ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಸಿದ್ದ -ಪುರಸಭೆ ಅಧಿಕಾರಿಗಳಿಂದ ಸಕಲ ಸಿದ್ಧತೆ
ಬಾಗೇಪಲ್ಲಿ: ಶಾಸಕ ಎಸ್. ಎನ್. ಸುಬ್ಬಾರೆಡ್ಡಿ ಅವರ ಆಸಕ್ತಿಯಿಂದ ಪಟ್ಟಣದ ಡಿ ವಿ ಜಿ ಮುಖ್ಯ ರಸ್ತೆಯ ತಹಸೀಲ್ದಾರ್ ವಸತಿಗೃಹ ಆವರಣದಲ್ಲಿ ನಿರ್ಮಾಣವಾಗಿರುವ ಸುಸಜ್ಜಿತ ಇಂದಿರಾ ಕ್ಯಾಂಟೀನ್ ಆರಂಭಕ್ಕೆ ಎಲ್ಲ ಸಿದ್ಧತೆ ಪೂರ್ಣಗೊಂಡಿವೆ ಎಂದು ಪುರಸಭೆ ಮುಖ್ಯಧಿಕಾರಿ ಶ್ರೀನಿವಾಸ್ ತಿಳಿಸಿದ್ದಾರೆ.
ಪಟ್ಟಣದಲ್ಲಿ ಉದ್ಘಾನೆಗೆ ಸಿದ್ದವಾಗಿರುವ ಇಂದಿರಾ ಕ್ಯಾಂಟೀನ್ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡಿಸಿ ಮಾತನಾಡಿದ ಅವರು ಈ ಭಾಗದ ಶಾಸಕರು ಉದ್ಘಾಟಿಸುವ ಮೂಲಕ ಬಡ ಜನರ ಸೇವೆಗೆ ಸಮರ್ಪಿಸಲಾಗುವುದು ಎಂದರು. ಕ್ಯಾಂಟೀನ್ನಲ್ಲಿ ಬೆಳಗ್ಗೆ ಇಡ್ಲಿ, ಕೇಸರಿ ಬಾತ್, ಜೋಳದ ರೊಟ್ಟಿ, ತರಕಾರಿ, ಅನ್ನ ಹಾಗೂ ಸಾರು ಸೇರಿ ಇತರ ಅಡುಗೆಗಳು ಬೇಡಿಕೆಗೆ ಅನುಗುಣವಾಗಿ ಸಿಬ್ಬಂದಿ ತಯಾರಿಸಲಿದ್ದಾರೆ.
ಇಂದಿರಾ ಕ್ಯಾಂಟೀನ್ ಸುತ್ತಲಿನ ಪ್ರದೇಶದಲ್ಲಿ ಪ್ರತಿಯೊಬ್ಬರು ಸ್ವಚ್ಛತೆ ಕಾಪಾಡುವ ಮೂಲಕ ಕೂಲಿ ಕಾರ್ಮಿಕರು,ವಿದ್ಯಾರ್ಥಿನಿಯರು, ಮಹಿಳೆಯರು ಇಂದಿರಾ ಕ್ಯಾಂಟೀನ್ ಬಳಿ ತೆರಳಲು ಸಾಧ್ಯ. ಇಲ್ಲದ್ದಿದ್ದರೆ ಕ್ಯಾಂಟೀನ್ ಆಶಯಕ್ಕೆ ಹೊಡೆತ ಬೀಳಲಿದೆ. ಕ್ಯಾಂಟೀನ್ ಸುತ್ತಲಿನ ಪ್ರದೇಶ ಸ್ವಚ್ಛತೆಗೆ ಸಾರ್ವಜನಿಕರು ಕೈ ಜೋಡಿಸಬೇಕು ಎಂದರು.
ಈ ಸಂಧರ್ಭದಲ್ಲಿ ಪುರಸಭೆ ಅಧ್ಯಕ್ಷ ಶ್ರೀನಿವಾಸ್, ಸದಸ್ಯರಾದ ಶ್ರೀನಿವಾಸ್ ರೆಡ್ಡಿ, ನಂಜುಂಡಪ್ಪ, ಗಡ್ಡಮ್ ರಮೇಶ್, ಪುರಸಭೆ ಸಿಬ್ಬಂದಿಯಾದ ಆತಾವುಳ್ಳ, ಮುರಳಿ, ಕೃಷ್ಣಪ್ಪ, ಶಿವಪ್ಪ, ಪೀರ್, ಸೇರಿದಂತೆ ಮತ್ತಿತರರು ಇದ್ದರು..
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
