ಕೆಜಿಎಫ್ ಕಮಿಟಿ ವತಿಯಿಂದ ಕಪ್ಪು ಪಟ್ಟಿ ಧರಿಸಿ ಕರಾಳ ದಿನಾಚರಣೆ ಆಚರಣೆ
ಕೆಜಿಎಫ್: ಬಿಜಿಎಂಎಲ್ ಚಿನ್ನದ ಗಣಿ ಮುಚ್ಚಿ 25 ವರ್ಷಗಳು ಕಳೆದಿದೆ ಇದುವರೆಗೂ ಕಾರ್ಮಿಕರ ಸಮಸ್ಯೆ ಬಗೆಹರಿದಿಲ್ಲ ಎಂದು ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರ ವಿರುದ್ಧ ಈ ದಿನವನ್ನು ಸೇವ್ ಕೆಜಿಎಫ್ ಕಮಿಟಿ ವತಿಯಿಂದ ಕಪ್ಪು ಪಟ್ಟಿ ಧರಿಸಿ ಕರಾಳ ದಿನಾಚರಣೆ ಆಚರಣೆ ಮಾಡಲಾಯಿತು ಮಾರಿಕೊಪ್ಪಮ್ ಹಲ್ಲಿಕಡೆಯಿಂದ ಪ್ರಾರಂಭಗೊಂಡ ಬೈಕ್ ರ್ಯಾಲಿ ನಗರದ ಮೈನಿಂಗ್ ಪ್ರದೇಶಗಳಲ್ಲಿ ಸಂಚರಿಸಿ ಫೈವ್ ಲೈಟ್. ವೃತ್ತದಲ್ಲಿರುವ ಕಾರ್ಮಿಕ ಮುಖಂಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಗಾಂಧಿ ಸರ್ಕಲ್ ನಲ್ಲಿ ನೂರಾರು ಕಾರ್ಯಕರ್ತರಿಂದ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಶಾಸಕ ಎಸ್ . ರಾಜೇಂದ್ರನ್. ಚಿನ್ನದ ಗಣಿ ಮುಚ್ಚಿ 25 ವರ್ಷಗಳು ಕಳೆದಿದೆ ಇದುವರೆಗೂ ನಮ್ಮ ಕಾರ್ಮಿಕರಿಗೆ ಯಾವುದೇ ಆಶ್ವಾಸನೆಗಳು ಈಡೇರಿಲ್ಲ. ಇದಕ್ಕೆ ಪ್ರಮುಖ ಕಾರಣ ನಾವು ಆಯ್ಕೆ ಮಾಡಿರುವ ಶಾಸಕರು. ಸಂಸದರು. ಈ ಹೋರಾಟವನ್ನು ನಾವು ಮಾಡುತ್ತಿರುವುದು ಮಾಜಿ ಕಾರ್ಮಿಕರ ಗೋಸ್ಕರ ಎಂದು ಹೇಳಿದರು.
ನಮ್ಮ ಮಣ್ಣಿನ ಮಕ್ಕಳನ್ನು ಬಿಟ್ಟು ವಲಿಸಿಗರನ್ನು ಶಾಸಕರನ್ನಾಗಿ ಆಯ್ಕೆ ಮಾಡಿರುವುದರಿಂದ ಸಮಸ್ಯೆಗಳು ಇನ್ನೂ ಜ್ವರಂತವಾಗಿದೆ . ನಮ್ಮ ನೆಲದ ಮಕ್ಕಳಿಗೋಸ್ಕರ ಈಗಲೂ ಕಾಲ ಮಿಂಚಿಲ್ಲ ಈ ನೆಲದಲ್ಲಿ ಹುಟ್ಟಿದವರನ್ನು ಆಯ್ಕೆ ಮಾಡಿ ಎಲ್ಲಾ ಸರಿ ಹೋಗುತ್ತೆ ಎಂದು ಹೇಳಿದರು.
