ಇಂಗಳಗೇರಿ ಗ್ರಾಮದಲ್ಲಿ ಶ್ರೀ ಗ್ರಾಮದೇವತೆಯ ಜಾತ್ರಾ ಮಹೋತ್ಸವ

May 15, 2025 - 16:27
 0  10
ಇಂಗಳಗೇರಿ ಗ್ರಾಮದಲ್ಲಿ ಶ್ರೀ ಗ್ರಾಮದೇವತೆಯ ಜಾತ್ರಾ ಮಹೋತ್ಸವ

ಮುದ್ದೇಬಿಹಾಳ: ತಾಲೂಕಿನ ಇಂಗಳಗೇರಿ ಗ್ರಾಮದಲ್ಲಿ ಶ್ರೀ ಗ್ರಾಮದೇವತೆಯ ಜಾತ್ರಾ ಮಹೋತ್ಸವವು ಮೇ 16 ರಿಂದ 20ರ ವರೆಗೆ ವಿವಿಧ ಕಾರ್ಯಕ್ರಮಗಳ ಜೋತೆಗೆ ಅದ್ದೂರಿಯಾಗಿ ನೇರವೇರುವುದು. ಮೇ 16 ಶುಕ್ರವಾರದಂದು ಬೆಳಿಗ್ಗೆ 6  ಗಂಟೆಗೆ ಗ್ರಾಮದೇವತೆಯನ್ನು ಗಂಗಸ್ಥಳಕ್ಕೆ ಕರೆದೊಯ್ಯುವುದು. ನಂತರ ಕರಡಿ ಮಜಲು, ಜೋಗತಿ ನೃತ್ಯ, ಗೊಂಬೆ ಕುಣಿತ, ಡೊಳ್ಳು ವಾಲಗದ ಜೋತೆಗೆ ಗ್ರಾಮದೇವತೆಯನ್ನು ಬರಮಾಡಿಕೊಂಡು ರಥವನ್ನೆರಿಸುವುದು. ನಂತರ ಉಡಿ ತುಂಬುವ ಕಾರ್ಯಕ್ರಮ ಇರುವುದು. ಮಧ್ಯಾಹ್ನ 2 ಗಂಟೆಗೆ ಸಕಲ ವಾದ್ಯ ವೈಭವಗಳೊಂದಿಗೆ  ದೇವಿಯನ್ನು ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗುವುದು. ಅಂದೇ ರಾತ್ರಿ 10 ಗಂಟೆಗೆ ಮುದ್ದೇಬಿಹಾಳದ ಇಂಚರ ಮೆಲೋಡಿಸ್ ತಂಡದಿಂದ ಹಾಸ್ಯ ರಸಮಂಜರಿ ಕಾರ್ಯಕ್ರಮ ಇರುವುದು.  ಮೇ 17 ಶನಿವಾರದಂದು ರಾತ್ರಿ 10 ಗಂಟೆಗೆ ಬಸವೇಶ್ವರ ನಾಟ್ಯ ಸಂಘ ಬಾಗೇವಾಡಿ ಅವರಿಂದ ಶ್ರೀ ರೇಣುಕಾ ಯಲ್ಲಮ್ಮ ಮಾಹಾತ್ಮೆ ಎಂಬ ಪೌರಾಣಿಕ ನಾಟಕ ಜರುಗುವುದು. ಮೇ 18 ರವಿವಾರದಂದು ಮುಂಜಾನೆ 9 ಗಂಟೆಗೆ ತೆರಬಂಡಿ ಸ್ಪರ್ಧೆ ಇರುವುದು. ಪ್ರಥಮ ಬಹುಮಾನ 25000, ದ್ವೀತಿಯ 15000, ತೃತೀಯ 10000 ರೂಪಾಯಿ ಬಹುಮಾನ ಇರುವುದು ಮತ್ತು ಸಂಜೆ 8 ಗಂಟೆಗೆ ಸ್ಥಳೀಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಮನರಂಜನೆ ಕಾರ್ಯಕ್ರಮ ಇರುವುದು. ಮೇ 19 ಸೋಮವಾರ ದಂದು ಮುಂಜಾನೆ 9 ಗಂಟೆಗೆ ಟ್ರ್ಯಾಕ್ಟರ್ ಹಿಂಬದಿಯ ಬಲ ಪ್ರದರ್ಶನ ಇರುವುದು. ಒಂದನೆಯ ಬಹುಮಾನ HF-100 ಬೈಕ್ ಎರಡನೇಯ 30000, ಮೂರನೆಯ 20000, ನಾಲ್ಕನೆಯ 10000 ರೂಪಾಯಿ ಬಹುಮಾನ ಇರುವುದು. ಮೇ 20 ಮಂಗಳವಾರದಂದು ಸಾಯಂಕಾಲ 5 ಗಂಟೆಗೆ ಗ್ರಾಮದೇವತೆಯನ್ನು ಡೊಳ್ಳು ವಾಲಗದೊಂದಿಗೆ ದೇವಿಯನ್ನು ಮೂಲ ಸ್ಥಳಕ್ಕೆ ಕರೆದೊಯ್ಯುವುದು. ಹಾಗೂ ಟ್ರ್ಯಾಕ್ಟರ್ ಹಿಂಬದಿಯ ಸ್ಪರ್ಧೆಗೆ ಸೂಚನೆಗಳು ಇರುವುದು ಎಂದು  
 ಕಮಿಟಿಯು ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆಗೆ ಸಂಪರ್ಕಿಸಿರಿ ಎಂದು ತಿಳಿಸಿದ್ದಾರೆ. 8105999965, 9663559552

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456