ಒತ್ತುವರಿ ತೆರವು ಕಾರ್ಯಾಚರಣೆ-ಸರ್ಕಾರಿ ಜಾಗವನ್ನು ವಶಕ್ಕೆ ಪಡೆದ ಕಂದಾಯ ಇಲಾಖೆ
ಬಾಗೇಪಲ್ಲಿ: ಕಸಭಾ ಹೋಬಳಿ ದೇವರಗುಡಿಪಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಂಡ್ಲಪಲ್ಲಿ ಸರ್ವೇ ನಂಬರ್ 13 ರಲ್ಲಿನ 1 ಎಕರೆ 6 ಗುಂಟೆ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ಇಂದು ತಹಶೀಲ್ದಾರ್ ನೇತೃತ್ವದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಸರ್ಕಾರಿ ಜಾಗವನ್ನು ಸ್ವಾಧೀನಕ್ಕೆ ಪಡೆಯಲಾಗಿದೆ ಎಂದು ತಹಸೀಲ್ದಾರ್ ಮನಿಷಾ ಮಹೇಶ್ ಪತ್ರಿ ತಿಳಿಸಿದ್ದಾರೆ.
ಪಟ್ಟಣದ ಹೊರವಲಯದ ಚಿಂತಾಮಣಿ ರಸ್ತೆ ಬಳಿ ಇರುವ ಗುಂಡ್ಲಪಲ್ಲಿ ಸರ್ವೇ ನಂಬರ್ 13 ರಲ್ಲಿ ಸುಮಾರು 3.ಎಕರೆ 20 ಗುಂಟೆ ಸರ್ಕಾರಿ ಜಾಗವಿದ್ದು ಅದರಲ್ಲಿ ಶಾರದಮ್ಮ ಎಂಬುವವರು 1 ಎಕರೆ 6 ಕುಂಟೆ ಜಾಗವನ್ನು ಒತ್ತುವರಿಯಾಗಿದ್ದು, ಒತ್ತುವರಿ ಜಾಗಕ್ಕೆ ಪೊಲೀಸರೊಂದಿಗೆ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಮನಿಷಾ ಮಹೇಶ್ ಪತ್ರಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು, ಈ ಜಾಗ ಸರ್ಕಾರದ್ದಾಗಿದ್ದು, ಹಲವು ವರ್ಷಗಳಿ 1.6 ಎಕರೆಯನ್ನು ಶಾರದಮ್ಮ ಕುಟುಂಬದವರು ಅತಿಕ್ರಮಿಸಿಕೊಂಡಿದ್ದರು.
ಈ ಕುರಿತು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಈ ಭೂಮಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ ಹಾಗು ಒಟ್ಟು 3 ಎಕರೆ 20 ಕುಂಟೆ ಜಾಗದ ಸುತ್ತ ಹದ್ದು ಬಸ್ತು ಮಾಡಿಸಿ ಸರ್ಕಾರದ ಜಾಗ ಎಂಬ ನಾಮಫಲಕ ಅಳವಡಿಸಲಾಗಿದೆ.ಎಂದ ಅವರು ಇದನ್ನು ಆಶ್ರಯಯೋಜನೆಯಡಿ ನಿವೇಶನರಹಿತ ಪಲಾನುಭವಿಗಳಿಗೆ ಶಾಸಕರ ಸೂಚನೆಯಂತೆ ನಿವೇಶನಗಳ ವಿತರಣೆಗೆ ಉಪಯೋಗಿಸಲಾಗುವುದು ಎಂದರು.
ಈ ಸಂಧರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕಳ್ಳಿಪಲ್ಲಿ ವೆಂಕಟೇಶ್, ಕೆ.ಡಿ.ಪಿ. ಸದಸ್ಯ ರಾಮಕೃಷ್ಣಹೆಗಡೆ ಕಂದಾಯ ನಿರೀಕ್ಷಿಕ ಪ್ರಶಾಂತ್,ಗ್ರಾಮ ಆಡಳಿತಧಿಕಾರಿ, ಸಂತೋಷ್, ಜಯರಾಮ್, ಗ್ರಾಮ ಸಹಾಯಕರಾದ ಲಕ್ಷ್ಮಣ, ಮಾರುತಿ, ತಾಲ್ಲೂಕು ಸರ್ವೇಯರ್ ನರಸಿಂಹ ಮೂರ್ತಿ, ಪೊಲೀಸ್ ಇಲಾಖೆ, ನಾರಾಯಣ ಸ್ವಾಮಿ, ಹನುಮಂತಪ್ಪ,ಬೈರೆಡ್ಡಿ, ಹರೀಶ್,ಸೇರಿದಂತೆ ಇತರೆ ಕಂದಾಯ ಇಲಾಖೆ ಸಿಬ್ಬಂದಿ ವರ್ಗದವರು ಇದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