ಕೆಜಿಎಫ್ ಸೇವ್ ಕಮಿಟಿ ಅಧ್ಯಕ್ಷ ಜ್ಯೋತಿಬಾಸು ಮಾತನಾಡಿ ಬಿಜಿಎಂಎಲ್ ಕಾರ್ಮಿಕರ ಸಮಸ್ಯೆ ಇನ್ನು ಬಗೆಹರಿದಿಲ್ಲ ಇದು ನಮ್ಮ ದುರಾದೃಷ್ಟ ಇದಕ್ಕೆ ಯಾರ ಹೂಣೆ ಎಂದರೆ ಜನಪ್ರತಿನಿಧಿಗಳು. ನಗರದಲ್ಲಿ ಒಳ್ಳೆಯ ಸಾರ್ವಜನಿಕ ಆಸ್ಪತ್ರೆ ಇಲ್ಲ. ಕಾರ್ಮಿಕರು ಅದೇ ಚಿಕ್ಕ ಮನೆಗಳಲ್ಲಿ ವಾಸವಾಗಿದ್ದಾರೆ. ಅವರ ಸ್ವತಂತ್ರವಾಗಿ ಬದುಕಲು ಆಗುತ್ತಿಲ್ಲ. ಗಣಿ ಕಾರ್ಮಿಕರ ಮಕ್ಕಳು ಡೈಲಿ ಟ್ರಾವೆಲ್ ಮಾಡುತ್ತಾರೆ. ಅದರಲ್ಲಿ ರೈಲುಗಳು ಸಮಯಕ್ಕೆ ಸರಿಯಾಗಿ ಬರುವುದಿಲ್ಲ ಈ ರೀತಿ ನಾನಾ ಸಮಸ್ಯೆಗಳು ನಮ್ಮ ತಾಲೂಕಿನಲ್ಲಿ ತಾಂಡವಾಡುತ್ತಿದೆ. ಶಾಸಕರು. ಅಭಿವೃದ್ಧಿ ಅಭಿವೃದ್ಧಿಯನ್ನುತ್ತಿದ್ದಾರೆ. ದುಡಿಯುವ ಕೈಗಳಿಗೆ ಉದ್ಯೋಗ ನೀಡಲಿ ಅದು ಬಿಟ್ಟು ನಮಗೆ ಲೈಟು ರಸ್ತೆ ಏನಕ್ಕೆ ಎಂದು ಪ್ರಶ್ನಿಸಿದರು. ಕೆಜಿಎಫ್ ಸೇವ್ ಕಮಿಟಿ ಈಗ ಹೋರಾಟಗಳನ್ನು ಪ್ರಾರಂಭ ಮಾಡುತ್ತಿದೆ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಹೋರಾಟಗಳನ್ನು ಮಾಡುತ್ತೇವೆ ಎಂದು ಎಚ್ಚರಿಸಿದರು.
ನಗರಸಭೆ ಮಾಜಿ ಅಧ್ಯಕ್ಷರು. ದಯಾಳನ್ ಮಾತನಾಡಿ ನಮ್ಮ ಮೈನಿಂಗ್ ಪ್ರದೇಶದಲ್ಲಿ ಹೆಣ್ಣು ಮಕ್ಕಳು ಹೀಗೂ ಸಹ ಬಯಲು ಶೌಚಾಲಯವನ್ನು ಅವಲಂಬಿಸಿಕೊಂಡಿದ್ದಾರೆ. ಒಲ್ಲೆಯ ಶೌಚಾಲಯ ವ್ಯವಸ್ಥೆ ಕಲ್ಪಿಸಿಲ್ಲ. ನಾವು ಯಾವ ಕಾಲದಲ್ಲಿ ವಾಸ ಮಾಡುತ್ತಿದ್ದೇವೆ ಎಂದು ನುಡಿದರು. ಕೆಜಿಎಫ್ ಸೇವ್ ಕಮಿಟಿ ಯಾವುದೇ ಪಕ್ಷದ ಪರವಾಗಿಲ್ಲಾ ಕೆಜಿಎಫ್ ಅನ್ನು ಉಳಿಸಲು ಅಭಿವೃದ್ಧಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಇದರಲ್ಲಿ ಎಲ್ಲಾ ಪಕ್ಷದ ಮುಖಂಡರು ಭಾಗವಹಿಸಿ ಬೆಂಬಲ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೋರಾಟಗಳನ್ನು ಪ್ರಾರಂಭ ಮಾಡುತ್ತೇವೆ ಎಂದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
