿದ್ದು ಈ ಪೇರೆಡ್‌ಗೆ ಒಟ್ಟು 280 ಜನ ಹಾಜರಾಗಿದ್ದು ಇವರುಗಳಿಗೆ ಯಾವುದೇ ಕಾನೂನು ಭಾಹಿರ ಕೃತ್ಯಗಳಲ್ಲಿ ಭಾಗಿಯಾಗದೆ ಸಾರ್ವಜನಿಕ ನೆಮ್ಮದಿಗೆ ತೊಂದರೆ ನೀಡಿದೆ ಸಮಾಜದಲ್ಲಿ ಒಳ್ಳೆಯ ಪ್ರಜೆಗಳಾಗಿ ಜೀವನ ರೂಪಿಸಿಕೊಳ್ಳಲು ತಿಳುವಳಿಕೆ ನೀಡಿ, ಒಂದು ವೇಳೆ ರೌಡಿ ಆಸಾಮಿಗಳು ಯಾವುದೇ ರೀತಿಯ ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗಿಯಾದರೆ ಅಂತರ ವಿರುದ್ದು ಗೂಂಡಾ ಮತ್ತು ಗಡಿಪಾರು ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾ ರಕ್ಷಣಾಧಿಕಾರಿ ಶಿವಾಂಶು ರಜಪೂತ್ ಅವರು ಎಚ್ಚರಿಸಿದರು.

  ನಂತರ ಕಳೆದ 10 ವರ್ಷಗಳಿಂದ ಯಾವುದೇ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗದೆ ಇರುವ ಹಾಗೂ ಘನ ನ್ಯಾಯಾಲಯಗಳಲ್ಲಿ ಯಾವುದೇ ಪ್ರಕರಣಗಳಲು ವಿಚಾರಣೆಯಲ್ಲಿ ಬಾಕಿ ಇರದ ಹಾಗೂ ಸಮಾಜದಲ್ಲಿ ಒಳ್ಳೆಯ ನಡೆತೆಯಿಂದ ಇರುವ ರೌಡಿಗಳ ವಿವರಗಳನ್ನು ಪೊಲೀಸ್ ಠಾಣೆಗಳಿಂದ ಪಡೆದಿದ್ದು, ಈ ಪೇರೆಡ್ ನಲ್ಲಿ ಒಟ್ಟು 187 ರೌಡಿ ಹಾಳೆಗಳನ್ನು ಪಟ್ಟಿ ಮಾಡಿದ್ದು ಇವರು ಕಳೆದ 10 ವರ್ಷಗಳಿಂದ ಯಾವುದೇ ಕಾನೂನು ಭಾಹಿರ ಕೃತ್ಯಗಳಲ್ಲಿ ಭಾಗಿಯಾದೆ ಒಳ್ಳೆಯ ಗುಣ ನಡತೆಯಿಂದ ಇರುವುದರಿಂದ ಇವರ ಬಳಿ ಮುಚ್ಚಳಿಕೆ ಬರೆಸಿಕೊಂಡು ಮುಂದಿನ ದಿನಗಳಲ್ಲಿ ಯಾವುದೇ ಕಾನೂನು ಭಾಹಿರ ಕೃತ್ಯಗಳಲ್ಲಿ ಭಾಗಿಯಾಗದೆ ಇರುವಂತೆ ಎಚ್ಚರಿಕೆ ನೀಡಿ ಮುಕ್ತಾಯ ಮಾಡಲು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲಾಗುವುದೆಂದು, ಮುಕ್ತಾಯದ ನಂತರ ಪುನಃ ಕಾನೂನು ಭಾಹಿರ ಕೃತ್ಯಗಳಲ್ಲಿ ಭಾಗಿಯಾದರೆ ಮತ್ತೆ ರೌಡಿ ಶೀಟ್ ತೆರೆಯುವುದರ ಜೊತೆಗೆ ಗಡಿಪಾರು ಮತ್ತು ಗೂಂಡಾ ಕಾಯ್ದೆಯಡಿ ಕಠಿಣ ಕ್ರಮ ಜರುಗಿಸಲಾಗುವುದು,  ರೌಡಿ ಪೇರೆಡ್‌ನಲ್ಲಿ ಗೈರು ಹಾಜರಾಗಿರುವ ರೌಡಿ ಆಸಾಮಿಗಳಿಗೆ ಮುಂದಿನ ದಿನಗಳಲ್ಲಿ ವೃತ್ತ ಕಛೇರಿಗಳಲ್ಲಿ ರೌಡಿ ಪೇರೆಡ್ ಹಮ್ಮಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದು, ರೌಡಿ ಪೇರೆಡ್ ಗೆ ಗೈರುಹಾಜರಾದಲ್ಲಿ ಅಂತರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದೆಂದು, ಹಾಗೆಯೇ ಸಾಮಾಜಿಕ ಮಾಧ್ಯಮ(ಸೋಷಿಯಲ್ ಮೀಡಿಯಾ)ಗಳಲ್ಲಿ ರೌಡಿ ವರ್ತನೆಗಳನ್ನು ತೋರಿಸುವ ರೀತಿಯಲ್ಲಿ ಪೋಸ್ಟ್ ಮತ್ತು ರೀಲ್ಸ್ ಮಾಡುವವರ ವಿರುದ್ದ ಸಹ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.

   ರೌಡಿ ಪೇರೆಡ್ ನಲ್ಲಿ ಪೊಲೀಸ್ ಇನ್ಸ್ಪೆಕ್ಟರ್‌ಗಳಾದ ಎಸ್.ಟಿ.ಮಾರ್ಕೊಂಡಯ್ಯ, ಪಿ.ಎಂ.ನವೀನ್, ದಯಾನಂದ್, ರಂಗಶಾಮಯ್ಯ, ಆರ್.ಪಿ.ಐ ಸೋಮಶೇಖರ್, ಪೊಲೀಸ್ ಸಬ್ ಇನ್ಸ್ಪೆಕ್ಟರ್‌ಗಳಾದ ಬಿ.ಮಂಜುನಾಥ, ಚಂದ್ರಶೇಖರ್, ಗುರುರಾಜ ಚಿಂತಕಲ್, ಸಂಗಮೇಶ್ ಕೋಲ್ಹಾರ್, ಕೃಷ್ಣಮೂರ್ತಿ, ರಾಜಣ್ಣ.ಎಸ್.ವಿ. ಎನ್.ಪಿ.ಸಿಂಗ್, ಲಕ್ಷಿö್ಮನಾರಾಯಣ, ಮಲಾ.ಜಿ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಚಿತ್ರಶಿರ್ಷಿಕೆ04ಕೆಜಿಎಫ್1: ರೌಡಿ ಪೇರೆಡ್‌ನಲ್ಲಿ ಎಸ್.ಪಿ ಶಿವಾಂಶು ರಜಪೂತ್, ಡಿ.ವೈ.ಎಸ್.ಪಿ ವಿ.ಲಕ್ಷö್ಮಯ್ಯ ಮತ್ತು ಅಧಿಕಾರಿ ಸಿಬ್ಬಂದಿವಯವರು.

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456