ಕಲಾಗ್ರಾಮದಲ್ಲಿ ಯಶಸ್ವಿ ನೃತ್ಯ ಪ್ರದರ್ಶನ 

Nov 12, 2025 - 12:56
 0  2
ಕಲಾಗ್ರಾಮದಲ್ಲಿ ಯಶಸ್ವಿ ನೃತ್ಯ ಪ್ರದರ್ಶನ 

  ಬೆಂಗಳೂರು: ನಗರದ ಹೆಸರಾಂತ ಭರತನಾಟ್ಯ ಸಂಸ್ಥೆಯಾದ ನೃತ್ಯ ದಿಶಾ ಟ್ರಸ್ಟಿನ ಗುರು ಡಾ|| ದರ್ಶಿನಿ ಮಂಜುನಾಥ್ ಅವರ ನಿರ್ದೇಶನದಲ್ಲಿ ಮಲ್ಲತ್ತಳ್ಳಿಯ ಕಲಾಮಂದಿರದ ವೇದಿಕೆಯಲ್ಲಿ 2025ರ ಸಾಲಿನ "ನೃತ್ಯ ನೀರಾಜನ" ಕಿರಿಯರ ನೃತ್ಯ ಉತ್ಸವ-2 
ಕಾರ್ಯಕ್ರಮ ಏರ್ಪಡಿಸಿತ್ತು.

ಡಾ|| ದರ್ಶಿನಿ ಮಂಜುನಾಥ್ ರವರ ಶಿಷ್ಯೆಯರಾದ ಕು|| ಅಮೂಲ್ಯ, ಕು|| ಧರಣಿ, ಕು|| ಮೌಲ್ಯ ಮತ್ತು ಕು|| ಶ್ರೀನಿಧಿ ಭರತನಾಟ್ಯ ಕಾರ್ಯಕ್ರಮ ನೀಡಿ ಪ್ರಸಂಶೆಗೆ ಪಾತ್ರರಾದರು.
ಮೊದಲಿಗೆ ವಿದುಷಿ ಭಾರತಿ ವೇಣುಗೋಪಾಲರವರ ರಚನೆಯ ಹಂಸಧ್ವನಿ ರಾಗದ "ಪುಷ್ಪಾಂಜಲಿ" ಇಂದ ಕಾರ್ಯಕ್ರಮ ಪ್ರಾರಂಭವಾಯಿತು. ಇದರೊಂದಿಗೆ ಆದಿ ಶಂಕರಾಚಾರ್ಯರ ವಿರಚಿತ ನಿರ್ಮಾಣ ಶತಕದ "ಅಜಂ ನಿರ್ವಿಕಲ್ಪಂ" ಶ್ಲೋಕ ನರ್ತಿಸಿದರು ಕಲಾವಿದೆಯರು. ಮುಂದೆ ಸಾಂಪ್ರದಾಯಿಕ ಚತುರಶ್ರ ಅಲರಿಪು, ಕಲ್ಯಾಣಿ ಜತಿಸ್ವರ ನರ್ತಿಸಿದರು. ಏಕವ್ಯಕ್ತಿ ಪ್ರದರ್ಶನದಲ್ಲಿ ಕು|| ಧರಿಣಿ- "ವಂದಿಸುವುದಾದಿಯಲಿ ಗಣನಾಥನ" ದೇವರನಾಮದಲ್ಲಿ ಆತ್ಮಲಿಂಗ ಕಥಾ ಪ್ರಸಂಗ ನರ್ತಿಸಿದಳು. ಕು|| ಮೌಲ್ಯ- "ಹರಿನಾರಾಯಣ"ದೇವರನಾಮದಲ್ಲಿ ಮನೋಹರವಾಗಿ ನಾರಸಿಂಹ ಅವತಾರ ಪ್ರದರ್ಶಿಸಿದಳು. ಕು|| ಶ್ರೀನಿಧಿ- ಮುತ್ತಯ್ಯ ಭಾಗವತರ ವಿರಚಿತ "ಸಾರಸಮುಖಿ"ಯಲ್ಲಿ ಚಾಮುಂಡೇಶ್ವರಿಯನ್ನು ಅದ್ಬುತವಾಗಿ ತೋರಿದಳು.

ಕು|| ಅಮೂಲ್ಯ-"ಕೃಷ್ಣ ಬಾರೋ ರಂಗ ಬಾರೋ"  ಎಂಬ ದೇವರನಾಮದಲ್ಲಿ  ಕೃಷ್ಣನ ತುಂಟಾಟಕ್ಕೆ ತಾಯಿ ವಾತ್ಸಲ್ಯವನ್ನು ಸುಂದರವಾಗಿ ನರ್ತಿಸಿದರು. 
ರಾಜ್ಯೋತ್ಸವದ ಸಂಭ್ರಮವನ್ನು ನಾಲ್ಕು ಕಲಾವಿದರು ಕರ್ನಾಟಕದ ಮೊದಲನೆಯ ಆಧುನಿಕ ಕರ್ನಾಟಕ ನಾಟಕ ಪಿತಾಮಹ ಎಂದು ಕರೆಸಿಕೊಳ್ಳುವ ಶಾಂತ ಕವಿ ವಿರಚಿತ "ರಕ್ಷಿಸು ಕರ್ನಾಟಕ ದೇವಿ ಮನೋಹರವಾಗಿ ನರ್ತಿಸಿದರು. ಕೊನೆಯಲ್ಲಿ "ಬೃಂದಾವನಿ ತಿಲ್ಲಾನ" ಹಾಗೂ ಪಂಚಭೂತಗಳನ್ನು ವಂದಿಸುವ "ಭೂಮಿ ಮಂಗಳಂ"ದೊಂದಿಗೆ ಕಾರ್ಯಕ್ರಮ ಸಂಪೂರ್ಣಗೊಳಿಸಿ ನೆರೆದಿದ್ದ ನೂರಾರು ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಯಿತು. ಗುರು. ಡಾ|| ದರ್ಶಿನಿ ಮಂಜುನಾಥ್ ರವರು ಎಲ್ಲಾ ನೃತ್ಯ ಸಂಯೋಜನೆಗೆ ಮೆಚ್ಚುಗೆ ವ್ಯಕ್ತವಾಯಿತು. ಒಟ್ಟಿನಲ್ಲಿ ನೃತ್ಯ ನೀರಾಜನ ಯಶಸ್ವಿ ಪ್ರದರ್ಶನ ಕಂಡಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456